More

    ಈ ಕ್ಷೇತ್ರಕ್ಕೂ ಕಾಲಿಟ್ಟ ಮಹಿಳೆಯರು

    ಕಾರವಾರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೀನುಗಾರರ ಗುಂಪುಗಳು ಈಗಾಗಲೇ ನಡೆಸುತ್ತಿರುವ ತೇಲುವ ಪಂಜರದಲ್ಲಿ ಮೀನು ಸಾಕಾಣಿಕೆ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯರ್ ರಾಜ್ ಇಲಾಖೆಯ ಡೇ-ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಜಾರಿಗೆ ತರಲು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಂದಾಗಿದೆ.
    ಹೊನ್ನಾವರ ತಾಲ್ಲೂಕಿನ ಕಾಸರಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರ ಹಾಗೂ ಶರಾವತಿ ಸಂಗಮದ ಹಿನ್ನೀರಿನ ಪ್ರದೇಶದಲ್ಲಿ ಶ್ರೀನಿಧಿ ಸ್ವಸಹಾಯ ಸಂಘದ ಮಹಿಳೆಯರು ದೀನ ದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಡೇ-ಎನ್‌ಆರ್‌ಎಲ್‌ಎಂ) ಯೋಜನೆಯಡಿ 5 ಲಕ್ಷ ರೂ. ಸಹಾಯಧನ ಪಡೆದುಕೊಂಡು ತೇಲುವ ಪಂಜರದಲ್ಲಿ ಕುರುಡೆ ಮೀನು ಸಾಕಣೆ ಪ್ರಾರಂಭಿಸಿದ್ದಾರೆ.
    ಈಗಾಗಲೇ ಉಪ್ಪು ನೀರು ಹಾಗೂ ಸಿಹಿ ನೀರಿನ ಮಿಶ್ರಣವಿರುವ ಅಳಿವೆ ಪ್ರದೇಶದಲ್ಲಿ 1.25 ಲಕ್ಷ ರೂ. ವೆಚ್ಚದಲ್ಲಿ ತಂತಿಯ ಜಾಲರಿ, ಜಿಐ ಪೈಪ್, ಕಾಲಿ ಬ್ಯಾರೆಲ್ ಬಳಸಿದ 20 ಅಡಿ ಉದ್ದ, 10 ಅಡಿ ಅಗಲ ಹಾಗೂ 10 ಅಡಿ ಆಳದ ಪಂಜರವನ್ನು ನಿರ್ಮಿಸಲಾಗಿದೆ. ಪ್ರತಿ ಮರಿಗೆ 48 ರೂ.ನಂತೆ ಒಟ್ಟು 1.44 ಲಕ್ಷ ರೂ. ವೆಚ್ಚದಲ್ಲಿ 3 ಸಾವಿರ ಮರಿಗಳನ್ನು ಆಂದ್ರಪ್ರದೇಶದಿಂದ ತಂದು ಬಿಡಲಾಗಿದೆ.

    ಇದನ್ನೂ ಓದಿ:ಮೊಬೈಲ್​ನಲ್ಲಿ ಜಾಸ್ತಿ ಮಾತಾಡಬೇಡ ಎಂದಿದ್ದೇ ತಪ್ಪಾಯ್ತು…….

    ಮುಂದಿನ 12 ರಿಂದ 15 ತಿಂಗಳು ದಿನಕ್ಕೆ ಎರಡು ಬಾರಿ ಇವುಗಳಿಗೆ ಆಹಾರ ಹಾಕಿ ಬೆಳೆಸಬೇಕಿದೆ. ಅಂತಿಮವಾಗಿ ಹಲವು ಮೀನುಗಳು ವಿವಿಧ ಕಾರಣಗಳಿಂದ ಮೃತಪಟ್ಟರೂ ಉಳಿದ ಪ್ರತಿ ಮೀನು 2 ರಿಂದ 3 ಕೆಜಿ ತೂಗಲಿದೆ. ಪ್ರತಿ ಕೆಜಿ ಮೀನಿಗೆ 300 ರಿಂದ 350 ರೂ. ಬೆಲೆಯಿದ್ದು, ಅಂದಾಜು 10.50 ಲಕ್ಷ ರೂ. ಲಾಭವಾಗುವ ನಿರೀಕ್ಷೆಯಿದೆ. ಎಲ್ಲ ಖರ್ಚು ವೆಚ್ಚ ತೆಗೆದರೂ ಸುಮಾರು 4 ಲಕ್ಷ ರೂ.ನಿವ್ವಳ ಲಾಭವಾಗುವ ನಿರೀಕ್ಷೆ ಇದೆ.



    ಉತ್ತರ ಕನ್ನಡ ಜಿಲ್ಲೆಯು ಗೋವಾ ರಾಜ್ಯದ ಗಡಿಯೊಂದ ಹಿಡಿದು ಉಡಪಿ ಜಿಲ್ಲೆಯ ಗಡಿಯವರೆಗೂ ಕರಾವಳಿ ಪ್ರದೇಶ ಹೊಂದಿದ್ದು, ಮೀನು ಸಾಕಾಣಿಕೆಗೆ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಈಗಾಗಲೇ ಪುರುಷರ ಮುಂದಾಳತ್ವದಲ್ಲಿ ಮೀನು ಸಾಕಾಣಿಕೆಯು ಸಾಕಷ್ಟು ಕಡೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಸ್ವಸಹಾಯ ಸಂಘದ ಮಹಿಳೆಯರ ನೇತೃತ್ವದಲ್ಲಿ ಪಂಜರು ಕೃಷಿ ಕುರುಡಿ ಮೀನು ಸಾಕಣೆ ಚಟುವಟಿಕೆ ಪ್ರಾರಂಭಿಸಲಾಗಿದೆ. ಮೀನು ಸಾಕಣೆ ಅತ್ಯಂತ ಸುಲಭ ಹಾಗೂ ಲಾಭದಾಯಕವಾಗಿದ್ದು, ಪ್ರತಿಯೊಬ್ಬರೂ ಇಂತಹ ಸರಕಾರದ ಯೋಜನೆಗಳ ಲಾಭ ಪಡೆದುಕೊಂಡು ಆರ್ಥಿಕ ಹಾಗೂ ಸಾಮಾಜಿಕ ಸದೃಢತೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ.
    ಈಶ್ವರ ಕಾಂದೂ
    ಸಿಇಒ ಜಿಪಂ ಉತ್ತರ ಕನ್ನಡ

    ……..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts