More

    ಶಿಗ್ಗಾಂವಿ ತಹಸೀಲ್ದಾರ್ ಕಚೇರಿ ಎದುರು ಕಾರ್ವಿುಕರ ಪ್ರತಿಭಟನೆ

    ಶಿಗ್ಗಾಂವಿ: ಪಟ್ಟಣದ ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತ ಕೃಷಿ ಕಾರ್ವಿುಕರ ಸಕ್ರಮಗೊಂಡ ಭೂಮಿಯ ಉತಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ತಹಸಿಲ್ದಾರ್ ಕಚೇರಿ ಎದುರು ಕೃಷಿ ಕಾರ್ವಿುಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಶಿಗ್ಗಾಂವಿ ವ್ಯಾಪ್ತಿಯ ಹೊರವಲಯದಲ್ಲಿರುವ ಜಮೀನು ರಿ.ಸ.ನಂ. 28 ರಲ್ಲಿ 17 ಎಕರೆ 24 ಗಂಟೆ ಜಮೀನನ್ನು ಪಟ್ಟಣದ ಅಂಬೇಡ್ಕರ್ ಓಣಿಯ ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತ ಕೃಷಿ ಕಾರ್ವಿುಕ 9 ಕುಟುಂಬಗಳು 44 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರ 1992-93ರಲ್ಲಿ ಅಕ್ರಮ ಸಕ್ರಮ ಆದೇಶದ ಅನ್ವಯ ಸಾಗುವಳಿ ಮಾಡುತ್ತ ಬಂದಿದ್ದ ಕಾರ್ವಿುಕರಿಗೆ ಎನ್.ಸಿ.ಆರ್/ಸಿ.ಆರ್ 30/91-92 ರ ಆದೇಶದನ್ವಯ ಸಾಗುವಳಿ ಮಾಡುತ್ತಿರುವವರಿಂದ ಅಕ್ರಮ ದಂಡದ ರೂಪದಲ್ಲಿ ಫೀ ಮೊತ್ತವನ್ನು ಪಾವತಿಸಿಕೊಂಡು ಸಕ್ರಮದ ಆದೇಶ ನೀಡಿದ್ದಾರೆ. ಆದರೆ, ಇಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳು ನಮಗೆ ಜಮೀನಿನ ಉತಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

    ಪ್ರಕಾಶ ಚನ್ನದಾಸರ ಮಾತನಾಡಿ, ಸುಮಾರು 44 ವರ್ಷಗಳಿಂದ ನಾವು ಈ ಜಮೀನನ್ನು ಸಾಗುವಳಿ ಮಾಡುತ್ತಿದ್ದೇವೆ. ನಮಗೆ ಸಾಗುವಳಿ ಪತ್ರ ಮತ್ತು ಆರ್.ಟಿ.ಸಿ. ಉತಾರ ನೀಡುವಲ್ಲಿ ಅಧಿಕಾರಿಗಳು ತಡ ಮಾಡುತ್ತಿದ್ದಾರೆ. ಸಾಗವಳಿದಾರರಲ್ಲದ ಕೆಲವರ ಹೆಸರನ್ನು ಅಕ್ರಮ ಸಕ್ರಮ ಪಟ್ಟಿಯಲ್ಲಿ ಸೇರಿಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ, ನಮಗೆ ನ್ಯಾಯ ಸಿಗುವವರಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.

    ಶಾಂತವ್ವ ಕಾಳೆ, ಕಮಲವ್ವ ದಾಸರ, ಚನ್ನಬಸಪ್ಪ ಕಾಳೆ, ಫಕೀರಪ್ಪ ಬನ್ನಿಮಟ್ಟಿ, ಶಂಕ್ರಪ್ಪ ಕಾಳೆ, ಫಕೀರಪ್ಪ ಹರಿಜನ ಸೇರಿದಂತೆ ಸಾಗುಳಿದಾರರು ಪಾಲ್ಗೊಂಡಿದ್ದರು.

    ಅಕ್ರಮ ಸಕ್ರಮ ಕಮಿಟಿಯಲ್ಲಿ ಈಗಾಗಲೇ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ವರದಿ ಬಂದ ನಂತರ ಸಾಗುವಳಿದಾರರಿಗೆ ಪಟ್ಟಾ ವಿತರಿಸುವಲಾಗುವುದು.

    | ರವಿ ಕೊರವರ ಉಪ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts