More

    ಗದಗ: ನಿವೇಶನ ಮತ್ತು ಹಕ್ಕು ಪತ್ರ ಹಂಚಿಕೆಗೆ ಆಗ್ರಹಿಸಿ ಧರಣಿ

    ಕಳೆದ 2018 ಮತ್ತು 2022 ರಲ್ಲಿ ಆಯ್ಕೆಯಾದ ನಿವೇಶನ ರಹಿತರಿಗೆ ನಿವೇಶನ ಮತ್ತು ಹಕ್ಕು ಪತ್ರಕ್ಕೆ ಆಗ್ರಹಿಸಿ ಪಲಾನುಭವಿಗಳು ಗದಗ ತಾಲೂಕಿನ ಲಕ್ಕುಂಡಿ ಗ್ರಾಪಂ ಎದುರು ಕಳೆದ ಎರಡು ದಿನದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
    ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿಕೊಂಡಿರುವ ನಾಗಮ್ಮ ಹಾಲಿನವರ ಮಾತನಾಡಿ, ಗ್ರಾಮ ಸಭೆಯಲ್ಲಿ 172 ಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ$್ಯ ಹಾಗೂ ವಿಳಂಬ ನೀತಿಯಿಂದ ಇಲ್ಲಿಯವರೆಗೂ ಹಕ್ಕು ಪತ್ರ ನೀಡದೇ ಬಡವರನ್ನು ಸತಾಹಿಸುತ್ತಿದ್ದಾರೆ. 2018 ರಿಂದ ಹತ್ತಾರು ಭಾರಿ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ಕೇವಲ ಭರವಸೆ ನೀಡುತ್ತಾ ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಬಡವರಿಗೆ ಸೂರು ನೀಡುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ. ಕಳೆದ ೆ.4 ರಂದು ಪಂಚಾಯತಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಾಗ ತಾಪಂ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದರು. ಬೆಂಗಳೂರು ರಾಜೀವ ಗಾಂಧಿ ವಸತಿ ನಿಗಮದಲ್ಲಿ ಹಕ್ಕು ಪತ್ರದ ಕಾರ್ಯಗಳು ನಡೆಯುತ್ತಿವೆ. ೆ 24 ರೊಳಗಾಗಿ ಹಕ್ಕು ಪತ್ರ ನೀಡುತ್ತೇವೆ. ಈಗ ಲಕ್ಕುಂಡಿ ಉತ್ಸವದ ಯಶಸ್ವಿಗೆ ಅವಕಾಶ ನೀಡಬೇಕು ಎಂದು ಭರವಸೆ ನೀಡಿದ್ದರು. ಆಗ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ೆ. 24 ಕಳೆದರೂ ಹಕ್ಕು ಪತ್ರ ನೀಡುವ ಯಾವುದೇ ಮನ್ಸೂಚನೆ ಇಲ್ಲವಾಗಿದೆ. ಈ ಹಿನ್ನೆಲೆ ಮತ್ತೇ ಅನಿಧಿರ್ಷ್ಠಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಹಕ್ಕು ಪತ್ರ ಕೊಟ್ಟ ಮೇಲೆಯೇ ಧರಣಿಯನ್ನು ಹಿಂಪಡೆಯಲಾಗುವುದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಹೂವಕ್ಕ ನಂದಪ್ಪನವರ, ನಿರ್ಮಲಾ ತುಬಾಕಿ, ಹನುಮವ್ವ ದೊಡ್ಡಮನಿ, ಮೀನಾ ಭಜಂತ್ರಿ, ರುದ್ರವ್ವ ಜವಳಬೆಂಚಿ, ಮಂಜವ್ವ ನಡುವಿನಮನಿ, ಹೇಮಾವತಿ ಹುಲಗಪ್ಪನವರ, ಗೀತಾ ಕಮ್ಮಾರ ಹಲವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts