More

    VIDEO| ಪ್ರಧಾನಿ ಖಾತೆಯಲ್ಲಿ ನಾರಿಶಕ್ತಿಯ ಯಶೋಗಾಥೆ; ಮೋದಿ ಜಾಲತಾಣ ನಿರ್ವಹಿಸಿದ ಸಪ್ತ ಮಾತೃಕೆಯರು, ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

    ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಹಿಂದೆ ಹೇಳಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಣತಾಣದ ಖಾತೆಗಳನ್ನು ಸಾಧನೆಯಿಂದ ಸ್ಪೂರ್ತಿಯಾಗಬಲ್ಲ ಆಯ್ದ 7 ಮಹಿಳೆಯರಿಗೆ ಭಾನುವಾರ ಬಿಟ್ಟುಕೊಟ್ಟಿದ್ದರು.

    ಟ್ವಿಟ್ಟರ್ ಖಾತೆಯಿಂದ ಸೈನ್​ಔಟ್ ಆಗುವ ಮುಂಚೆ ವಿಶ್ವ ಮಹಿಳಾ ದಿನಾಚರಣೆ ಶುಭ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಾರತ ಎಲ್ಲ ಭಾಗಗಳಲ್ಲಿ ಅತ್ಯುತ್ತಮ ಮಹಿಳಾ ಸಾಧಕರನ್ನು ಹೊಂದಿದೆ. ಇವರೆಲ್ಲ ಹಲವು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹೋರಾಟ ಮತ್ತು ಆಕಾಂಕ್ಷೆ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ.

    ಅಂತಹ ಮಹಿಳೆಯರ ಸಾಧನೆಗಳನ್ನು ಆಚರಿಸಿ, ಅವರಿಂದ ಕಲಿಯುವುದನ್ನು ಮುಂದುವರಿಸೋಣ ಎಂದಿದ್ದರು. ನಂತರ ಮೋದಿ ಅವರ ಖಾತೆ ಮೂಲಕ ಮಹಿಳೆಯರು ತಮ್ಮ ಸಾಧನೆಯನ್ನು ಜಗತ್ತಿಗೆ ಸಾರಿದ್ದಾರೆ.

    15 ಜನರಿಗೆ ನಾರಿಶಕ್ತಿ ಪುರಸ್ಕಾರ

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಹಿಳೆಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಭಾನುವಾರ ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಿದರು. ವಾಯುಸೇನೆಯ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಆಯ್ಕೆಯಾಗಿರುವ ಮೋಹನ ಜೀತ್ವಾಲ್, ಅವನಿ ಚತುರ್ವೆದಿ ಮತ್ತು ಭಾವನಾ ಕಾಂತ್​ರಿಗೆ ನಾರಿಶಕ್ತಿ ಪುರಸ್ಕಾರ ಸಂದಿದೆ.

    ಚಂಡೀಗಢದ ಮನ್ನಾ ಕೌರ್, ತೆಲಂಗಾಣದ ಪದಾಲಾ ಭೂದೇವಿ, ದೆಹಲಿಯ ರಶ್ಮಿ, ಕೇರಳದ ಕಾರ್ತಿಯಾನಿ ಅಮ್ಮ ಮತ್ತು ಭಾಗಿರಥಿ ಅಮ್ಮ, ಜಾರ್ಖಂಡ್​ನ ಚಾಮಿ ಮುಮು, ನಿಲ್ಜಾ ವಾಂಗೊಮ್ ತಾಶಿ ಹಾಗೂ ನುಂಗ್ಶಿ ಮಲಿಕ್, ಕೌಶಿಕಿ ಚಕ್ರವರ್ತಿ ಹಾಗೂ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆ ನಿರ್ವಹಿಸಿದ ಆರಿಫಾ ಜಾನ್, ವೀಣಾ ದೇವಿ ಮತ್ತು ಕಲಾವತಿ ದೇವಿಗೆ ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಉಪಸ್ಥಿತರಿದ್ದರು.

    ಸ್ನೇಹಾ ಮೋಹನ್​ದಾಸ್

    ಸೂರಿಲ್ಲದ ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಒದಗಿಸಲು ಫುಡ್​ಬ್ಯಾಂಕ್ ಆಫ್ ಇಂಡಿಯಾ ಎಂಬ ಅಭಿಯಾನ ನಡೆಸುತ್ತಿರುವ ಚೆನ್ನೈ ಮೂಲದ ಸ್ನೇಹಾ ಮೋಹನ್​ದಾಸ್, ‘ಮನೆ ಇಲ್ಲದವರಿಗೆ ಆಹಾರ ನೀಡುವ ಅಭ್ಯಾಸ ರೂಢಿ ಮಾಡಿಸಿದ ನನ್ನ ತಾಯಿ ನನಗೆ ಸ್ಪೂರ್ತಿ. ಇದಕ್ಕಾಗಿಯೇ ಫುಡ್​ಬ್ಯಾಂಕ್ ಇಂಡಿಯಾ ಮೂಲಕ ಬಡವರ ಹಸಿವನ್ನು ಹೋಗಲಾಡಿಸಲು ನನ್ನಂತಹ ಅನೇಕ ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಲು ಎಲ್ಲ ನಾಗರಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ನನ್ನೊಂದಿಗೆ ಕೈಜೋಡಿಸಿ’ ಎಂದು ಕರೆ ನೀಡಿದ್ದಾರೆ.

    ಮಾಳವಿಕಾ ಅಯ್ಯರ್

    ತಮಿಳುನಾಡಿನ ಕುಂಭಕೋಣಂ ಮೂಲದ ಮಾಳವಿಕಾ ಅಯ್ಯರ್ 13ನೇ ವಯಸ್ಸಿನಲ್ಲೇ ಬಾಂಬ್ ಸ್ಪೋಟದಿಂದ ಎರಡೂ ಕೈಗಳನ್ನು ಕಳೆದುಕೊಂಡವರು. ಛಲ ಬಿಡದೆ ಪಿಎಚ್.ಡಿ ಪದವಿ ಪಡೆದು ಸಾವಿರಾರು ಅಂಗವಿಕಲರಿಗೆ ಸ್ಪೂರ್ತಿಯಾಗಿದ್ದಾರೆ. ‘ನಿಮ್ಮ ಮಿತಿಗಳನ್ನು ಮರೆತು ನಂಬಿಕೆ ಮತ್ತು ಭರವಸೆಯೊಂದಿಗೆ ಜಗತ್ತಿನಲ್ಲಿ ಹೆಜ್ಜೆ ಹಾಕಬೇಕು. ಬದಲಾವಣೆಗೆ ಶಿಕ್ಷಣ ಅನಿವಾರ್ಯ ಎಂದು ನಂಬಿದ್ದೇನೆ. ಅಂಗವಿಕಲರನ್ನು ದುರ್ಬಲರು ಅಥವಾ ಇತರರ ಮೇಲೆ ಅವಲಂಬಿತರು ಎಂದು ತೋರಿಸುವ ಬದಲು ನಾವು ಅವರನ್ನು ಮಾದರಿಯಾಗಿ ತೋರಿಸಬೇಕು’ ಎಂದಿದ್ದಾರೆ.

    ಆರಿಫಾ ಜಾನ್

    ಜಮ್ಮು-ಕಾಶ್ಮೀರ ಮೂಲದ ಆರಿಫಾ ಸ್ಥಳೀಯ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಾಧನ ವಾಗಿ ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಸಾಕಷ್ಟು ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯ ಮಾಡಿದ್ದಾರೆ. ‘ಸಂಪ್ರದಾಯ ಮತ್ತು ಆಧುನಿಕತೆ ಒಟ್ಟಾದಾಗ ಅದ್ಭುತಗಳು ಸಂಭವಿಸುತ್ತವೆ. ಇದನ್ನೇ ನಾನು ಕೆಲಸದಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದು ಆರಿಫಾ ಜೀವನಗಾಥೆ ಹಂಚಿಕೊಂಡಿದ್ದಾರೆ.

    ಕಲ್ಪನಾ ರಮೇಶ್

    ಹೈದರಾಬಾದ್ ಮೂಲದ ಕಲ್ಪನಾ ರಮೇಶ್ ತೀವ್ರ ನೀರಿನ ಅಭಾವ ಸಮಸ್ಯೆ ಎದುರಿಸುವ ಹೈದರಾಬಾದ್​ನಲ್ಲಿ ಮಳೆ ನೀರು ಕೊಯ್ಲು, ಕೆರೆಗಳ ಸಂರಕ್ಷಣೆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ‘ಸಣ್ಣ ಪ್ರಯತ್ನಗಳು ದೊಡ್ಡ ಪರಿಣಾಮ ಬೀರುತ್ತವೆ. ನೀರು ಅಮೂಲ್ಯ ವಸ್ತು. ಭವಿಷ್ಯದ ಪೀಳಿಗೆಗೆ ಅದರಿಂದ ವಂಚಿತರಾಗಲು ಬಿಡಬೇಡಿ. ನೀರನ್ನು ಜವಾಬ್ದಾರಿಯುತವಾಗಿ ಬಳಸಿ, ಮಳೆನೀರು ಕೊಯ್ಲು ಮಾಡಿ, ಜತೆಗೆ ಬಳಸಿದ ನೀರನ್ನು ಮರುಬಳಕೆ ಮಾಡಿ’ ಎಂದು ಬರೆದುಕೊಂಡಿದ್ದಾರೆ.

    ವಿಜಯಾ ಪವಾರ್

    ಮಹಾರಾಷ್ಟ್ರದ ಬಂಜಾರ ಸಮುದಾಯದ ವಿಜಯಾ ಪವಾರ್ ಕಳೆದೆರಡು ದಶಕಗಳಿಂದ ಗೋರ್ಮತಿ ಕಸೂತಿ ಕಲೆ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಗಾರ್ವೆಂಟ್​ವೊಂದನ್ನೂ ಪ್ರಾರಂಭಿಸಿರುವ ವಿಜಯಾ, ನೂರಾರು ಮಹಿಳೆಯರನ್ನೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ‘ಪ್ರಧಾನಿ ನಮ್ಮನ್ನು ಪೋ›ತ್ಸಾಹಿಸುವುದರ ಜತೆಗೆ ಗೋರ್ಮತಿ ಕಲೆ ಉಳಿಸಲು ಆರ್ಥಿಕ ಸಹಾಯ ಮಾಡಿದರು. ಈ ಕಲೆ ಸಂರಕ್ಷಣೆಗಾಗಿ ಸಂಪೂರ್ಣ ಅರ್ಪಿಸಿಕೊಂಡಿದ್ದೇನೆ’ ಎಂದಿದ್ದಾರೆ.

    ಕಲಾವತಿ ದೇವಿ

    ಉತ್ತರಪ್ರದೇಶ ಕಾನ್ಪುರದ ಕಲಾವತಿ ದೇವಿ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ಶತಪ್ರಯತ್ನ ನಡೆಸುತ್ತಿದ್ದು, ಅದರ ಫಲವಾಗಿ ಸುಮಾರು 4 ಸಾವಿರ ಶೌಚಗೃಹಗಳನ್ನು ಕಟ್ಟಿದ್ದಾರೆ. ಶಾಲೆ ಮೆಟ್ಟಿಲು ಹತ್ತದ ಕಲಾವತಿ, ತಾವು ವಾಸಿಸುತ್ತಿದ್ದ ಪ್ರದೇಶದ ಸುತ್ತ ಇದ್ದ ಕೊಳಚೆ ಪ್ರದೇಶದಿಂದ ಬೇಸತ್ತು ಮನೆ ಮನೆಗೆ ತೆರಳಿ ಶೌಚಗೃಹದ ಅವಶ್ಯಕತೆ ಬಗ್ಗೆ ಅರಿವು ಮೂಡಿಸುತ್ತಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, ‘ಸ್ವಚ್ಛತೆ ತರುವ ನಿಟ್ಟಿನಲ್ಲಿ ಎಲ್ಲ ಕಡೆ ಓಡಾಡಿ ಹಣ ಜೋಡಿಸಿ ನಾನು ಶೌಚಗೃಹಗಳ ನಿರ್ಮಾಣ ಪ್ರಾರಂಭಿಸಿದೆ’ ಎಂದಿದ್ದಾರೆ.

    ವೀಣಾ ದೇವಿ

    ಪಟನಾದ ಮುಗೇರ್​ನ ವೀಣಾ ದೇವಿ, ಅಣಬೆ ಮಹಿಳೆ ಎಂದೇ ಖ್ಯಾತಿವೆತ್ತವರು. ಮನೆಯಲ್ಲಿ ಚಿಕ್ಕದಾಗಿ ಅಣಬೆ ಬೆಳೆಯಲು ಆರಂಭಿಸಿದ ವೀಣಾ, ಈಗ ಅದರಿಂದಲೇ ಬದುಕು ಕಟ್ಟಿಕೊಂಡು ಇತರ ಮಹಿಳೆಯರಿಗೂ ಬೆಂಬಲ ನೀಡುತ್ತಿದ್ದಾರೆ. ‘ಇಚ್ಛಾಶಕ್ತಿಯಿಂದ ಎಲ್ಲವನ್ನೂ ಈಡೇರಿಸಬಹುದು. ಮಂಚದ ಕೆಳಗೆ 1 ಕೆಜಿ ಅಣಬೆ ಬೆಳೆದ ನಾನು ಈಗ ಅದರಿಂದಲೇ ಜೀವನ ನಡೆಸುವಷ್ಟು ದೊಡ್ಡಮಟ್ಟದಲ್ಲಿ ವ್ಯವಹರಿಸುತ್ತಿದ್ದೇನೆ. ಗ್ರಾಮದ ಸರ್​ಪಂಚ್ ಕೂಡ ಆಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

    ಮೋದಿಯವರ ಟ್ವಿಟರ್​ ಮೂಲಕ ಹೋರಾಟದ ಬದುಕನ್ನು ತೆರೆದಿಟ್ಟ ಮಾಳವಿಕಾ ಅಯ್ಯರ್​..! 13ನೇ ವಯಸ್ಸಿನಿಂದ ಇವರಿಟ್ಟ ಹೆಜ್ಜೆಗಳೆಲ್ಲ ಸಾಧನೆಗೆ ಮೆಟ್ಟಿಲುಗಳು…

    ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆಯ ‘ಪಾಸ್​ವರ್ಡ್​’ ಬಹಿರಂಗ ಪಡಿಸಿದ ಸಾಧಕ ಮಹಿಳೆ ಸ್ನೇಹಾ ಮೋಹನ್​ ದಾಸ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts