More

    ‘ಸದನದ ಘನತೆ ಹರಾಜು ಹಾಕುವುದು ತಪ್ಪು’ : ಸುಧಾಕರ್ ಹೇಳಿಕೆಗೆ ಶಾಸಕಿಯರ ಅಸಮಾಧಾನ

    ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ವಾಗ್ವಾದ ಮುಂದುವರಿದಿದೆ. ಈ ಮಧ್ಯೆ ‘ಏಕಪತ್ನಿ ವ್ರತಸ್ಥರು ಯಾರಿದ್ದಾರೆ’ ಎಂದು ಸವಾಲು ಹಾಕಿರುವ ವೈದ್ಯಕೀಯ ಸಚಿವ ಡಾ.ಸುಧಾಕರ್ ವಿರುದ್ದ ಮಹಿಳಾ ಶಾಸಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಹೇಳಿಕೆ ಅವರ‌ ಮನಸ್ಥಿತಿಯನ್ನು ತೋರಿಸುತ್ತದೆ. ಯಾರೋ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳಲು ಮತ್ಯಾರನ್ನೋ ಎಳೆದು ತರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಸಂಸ್ಕಾರ ಇದ್ದವರು ಈ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಮಹಿಳಾ ಶಾಸಕಿಯರು ಅಸಮಾಧಾನ ತೋರಿದರು.

    ಇದನ್ನೂ ಓದಿ: ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಎಂದು ಸವಾಲ್​ ಹಾಕಿದ ಸಚಿವ..

    ತಪ್ಪು ಯಾರು ಮಾಡಿದರೂ ತಪ್ಪು. ಕೆಲ ವಿಷಯಗಳು ಹೇಳಲಾರದ ಸಂಗತಿಗಳಿರುತ್ತವೆ. ಎಲ್ಲವನ್ನೂ ಬೀದಿ ರಂಪ‌ ಮಾಡಿ ಸದನದ ಗೌರವ ಘನತೆ ಹರಾಜು ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ನಾವೆಲ್ಲರೂ ತುತ್ತಾಗಬೇಕಾಗಿದೆ ಎಂದು ಶಾಸಕಿಯರು ಬೇಸರಿಸಿದರು.

    “224 ಶಾಸಕರಿಗೆ ಚಾಲೆಂಜ್ ಹಾಕಿರುವ ಸುಧಾಕರ್ ಅವರ ಹೇಳಿಕೆ ಆಕ್ಷೇಪಾರ್ಹವಾದದ್ದು. ಇದು ಎಲ್ಲರಿಗಾದ ಅವಮಾನ” ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಚಿವರಾದ ಬಿಜಿಪಿ ಶಾಸಕಿ ಶಶಿಕಲಾ ಜೊಲ್ಲೆ ಅವರು, “ಸಚಿವ ಡಾ.ಸುಧಾಕರ್ ಏನು ಹೇಳಿದ್ದಾರೆ ಎನ್ನುವುದು ಸರಿಯಾಗಿ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೆ ತಪ್ಪು” ಎಂದರು.

    ಹ್ಯಾಪಿ ಶಾಪಿಂಗ್ : ಕರೊನಾ ಲಸಿಕೆ ಪಡೆದವರಿಗೆ ಡಿಸ್ಕೌಂಟ್ ಕೂಪನ್​ !

    VIDEO | “ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್” : ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts