More

    ಅಂಚೆ ಕಚೇರಿಯಲ್ಲಿ ಕೆಲಸ ಸ್ಥಗಿತ

    ಯಳಂದೂರು: ಸಮೀಪದ ಹರದನಹಳ್ಳಿ ಗ್ರಾಮದ ಉಪ ಅಂಚೆ ಕಚೇರಿಯಲ್ಲಿ 2ದಿನಗಳಿಂದ ವಿದ್ಯುತ್ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಕಚೇರಿ ಕೆಲಸ ಕಾರ್ಯಗಳು ಸ್ಥಗಿತಗೊಂಡು ಜನಸಾಮಾನ್ಯರಿಗೆ ಸಮಸ್ಯೆಉಂಟಾಗಿದೆ.

    ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಉಪ ಅಂಚೆ ಕಚೇರಿಯು ಖಾಸಗಿ ವ್ಯಕ್ತಿಗೆ ಸೇರಿರುವ ಮನೆಯಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಸೆಸ್ಕ್ ಜೆಇ ಭೇಟಿ ನೀಡಿ ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಈ ಪರಿಣಾಮ ಎರಡು ದಿನಗಳಿಂದ ಅಂಚೆ ಕಚೇರಿಯ ಸೇವೆಗಳು ಸ್ಥಗಿತಗೊಂಡಿವೆ. ಈ ಕಚೇರಿ ವ್ಯಾಪ್ತಿಗೆ 13 ಗ್ರಾಮೀಣ ಅಂಚೆ ಕಚೇರಿ ಹಾಗೂ 43 ಗ್ರಾಮಗಳು ಒಳಪಡುತ್ತವೆ. ಪತ್ರ ಬಟವಾಡೆ, ಪಿಂಚಣಿ ಸೌಲಭ್ಯ, ಸುಕನ್ಯಾ ಸಮೃದ್ಧಿ, ಪರೀಕ್ಷಾ ಶುಲ್ಕ, ಸ್ಪೀಡ್ ಪೋಸ್ಟ್ ಸೇರಿದಂತೆ ಇತರ ಸೇವಾ ಕಾರ್ಯಗಳಲ್ಲಿ ತೊಡಕುಂಟಾಗಿದೆ.

    ಅಂಚೆ ಕಚೇರಿ ಕಳೆದ ಹಲವು ತಿಂಗಳಿಂದ ಎಲ್‌ಟಿ2 (ಗೃಹ ಉಪಯೋಗಿ) ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುತ್ತಿದೆ. ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿರುವುದರಿಂದ ಎಲ್‌ಟಿ3 (ವಾಣಿಜ್ಯ) ಉದ್ದೇಶದ ವ್ಯಾಪ್ತಿಗೆ ಸೇರಿರುವ ಕಾರಣ ಮನೆ ಮಾಲೀಕರಿಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಬದಲಾವಣೆ ಮಾಡಿಲ್ಲ. ಆದ್ದರಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ಸೆಸ್ಕ್ ಜೆಇ ವಸಂತ ಪತ್ರಿಕೆಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts