More

    ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವಿದ್ಯಾರ್ಥಿನಿ; ಮಾ.8ರಂದು ಕಾರ್ಯನಿರ್ವಹಿಸಲಿರುವ ಈಕೆಯ ವಿಶೇಷತೆ ಇಲ್ಲಿದೆ

    ಮುಂಬೈ: ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಈ ಐತಿಹಾಸಿಕ ದಿನಾಚರಣೆ ಮೊದಲು ಆರಂಭಗೊಂಡಿದ್ದು ಉತ್ತರ ಅಮೆರಿಕ ಮತ್ತು ಯೂರೋಪ್​ನ ಭಾಗಗಳಲ್ಲಿ. ಇದು ಶುರುವಾಗಿದ್ದು ಮಹಿಳಾ ಕಾರ್ಮಿಕರ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಲು.

    ಆದರೆ, ಈಗ ವಿಶ್ವದ ಅನೇಕ ದೇಶಗಳಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನಕ್ಕೆ ಕೆಲ ದೇಶಗಳು ರಾಷ್ಟ್ರಿಯ ರಜೆಯನ್ನೂ ಘೋಷಿಸಿವೆ.

    ಭಾರತದಲ್ಲೂ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು, ವಿವಿಧ ಸಂಘಟನೆಗಳು ವಿವಿಧ ರೀತಿಯ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತವೆ. ಇನ್ನು ಮಹಾರಾಷ್ಟ್ರದಲ್ಲಿ ಈ ಬಾರಿ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ.

    ಮಹಾರಾಷ್ಟ್ರ ರಾಜ್ಯದ ಬುಲ್ದಾನ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವುದು ಅಲ್ಲಿನ ಜಿಲ್ಲಾಧಿಕಾರಿ ಸುಮನ್​ ರಾವತ್​ ಚಂದ್ರ ಅವರು.

    ಅಂದು ಬುಲ್ದಾನ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯೊಬ್ಬರು ಕಾರ್ಯ ನಿರ್ವಹಿಸಲಿದ್ದಾರೆ. ಹೌದು ಇದನ್ನು ಅಲ್ಲಿನ ಜಿಲ್ಲಾಧಿಕಾರಿ ಸುಮನ್​ ರಾವತ್​ ಅವರು ಟ್ವೀಟ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಅಂದು ಹಾಗೆ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿರುವವರು ಅಲ್ಲಿನ ಜಿಲ್ಲಾ ಪರಿಷತ್​ ನಡೆಸುವ ಶಾಲೆಯ ವಿದ್ಯಾರ್ಥಿನಿ ಪೂನಮ್​ ದೇಶಮುಖ್.

    ಹೀಗೆ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಲು ಹಲವು ವಿದ್ಯಾರ್ಥಿನಿಯರಲ್ಲಿ ಆಯ್ಕೆಯಾಗಿದ್ದು ಪೂನಮ್​. ಹೀಗೆ ಆಯ್ಕೆಯಾದ ಕೆಲ ವಿದ್ಯಾರ್ಥಿನಿಯರಿಗೆ ವಾರದವರೆಗೆ ಅವಕಾಶ ನೀಡಲಾಗುತ್ತದೆ. ಆದರೆ ಮಹಿಳಾ ದಿನಾಚರಣೆಯಂದು ಪೂನಮ್​ಗೆ ಈ ಅವಕಾಶ ದೊರೆತಿದೆ.

    ಈ ಟ್ವೀಟ್​ಗೆ ಹಲವು ಜನರು ಪ್ರತಿಕ್ರಿಯಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಯೋಚನೆಯಿಂದ ಹಲವು ಮಹಿಳೆಯರಿಗೆ ಸ್ಫೂರ್ತಿ ದೊರೆಯಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts