More

    ಮಹಿಳಾ ಟಿ20 ಚಾಲೆಂಜ್: ಸೂಪರ್‌ನೋವಾಸ್ ತಂಡವನ್ನು ಮಣಿಸಿ ಶುಭಾರಂಭ ಕಂಡ ವೆಲಾಸಿಟಿ

    ಶಾರ್ಜಾ: ಸುನ್ ಲುಸ್ (37*ರನ್, 21 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಸುಷ್ಮಾ ವರ್ಮ (34 ರನ್, 33 ಎಸೆತ, 2 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ವೆಲಾಸಿಟಿ ತಂಡ ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ, ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಅಂತಿಮ ಓವರ್‌ನಲ್ಲಿ ವೆಲಾಸಿಟಿ ಗೆಲುವಿಗೆ ಅವಶ್ಯಕತೆ ಇದ್ದ 9 ರನ್ ಕಸಿಯಲು ಲುಸ್ ಹಾಗೂ ಶಿಖಾ ಪಾಂಡೆ ಯಶಸ್ವಿಯಾದರು.
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂಪರ್‌ನೋವಾಸ್ ತಂಡ ಚಾಮರಿ ಅಟಪಟ್ಟು (44 ರನ್, 39 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (31 ರನ್, 27 ಎಸೆತ, 1 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗೆ 126 ರನ್ ದಾಖಲಿಸಿತು. ಪ್ರತಿಯಾಗಿ ವೆಲಾಸಿಟಿ ತಂಡ ಆರಂಭಿಕ ವೈಫಲ್ಯದ ನಡುವೆಯೂ ಕನ್ನಡತಿ ವೇದಾ ಕೃಷ್ಣಮೂರ್ತಿ (29 ರನ್, 28 ಎಸೆತ, 4 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಹಾಗೂ ಸುಷ್ಮಾ ವರ್ಮ-ಲುಸ್ ಜೋಡಿ 5ನೇ ವಿಕೆಟ್‌ಗೆ 51 ರನ್ ಗಳಿಸಿದ ಫಲವಾಗಿ 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 129 ರನ್‌ಗಳಿಸಿ ಜಯದ ನಗೆ ಬೀರಿತು.

    ಸೂಪರ್‌ನೋವಾಸ್: 8 ವಿಕೆಟ್‌ಗೆ 126 (ಚಾಮರಿ ಅಟಪಟ್ಟು 44, ಹರ್ಮಾನ್‌ಪ್ರೀತ್ ಕೌರ್ 31, ಶಶಿಕಲಾ ಸಿರಿವರ್ಧನೆ 18, ಪ್ರಿಯಾ ಪೂನಿಯಾ 11, ಏಕ್ತಾ ಬಿಷ್ಟ್ 22ಕ್ಕೆ 3, ಜಹಾನರಾ ಅಲಂ 27ಕ್ಕೆ 2, ಕ್ಯಾಸ್ಪರೆಕ್ 23ಕ್ಕೆ 2). ವೆಲಾಸಿಟಿ: 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 129 (ವೇದಾ ಕೃಷ್ಣಮೂರ್ತಿ 29, ಸುಷ್ಮಾ 34, ಸುನ್ ಲುಸ್ 37*, ಅಯಾಬಾಂಗ ಖಾಕ 27ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts