More

    ಸಮರ್ಥ ಜೀವನ ನಡೆಸಲು ಹೆಣ್ಣಿಗೆ ಶಿಕ್ಷಣ ಅಗತ್ಯ

    ಸೋಮವಾರಪೇಟೆ: ಜೇಸಿಐ ಸೋಮವಾರಪೇಟೆ, ಪುಷ್ಪಗಿರಿ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಗುರುವಾರ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಮೀನುಗಾರಿಕೆ ಇಲಾಖೆಯ ಸಹಾಯಕಿ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಮಹಿಳೆಯರು ಇಂದಿಗೂ ಹೆಚ್ಚಿನವರು ಕತ್ತಲೆ ಕೋಣೆಯಲ್ಲಿಯೇ ಉಳಿದಿದ್ದು, ಕನಿಷ್ಠ ಮಹಿಳಾ ದಿನಾಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮದ ಬಗ್ಗೆ ಅರಿವು ಹೊಂದಿಲ್ಲ. ಅನೇಕ ಮನೆಗಳಲ್ಲಿ ಹೆಣ್ಣು-ಗಂಡೆಂಬ ತಾರತಮ್ಯ ಇದ್ದು, ಹಲವರು ಶಿಕ್ಷಣದಿಂದಲೂ ವಂಚಿರಾಗುತ್ತಿದ್ದಾರೆ. ಪಾಲಕರು ಗಂಡಿಗೆ ನೀಡುವಂತೆ ಹೆಣ್ಣಿಗೂ ಶಿಕ್ಷಣ ನೀಡಿದಲ್ಲಿ ಮಾತ್ರ ಅದರಿಂದ ಧೈರ್ಯ ಮತ್ತು ಸಮರ್ಥ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

    ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನ ಮಾಡಲಾಗುತ್ತದೆ. ಪರಿಶ್ರಮದಿಂದ ಕೆಲಸ ಮಾಡಿದಲ್ಲಿ ಮಾತ್ರ ಸಾಧನೆ ಸಾಧ್ಯ. ವೇದಿಕೆಗಳಲ್ಲಿ ಪ್ರಶಸ್ತಿ, ಸನ್ಮಾನಕ್ಕೆ ಮೀಸಲಾಗುವ ಬದಲು ಜೀವನದ ಕನಸ್ಸನ್ನು ಈಡೇರಿಸಿಕೊಳ್ಳುವಂತಾಗಬೇಕು. ನಮ್ಮ ಸಾಧನೆಯೊಂದಿಗೆ ಸಮಾಜದ ಕೆಳಹಂತದಲ್ಲಿರುವವರನ್ನು ನಮ್ಮೊಂದಿಗೆ ಮೇಲೆತ್ತುವ ಕೆಲಸ ನಮ್ಮಿಂದಲೇ ಆಗಬೇಕಿದೆ ಎಂದು ಹೇಳಿದರು.

    ಸಮಾಜ ಸೇವಕಿ ಕುಶಾಲನಗರದ ದೀಕ್ಷಾ, ಕೃಷಿಕ ಮಹಿಳೆ ಸಿದ್ಧಲಿಂಗಪುರದ ಮೀನಾಕ್ಷಿ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ನರ್ಸ್ ಅನಿತಾ, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಟಿ.ಚಂದ್ರಕಲಾ, ಕ್ರೀಡಾ ಕ್ಷೇತ್ರದಲ್ಲಿ ಕರ್ಕಳ್ಳಿ ಗ್ರಾಮದ ಪುಣ್ಯ ಅವರಿಗೆ ಪಂಚರತ್ನ ಅವಾರ್ಡ್ ನೀಡಲಾಯಿತು. ಜೇಸಿಐ ವಲಯ ಸಂಯೋಜಕಿ ರೂಪಾ ಗೋಪಾಲಕೃಷ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಹಾಗೂ ಜೇಸಿಐ ಅಧ್ಯಕ್ಷ ಎಸ್.ಆರ್.ವಸಂತ್ ಅವರನ್ನು ಸನ್ಮಾನಿಸಲಾಯಿತು.

    ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಸುದೀಪ್, ವಲಯ 11ರ ಅಧ್ಯಕ್ಷೆ ಆಶಾ ಜೈನ್, ರಾಷ್ಟ್ರೀಯ ಮಹಿಳಾ ವಿಭಾಗದ ಸಂಯೋಜಕಿ ಎಚ್.ಎಸ್.ಯಶಸ್ವಿನಿ, ಜೇಸಿಐ ಮುಖ್ಯಸ್ಥರಾದ ರೂಪಾ ಗೋಪಾಲಕೃಷ್ಣ ಎಂ.ಎ. ರುಬೀನಾ, ಜಗದಾಂಬ ಗುರುಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts