More

    ಕೆಲಸ ಮಾಡದಿದ್ದರೆ ಮನೆಗೆ ಹೋಗಿ: ಅಧಿಕಾರಿಗಳ ಕಾರ್ಯವೈಖರಿಗೆ ಮಂಜುನಾಥ್ ಗರಂ ಅಮಾನತು ಮಾಡುವ ಎಚ್ಚರಿಕೆ

    ಮಾಗಡಿ : ಪಟ್ಟಣದ ಪುರಸಭೆ ಕಚೇರಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕ ಎ. ಮಂಜುನಾಥ ಆಕ್ರೋಶ ವ್ಯಕ್ತಪಡಿಸಿ ಸಭೆ ಮುಂದೂಡಿದ ಘಟನೆ ನಡೆಯಿತು.
    ಕಂದಾಯ, ಕುಡಿಯುವ ನೀರು, ಒಳಚರಂಡಿ, ಕರ ವಸೂಲಿ, ಮಳಿಗೆ ಹರಾಜು, ತೆರವು ಕಾರ್ಯಾಚರಣೆ ಸೇರಿದಂತೆ ವಿವಿಧ ಕಾರ್ಯಗಳ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಕ್ರಮಕೈಗೊಂಡು ಸಮಸ್ಯೆಗಳನ್ನು ಬಗೆಹರಿಸಿ ತಿಂಗಳೊಳಗೆ ಸಭೆಗೆ ಮಾಹಿತಿ ನೀಡದಿದ್ದರೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂಬ ಖಡಕ್ ಎಚ್ಚರಿಕೆ ನೀಡಿದರು.
    ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಮುಖ್ಯಾಧಿಕಾರಿ ಉತ್ತರಿಸದೆ ತಡವರಿಸುತ್ತಿದ್ದುದನ್ನು ಕಂಡ ಶಾಸಕರು ಕೆಂಡಾಮಂಡಲರಾಗಿ ಸಭೆ ಮುಂದೂಡಿದರು.

    ನೌಕರರ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಅಭಿವೃದ್ಧಿ ಕಾರ್, ಸಮರ್ಪಕ ಆಡಳಿತ ನಡೆಯುತ್ತಿಲ್ಲ. ನಮಗೆ ಪಟ್ಟಣದ ಅಭಿವೃದ್ದಿ ಮುಖ್ಯ, ಬೇಜವಬ್ದಾರಿತನ, ಉಡಾಫೆ ಉತ್ತರ ಬೇಡ ಎಂದು ಆಕ್ರೋಶಗೊಂಡರು.
    ತಿಂಗಳೊಳಗೆ ಸಭೆ ಕರೆಯಲಾಗುವುದು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ಅಧಿಕಾರಿಗಳಿಗೆ ಯಾರ ಭಯವೂ ಇಲ್ಲ: ಕಾಂಗ್ರೆಸ್ ಸದಸ್ಯ ಪುರುಷೋತ್ತಮ್ ಮಾತನಾಡಿ, ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ. ಮಳಿಗೆಗಳ ಬಾಡಿಗೆ, ಒಳಚರಂಡಿ ಶುಲ್ಕ ಕಟ್ಟಿಸಿಕೊಂಡಿದ್ದರೆ ಕೋಟ್ಯಂತರ ಹಣ ಬರುತ್ತಿತ್ತು. ಇದರಿಂದ ವಾರ್ಡ್‌ಗಳ ಅಭಿವೃದ್ದಿ ಮಾಡಬಹುದಿತ್ತು, ಬೀದಿ ದೀಪ. ಪಾರ್ಕ್ ನಿರ್ವಹಣೆಗೆ ಟೆಂಡರ್ ಕರೆಯಲು ಹಣವಿಲ್ಲದಂತಾಗಿದೆ, ಅಭಿವೃದ್ದಿ ಇಲ್ಲದೆ ವಾರ್ಡ್‌ಗಳಿಗೆ ಭೇಟಿ ಆಗುತ್ತಿಲ್ಲ. ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ ಎಂದು ಆರೋಪಿಸಿದರು.

    ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್.ಮಂಜುನಾಥ್, ರಂಗಹನುಮಯ್ಯ, ರಿಯಾಜ್,ಶಿವಕುಮಾರ್, ನಾಗರತ್ನ, ಹೇಮಲತಾ, ಜಯರಾಮು, ರಾಮು, ರೇಖಾ, ಮುಖ್ಯಾಧಿಕಾರಿ ಎಂ.ಎನ್.ಮಹೇಶ್, ಇಂಜಿನಿಯರ್ ಸುಷ್ಮಾ, ಕುಸುಮ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts