More

    ಶಾರ್ಜಾದಲ್ಲಿ ನಡೆಯಲಿದೆ ಮಹಿಳೆಯರ ಮಿನಿ-ಐಪಿಎಲ್?

    ಶಾರ್ಜಾ: ಈ ಬಾರಿ ಐಪಿಎಲ್ ಟೂರ್ನಿ ಯುಎಇಗೆ ಸ್ಥಳಾಂತರಗೊಂಡಿದ್ದರೂ, ಮಹಿಳೆಯರ ಮಿನಿ-ಐಪಿಎಲ್ ಟೂರ್ನಿಯೂ ಅದರ ಜತೆಯಲ್ಲೇ ನಡೆಯಲಿದೆ ಎಂದು ಬಿಸಿಸಿಐ ಮೊದಲೇ ಸ್ಪಷ್ಟಪಡಿಸಿತ್ತು. ಇದೀಗ ಮಹಿಳೆಯರ ಟೂರ್ನಿಯನ್ನು ಶಾರ್ಜಾದಲ್ಲಿ ಆಯೋಜಿಸಲು ಬಹುತೇಕ ನಿರ್ಧಾರ ಕೈಗೊಂಡಿದೆ.

    ಐಪಿಎಲ್ ಲೀಗ್ ಹಂತದ 12 ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿದ್ದು, ಸಿದ್ಧತೆಗಳನ್ನು ಪರಿಶೀಲಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. 2018ರ ಬಳಿಕ ಯಾವುದೇ ಟಿ20 ಪಂದ್ಯಗಳನ್ನು ಆಯೋಜಿಸದಿರುವ ಶಾರ್ಜಾ ಕ್ರೀಡಾಂಗಣ ಈಗ ನವೀಕರಣಗೊಂಡು ಹೊಸ ರೂಪದಲ್ಲಿ ಸಜ್ಜಾಗಿ ನಿಂತಿದೆ.

    ವುಮೆನ್ಸ್ ಟಿ20 ಚಾಲೆಂಜ್ ಹೆಸರಿನ ಮಹಿಳೆಯರ ಮಿನಿ-ಐಪಿಎಲ್‌ನಲ್ಲಿ ಈ ಬಾರಿಯೂ ಒಟ್ಟು 4 ಪಂದ್ಯಗಳು ನಡೆಯಲಿದ್ದು, 3 ತಂಡಗಳು ಆಡಲಿವೆ. ಕರೊನಾ ಹಾವಳಿ-ಲಾಕ್‌ಡೌನ್‌ನಿಂದಾಗಿ ಮಹಿಳಾ ಕ್ರಿಕೆಟಿಗರು ಕಳೆದ ಕೆಲ ತಿಂಗಳಿನಿಂದ ಅಭ್ಯಾಸವನ್ನೂ ನಡೆಸಿಲ್ಲ. ಹೀಗಾಗಿ ಅಕ್ಟೋಬರ್ 4ನೇ ವಾರದಲ್ಲಿ ಯುಎಇಗೆ ತೆರಳಲಿರುವ ಆಟಗಾರ್ತಿಯರು ಅಲ್ಲಿ ಕಿರು ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಐಪಿಎಲ್ ಪಂದ್ಯಗಳನ್ನು ಯಾವೆಲ್ಲ ಚಾನಲ್‌ಗಳಲ್ಲಿ ನೋಡಬಹುದು ಗೊತ್ತೇ?

    ಮಾರ್ಚ್‌ನಲ್ಲಿ ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತ ತಂಡದ ಆಟಗಾರ್ತಿಯರು ಯಾವುದೇ ಪಂದ್ಯ ಆಡಿಲ್ಲ. 6 ತಿಂಗಳ ಬಳಿಕ ಮರಳಿ ಕಣಕ್ಕಿಳಿಯುವಾಗ ಅವರಿಗೆ ಮ್ಯಾಚ್ ಫಿಟ್ನೆಸ್‌ಗಾಗಿ ಕೆಲಕಾಲ ಬೇಕಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 240ಕ್ಕೂ ಅಧಿಕ ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಶಾರ್ಜಾ ಕ್ರೀಡಾಂಗಣ, ವಿಶ್ವದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಯೋಜಿಸಿದ ಕ್ರಿಕೆಟ್ ಮೈದಾನವೆಂಬ ವಿಶ್ವದಾಖಲೆಯನ್ನೂ ಹೊಂದಿದೆ.

    ಮುಂಬೈ ಇಂಡಿಯನ್ಸ್ ತಂಡದಲ್ಲಿ ತೆಂಡುಲ್ಕರ್ ಪುತ್ರ ಅರ್ಜುನ್ ಏನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts