More

    ‘ಪ್ಲೀಸ್​ ನಮ್ಮನ್ನ ರಕ್ಷಿಸಿ..’ ಕಾಪು ಕಡಲ ತೀರದ ನಡುಗುಡ್ಡೆಯಲ್ಲಿ ಸಿಲುಕಿಕೊಂಡ ಕಾರ್ಮಿಕರ ಅಳಲಾಟ

    ಉಡುಪಿ: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಕರಾವಳಿ ಪ್ರದೇಶ ನಲುಗುಟ್ಟಿದೆ. ಕಾಪು ಕಡಲ ತೋರದ ನಡುಗಡ್ಡೆಯಲ್ಲಿ ಮಂಗಳೂರಿನ ಬೋಟ್ ಒಂದು ಸಿಕ್ಕಿಹಾಕಿಕೊಂಡಿದ್ದು, ಅದರಲ್ಲಿ ಒಂಬತ್ತು ಮಂದಿ ಕಾರ್ಮಿಕರು ಜೀವ ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿದ್ದಾರೆ.

    ಬೋಟಿನಲ್ಲಿರುವ ಒಂಬತ್ತು ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಆದರೆ ರಕ್ಷಣಾ ಕಾರ್ಯಾಚರಣೆ ಮಾಡಲು ವಾತಾವರಣ ತೊಡುಕಾಗಿದೆ. ಕಡಲಿನ ರೌದ್ರಾವತಾರದ ಮುಂದೆ ರಕ್ಷಣಾ ಸಿಬ್ಬಂದಿಗಳು ಅಸಹಾಯಕರಾಗಿ ನಿಂತಿದ್ದಾರೆ. ಕಾರ್ಮಿಕರ ಮ್ಯಾನೇಜರ್ ವೇಲು ಕಾಪು ಕಡಲ ತೀರದಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ.

    ಸಮುದ್ರದಲ್ಲಿ ಭಾರೀ ಅಲೆಗಳ ಅಬ್ಬರವಿದೆ. ಅದೇ ಕಾರಣಕ್ಕೆ ರಕ್ಷಣೆ ವಿಳಂಬವಾಗುತ್ತಿದೆ.ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ಕಾರ್ಮಿಕರ ರಕ್ಷಣೆ ಮಾಡಲು ಚಿಂತನೆ ನಡೆಸಲಾಗಿದೆ. ಕಾರವಾರ ನೌಕಾ ನೆಲೆಯಿಂದ ಚಾಪರ್​ಗಳನ್ನು ಕರೆಸಲು ಸಿದ್ದತೆಯೂ ಆಗಿದೆ. ಗಾಳಿಯ ವೇಗ ಕಡಿಮೆಯಾದಾಗ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದಾರೆ.

    ಉಡುಪಿ ಜಿಲ್ಲೆಯ ಕಾಪು ಕಡಲ ತೀರದಿಂದ‌ 15 ನಾಟೆಕಲ್ ಮೈಲ್ ದೂರದಲ್ಲಿರುವ ಕೋರಮಂಡಲ್ ಎಂಬ ಹೆಸರಿನ ಟಗ್​ ಬೋಟ್​ನಲ್ಲಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಶನಿವಾರದಂದು ಕಡಲ ಅಬ್ಬರಕ್ಕೆ ಸಿಲುಕಿ ಮಂಗಳೂರಿನಿಂದ ಈ ಬೋಟ್​ ನಾಪತ್ತೆಯಾಗಿತ್ತು. ಕಾರ್ಮಿಕರ ಜತೆಯಲ್ಲಿ ಕೋಸ್ಟ್ ಗಾರ್ಡ್ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಲಾಗಿದೆ.

    ಸ್ಥಳಕ್ಕೆ ಭೇಟಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಮತ್ತು ಶಾಸಕರ ಲಾಲಾಜಿ ಮೆಂಡನ್ ಪರಿಶೀಲನೆ ನಡೆಸಿದ್ದಾರೆ. ವಾತಾವರಣ ಕೊಂಚ ಸರಿಯಾದ ನಂತರ ಸೂಕ್ತ ಸಮಯದಲ್ಲಿ ಕಾರ್ಮಿಕರನ್ನು ರಕ್ಷಿಸುವುದಾಗಿ ತಿಳಿಸಲಾಗಿದೆ.

    ನಕಲಿ ಡಾಕ್ಟರ್​ಗಳಿಂದಾಗಿ ಊರಿನ ತುಂಬಾ ಹರಡಿದ ಕರೊನಾ! ಸಾವಿನ ಮನೆಯ ಕದ ತಟ್ಟುತ್ತಿರುವ ಗ್ರಾಮಸ್ಥರು

    ನಕಲಿ ಡಾಕ್ಟರ್​ಗಳಿಂದಾಗಿ ಊರಿನ ತುಂಬಾ ಹರಡಿದ ಕರೊನಾ! ಸಾವಿನ ಮನೆಯ ಕದ ತಟ್ಟುತ್ತಿರುವ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts