More

    ದಿಶಾ ಕಾಯ್ದೆ ಅನುಷ್ಠಾನಕ್ಕಾಗಿ ಇಬ್ಬರು ಮಹಿಳಾ ಅಧಿಕಾರಿಗಳ ನೇಮಿಸಿದ ಆಂಧ್ರಪ್ರದೇಶ ಸರ್ಕಾರ

    ತೆಲಂಗಾಣ: ದಿಶಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಬ್ಬರು ಮಹಿಳಾ ವಿಶೇಷ ಅಧಿಕಾರಿಗಳನ್ನು ಆಂಧ್ರ ಸರ್ಕಾರ ನೇಮಕಗೊಳಿಸಿದೆ.

    ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ತಪ್ಪಿತಸ್ಥರಿಗೆ 21 ದಿನಗೊಳಗೆ ಮರಣದಂಡನೆ ಅಥವಾ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಲು ಆಂಧ್ರಪ್ರದೇಶ ಸರ್ಕಾರ ಈ ನೇಮಕ ಮಾಡಿದೆ.

    ಡಿಸೆಂಬರ್​ 13ರಂದು ಆಂಧ್ರ ಪ್ರದೇಶ ಸರ್ಕಾರವು ದಿಶಾ ಕಾಯ್ದೆಯನ್ನು ಅಂಗೀಕರಿಸಿತ್ತು. ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ ಎರಡು ವಾರಗಳಲ್ಲೇ ಇಂತಹ ಕಾಯ್ದೆ ಜಾರಿಗೆ ತಂದಿದೆ.

    ಈ ಅಮಾನವೀಯ ಘಟನೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣಕ್ಕೆ “ದಿಶಾ” ಎಂದು ನಾಮಕರಣ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಾಲ್ವರನ್ನು ಡಿಸೆಂಬರ್​ 6 ರಂದು ವಿಚಾರಣೆಗೆ ಕರೆ ತಂದಿದ್ದಾಗ ತಪ್ಪಿಸಿಕೊಳ್ಳಲು ಹೊದ ಅವರನ್ನು ಎನ್​ಕೌಂಟರ್​ ಮಾಡಲಾಗಿತ್ತು.

    ಐಎಎಸ್​ ಅಧಿಕಾರಿ ಡಾ. ಕೃತಿಕಾ ಶುಕ್ಲಾ ಮತ್ತು ಐಪಿಎಸ್​ ಅಧಿಕಾರಿ ಎಂ ದೀಪಿಕಾ ಅವರನ್ನು ದಿಶಾ ಕಾಯ್ದೆಯ ಅನುಷ್ಠಾನಕ್ಕೆ ನೇಮಕ ಮಾಡಲಾಗಿದೆ.

    ಡಾ, ಕೃತಿಕಾ ಶುಕ್ಲಾ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿದ್ದಾರೆ. ದಿಶಾ ಕಾಯ್ದೆಯ ವಿಶೇಷ ಅಧಿಕಾರಿಯಾಗಿ ಹೆಚ್ಚುವರಿ ಅಧಿಕಾರ ನೀಡಲಾಗಿದೆ.

    ಕರ್ನೂಲ್​ನಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿಯಾಗಿರುವ ಎಂ. ದೀಪಿಕಾ ಅವರನ್ನು ದಿಶಾ ಕಾಯ್ದೆ ಸಂಬಂಧ ವಿಶೇಷ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

    ದಿಶಾ ಕಾಯ್ದೆ ಪ್ರಕಾರ ಅತ್ಯಾಚಾರ ಅಥವಾ ಆ್ಯಸಿಡ್​ ದಾಳಿಯಂತಹ ಪ್ರಕರಣಗಳನ್ನು 14 ದಿನಗಳಲ್ಲಿ ವಿಚಾರಣೆ ಮುಕ್ತಾಯಗೊಳಿಸಬೇಕಿದೆ. ಮತ್ತು 21 ದಿನಗಳಲ್ಲಿ ತೀರ್ಪು ಹೊರ ಬೀಳಲಿದೆ. ಮರು ಪರಿಶೀಲನಾ ಆರ್ಜಿ ಸಮಯ 6 ತಿಂಗಳಿನಿಂದ 45 ದಿನಕ್ಕೆ ಕಡಿತಗೊಳಿಸಲಾಗಿದೆ.

    ಇಂತಹ ಪ್ರಕರಣಗಳಿಗಾಗಿ 13 ಜಿಲ್ಲೆಗಳಲ್ಲೂ ವಿಶೇಷ ಕೋರ್ಟ್​ಗಳನ್ನು ರಚಿಸಲಾಗುತ್ತಿದೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts