More

    ವರ್ಕ್ ಫ್ರಂ ಹೋಮ್ ಹೆಸರಲ್ಲಿ ವಂಚನೆ; ಲಕ್ಷ ಲಕ್ಷ ಹಣ ಕಳೆದುಕೊಂಡ ಉದ್ಯಮಿ

    ಶಿವಮೊಗ್ಗ: ಮನೆಯಲ್ಲೇ ಕುಳಿತು ದಿನಕ್ಕೆ 5 ಸಾವಿರ ರೂ. ಆದಾಯ ಗಳಿಸಬಹುದು ಎಂಬ ಆಫರ್ ಬಂದರೆ ಯಾರು ತಾನೆ ನಿರಾಕರಿಸುತ್ತಾರೆ. ವರ್ಕ್ ಫ್ರಂ ಹೋಮ್‌ನಡಿ ಪ್ರತಿದಿನ 5 ಸಾವಿರ ರೂ. ಗಳಿಸುವ ಕನಸುಕಂಡ ಉದ್ಯಮಿಯೊಬ್ಬ ಬರೋಬ್ಬರಿ 3.03 ಲಕ್ಷ ರೂ. ಕಳೆದುಕೊಂಡಿದ್ದಾನೆ.

    ಶಿವಮೊಗ್ಗ ಮೇದಾರ್ ಓಣಿಯ 38 ವರ್ಷದ ಉದ್ಯಮಿ ಲಕ್ಷಾಂತರ ರೂ. ಕಳೆದುಕೊಂಡವರು. ಜುಲೈ 3ರಂದು ಉದ್ಯಮಿ ಮೊಬೈಲ್‌ಗೆ ವರ್ಕ್ ಫ್ರಂ ಹೋಮ್ ಕೆಲಸಕ್ಕೆ ತಾವು ಆಯ್ಕೆಯಾಗಿದ್ದು, ಪ್ರತಿದಿನ 5 ಸಾವಿರ ರೂ. ಗಳಿಸಬಹುದು ಎಂಬ ಸಂದೇಶ ಮೊಬೈಲ್‌ಗೆ ಬಂದಿತ್ತು. ಇದನ್ನು ನೋಡಿ ಖುಷಿ ಪಟ್ಟ ಉದ್ಯಮಿ ಸ್ವಲ್ಪವೂ ಆಲೋಚಿಸದೇ ಲಿಂಕ್ ಕ್ಲಿಕ್ ಮಾಡಿದ್ದರು.

    ಅದಾದ ಬಳಿಕ ವಾಟ್ಸ್‌ಆ್ಯಪ್‌ಗೆ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಮತ್ತೊಂದು ಮೆಸೇಜ್ ಬಂದಿತ್ತು. ಟೆಲಿಗ್ರಾಂ ಖಾತೆಗೆ ಇನ್ನೊಂದು ಲಿಂಕ್ ಕಳುಹಿಸಿ ರೀಚಾರ್ಜ್, ವಿತ್‌ ಡ್ರಾ, ವೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ಶೇರ್ ಎಂಬ ಆಯ್ಕೆ ಬಂದಿತ್ತು. ಉದ್ಯಮಿ ರೀಚಾರ್ಜ್ ಆಯ್ದುಕೊಂಡಿದ್ದು 150 ರೂ. ರೀಚಾರ್ಜ್ ಕೂಡ ಮಾಡಿದ್ದರು. ಅದಾದ ಬಳಿಕ ವಿವಿಧ ಟಾಸ್ಕ್ ನೀಡಿ 98,850 ರೂ. ಹಣ ಹಾಕಿಸಿಕೊಂಡಿದ್ದರು. ಆನಂತರ 5.80 ಲಕ್ಷ ರೂ. ನಿಮ್ಮ ಖಾತೆಗೆ ಬಂದಿದೆ ಎಂಬ ಮೆಸೇಜ್ ಬಂದಿತ್ತು.

    ಅದನ್ನು ನಂಬಿ ಉದ್ಯಮಿ ಹಣ ವಿತ್‌ಡ್ರಾ ಮಾಡಿಕೊಳ್ಳಲು ಮುಂದಾದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಒಂದು ಲಕ್ಷ ರೂ. ಪಾವತಿಸುವಂತೆ ವಂಚಕರು ಹೇಳಿದ್ದರು. ಅನುಮಾನಗೊಂಡು ಸ್ನೇಹಿತರಿಗೆ ವಿಷಯ ತಿಳಿಸಿದ್ದು, ಆನ್‌ಲೈನ್‌ನಲ್ಲಿ ವರ್ಕ್ ಫ್ರಂ ಹೋಮ್ ಆಸೆ ತೋರಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಅಷ್ಟರೊಳಗೆ ಉದ್ಯಮಿ ಬ್ಯಾಂಕ್ ಖಾತೆಯಿಂದ 3,03 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿದ್ದು ಉದ್ಯಮಿ ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

    ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts