More

    ಹಿರಿಯೂರಿನ ಸಮಗ್ರ ಅಭಿವೃದ್ಧಿಯೇ ಧ್ಯೇಯ

    ಹಿರಿಯೂರು: ತಾಲೂಕಿನ ಸಮಗ್ರ ಅಭಿವೃದ್ಧಿ ಜತೆ ಜನಸ್ನೇಹಿ ಆಡಳಿತದ ಸಂಕಲ್ಪ ಮಾಡಲಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
    ಇಲ್ಲಿನ ನಾಗನಾಯ್ಕನ ಹಟ್ಟಿ-ವಿವಿ ಸಾಗರ ಬಲದಂಡೆ ನಾಲೆ ಬಳಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ನಗರದಲ್ಲಿ ಹಾದು ಹೋಗಿರುವ ವಿವಿ ಸಾಗರ ಎಡ-ಬಲ ದಂಡೆ ನಾಲೆ ಅಭಿವೃದ್ಧಿ, ಯುಜಿಡಿ, ವೇದಾವತಿ ನದಿ ಸ್ವಚ್ಛತೆ, ಗುಡಿಸಲು ಮುಕ್ತ ನಗರ, ಶುದ್ಧ ಕುಡಿವ ನೀರು, ಸುಂದರ ನಗರವನ್ನಾಗಿಸಲು ವಿಶೇಷ ಅನುದಾನ ನೀಡಲಾಗುವುದು ಎಂದರು.

    ಸುಳ್ಳು ಭರವಸೆಯಿಂದ ಜನರ ವಿಶ್ವಾಸ, ನಂಬಿಕೆಗಳಿಸಲು ಸಾಧ್ಯವಿಲ್ಲ. ತಾಲೂಕಿನಲ್ಲಿ ಎಲ್ಲ ಜನಾಂಗದವರನ್ನು ಪ್ರೀತಿ, ವಿಶ್ವಾಸದಿಂದ ಗೌರವಿಸಿ, ಕಾನೂನು-ಶಾಂತಿ ಸುವ್ಯವಸ್ಥೆ ಕಾಪಾಡಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ತಿಳಿಸಿದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಹಿರಿಯೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿ ಹೊರಹೊಮ್ಮಿರುವುದು ಕಾರ್ಯಕರ್ತರ ಪರಿಶ್ರಮ, ಪಕ್ಷ ನಿಷ್ಠೆ, ಸಚಿವರ ಸಮರ್ಥ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

    ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ, ಪಂಚ ಗ್ಯಾರಂಟಿ ಯಶಸ್ಸು, ಜಾತ್ಯತೀತ ತತ್ವ ಸಾಮಾಜಿಕ ನ್ಯಾಯದ ಕುರಿತು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ 13 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು, ಕಾಮಗಾರಿಗೆ ವೇಗ ನೀಡಿದ್ದರಿಂದ ಇಂದು ಭದ್ರೆ ವಿವಿ ಸಾಗರದ ಒಡಲು ಸೇರಿದೆ ಎಂದರು.

    ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಸದಸ್ಯರಾದ ಪ್ರಕಾಶ್, ಈರಲಿಂಗೇಗೌಡ, ವಿಠ್ಠಲ್ ಪಾಂಡುರಂಗ, ಮುಖಂಡರಾದ ಪುರಷೋತ್ತಮ್, ಕಲ್ಲಹಟ್ಟಿ ಹರೀಶ್, ಅಶೋಕ್, ಶಿವಕುಮಾರ್, ರವಿಚಂದ್ರನಾಯ್ಕ, ಟಿ.ಚಂದ್ರಶೇಖರ್, ಜಿ.ದಾದಾಪೀರ್, ಗೋಪಾಲ್, ಪಿಟ್ಲಾಲಿ ರವಿ, ಮಹಮ್ಮದ್ ಫಕ್ರುದ್ದೀನ್, ರಾಮಚಂದ್ರಪ್ಪ ಇತರರಿದ್ದರು.

    ಕರುನಾಡನ್ನು ಸರ್ವ ಜನಾಂಗದ ತೋಟವಾಗಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಂಕಣ ಬದ್ಧವಾಗಿದ್ದು, ಸರ್ವ ಸ್ಪರ್ಶಿ ಆಡಳಿತ ಸಂಕಲ್ಪದ ಜತೆ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿರುವುದು ದೇಶಕ್ಕೆ ಮಾದರಿಯಾಗಿದೆ. ಜನಪರ ಆಡಳಿತ-ಸಮಗ್ರ ಅಭಿವೃದ್ಧಿಯ ಸಂಕಲ್ಪ ಲೋಕಸಭೆ ಚುನಾವಣೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
    ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts