More

    ಜೀವನಾನುಭವಗಳ ನುಡಿ ಮುತ್ತುಗಳೆ ವಚನಗಳು

    ವಿಜಯಪುರ: ಶರಣರ ಜೀವನಾನುಭವಗಳಿಂದ ಕೂಡಿದ ನುಡಿಮುತ್ತುಗಳೆ ವಚನಗಳೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಭಿಪ್ರಾಯಿಸಿದರು.

    ನಗರದ ಸ್ಟೇಶನ್ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕಸಾಪ ಹಾಗೂ ಅವ್ವಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿ. ನಿಂಗಮ್ಮ ಅಡಿವೆಪ್ಪ ಮುರಗಿ ದತ್ತಿ ಉಪನ್ಯಾಸ ಉದ್ಘಾಟಿಸಿದ ಅವರು ‘ಬಸವಣ್ಣನವರ ವಚನ ಸಾಹಿತ್ಯದ ಕೊಡುಗೆ’ ವಿಷಯದ ಕುರಿತು ಮಾತನಾಡಿದರು.

    ಶರಣರ ವಚನಗಳು ಸಮಾಜದ ಅಂಧಕಾರ, ಅನಿಷ್ಟ, ಭೇದ-ಭಾವಗಳನ್ನು ಹೋಗಲಾಡಿಸಿದವು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದವರು ವಚನಕಾರರು. ಸಮ ಸಮಾಜ ನಿರ್ಮಿಸುವಲ್ಲಿ ಶರಣರು ಯಶಸ್ವಿಯಾದರು. ಬದುಕಿನ ಮೌಲ್ಯ ಹೊಂದಿರುವ ವಚನಗಳು ಇಂದಿನ ಯುವಕರಿಗೆ ದಾರಿದೀಪವಾಗಿವೆ ಎಂದರು.

    ಚಡಚಣ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ ಮಾತನಾಡಿ, ಕನ್ನಡದ ಉಪನಿಷತ್ತು ಎಂದು ಕರೆಯಲ್ಪಡುವ ವಚನಗಳು ಮನುಷ್ಯನ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮತ್ತು ಸಮಾಜ ವರಿವರ್ತನೆಗೆ ನಾಂದಿಯಾದವು. ಜಾತಿ, ಮತ, ಪಂಥ, ಭಾಷೆ, ಲಿಂಗ ತಾರತಮ್ಯ ಹೊಗಲಾಡಿಸುವುದರ ಮೂಲಕ ಕಾಯಕ ಮತ್ತು ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ ಬಸವಣ್ಣನವರು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತುಕೊಂಡರು ಎಂದರು.

    ಉಪನ್ಯಾಸಕ ಸುಭಾಷಚಂದ್ರ ಕನ್ನೂರ ‘ಅವ್ವ’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ, ಅವ್ವ ಎಂದರೆ ಶಕ್ತಿ, ಪ್ರಕೃತಿ, ಸಂಸ್ಕೃತಿ, ವಾತ್ಸಲ್ಯ. ಕುಟುಂಬವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಸಮಾಜಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಅಪಾರ ಕೊಡುಗೆ ನೀಡಿದವಳು ಅವ್ವ. ಇಂತ ಅವ್ವನನ್ನು ದೇವರೆಂದು ಪೂಜಿಸುವ ಏಕೈಕ ರಾಷ್ಟ್ರ ಭಾರತ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಅವ್ವನನ್ನು ಗೌರವಿಸುವ, ಪ್ರೀತಿಸುವ ಧರ್ಮ ನಮ್ಮದಾಗಿದೆ ಎಂದರು.

    ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ರೂಪಾ ಮೇತ್ರಿ, ಶಾಂತಾ ಹಂಚನಾಳ, ವಿದ್ಯಾವತಿ ಅಂಕಲಗಿ, ರಾಜು ಅಂಗಡಿ ಮತ್ತಿತರರಿದ್ದರು. ಪಾರ್ವತಿ ಆಲಮೇಲ ಸ್ವಾಗತಿ ಪರಿಚಯಿಸಿದರು. ಶಿಕ್ಷಕ ಸುರೇಶ ಜತ್ತಿ ನಿರೂಪಿಸಿದರು. ರಾಜೇಸಾಬ ಶಿವನಗುತ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts