More

    ಇಬ್ಬರು ಮಹಿಳೆಯರ ಮೃತದೇಹ ಪತ್ತೆ

    ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಕನೂರು ಹಳ್ಳದಲ್ಲಿ ಶನಿವಾರ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಪೈಕಿ ಇಬ್ಬರ ಮೃತದೇಹ ಇಂದು (ಭಾನುವಾರ) ಬೆಳಗ್ಗೆ ಪತ್ತೆಯಾಗಿವೆ.

    ಭುವನೇಶ್ವರಿ ಪೊಲೀಸ್ ಪಾಟೀಲ್ (40), ಗಿರಿಜಾ ಮಾಲಿಪಾಟೀಲ್ (40) ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕದಳ ಸಿಬ್ಬಂದಿ ಹಾಗು ಪೊಲೀಸರು ನಿನ್ನೆ ರಾತ್ರಿಯಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಶೋಧನೆ ಮುಂದುವರೆಸಿದ್ದಾರೆ. ಬೆಳಗಿನ ಜಾವದಿಂದ ಮಳೆ ಬಿಡುವು ಕೊಟ್ಟಿದ್ದು, ಹಳ್ಳದ ನೀರಿನ ಹರಿವು ಕ್ಷೀಣಿಸುತ್ತಿದೆ.

    ಶನಿವಾರ ಹತ್ತಿ ಜಿನ್ನಿಂಗ್ ಕಂಪನಿಗೆ ಕೆಲಸಕ್ಕೆ ತೆರಳಿದ್ದ ಮಹಿಳೆಯರು ಸಂಜೆ ವಾಪಸ್ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ನಾಪತ್ತೆಯಾದವರ ಪೈಕಿ ಪವಿತ್ರಾ ಪೊಲೀಸ್ ಪಾಟೀಲ್(45), ವೀಣಾ ಮಾಲಿಪಾಟೀಲ್(19) ಎಂಬುವವರು ಇನ್ನು ಸಿಕ್ಕಿಲ್ಲ.‌ ಮಹಿಳೆಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ‌. ವಿಧಿಯಾಟಕ್ಕೆ ನಾಲ್ವರು ಏಕ ಕಾಲಕ್ಕೆ ಬಲಿಯಾಗಿದ್ದಮ್ನು ಕಂಡು ಸಾರ್ವಜನಿಕರು ಮರುಗುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts