More

    ಮಣ್ಣಿನಡಿ ಸಿಲುಕಿ ಮಹಿಳೆ ಮೃತ್ಯು

    ಮಂಗಳೂರು : ನಗರ ಹೊರವಲಯದ ಬೋಂದೆಲ್ ಬಳಿಯ ಕೃಷ್ಣನಗರದಲ್ಲಿ ತಡೆಗೋಡೆ ಕುಸಿದು ಬಿದ್ದು ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
    ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕ ಮಹಿಳೆ ತಿಮ್ಮಕ್ಕ(42) ಮೃತಪಟ್ಟವರು.

    ಮಂಗಳೂರು ಮಹಾನಗರ ಪಾಲಿಕೆಯ ಜಲಸಿರಿ ಯೋಜನೆಯಡಿ ಪೈಪ್ ಲೈನ್ ಹಾಕಲು ಗುಂಡಿ ಅಗೆಯುವ ಕಾಮಗಾರಿ ನಡೆಸುತ್ತಿದ್ದಾಗ, ಒಂದು ಭಾಗದಲ್ಲಿ ಕಟ್ಟಿದ್ದ ಕೆಂಪು ಕಲ್ಲಿನ ಗೋಡೆ ಕುಸಿದು ಬಿದ್ದಿದೆ. ಧರೆ ಕುಸಿಯದಂತೆ ಎತ್ತರಕ್ಕೆ ತಡೆಗೋಡೆ ಕಟ್ಟಿದ್ದು, ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಅರ್ಧ ಗಂಟೆ ಕಾಲ ಮಹಿಳೆ ಮಣ್ಣಿನಡಿ ಸಿಲುಕಿದ್ದು, ಬಳಿಕ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಸ್ಥಳೀಯರು, ಇತರ ಕಾರ್ಮಿಕರು ಜೆಸಿಬಿ ಸಹಾಯದಲ್ಲಿ ಮಣ್ಣು ತೆರವು ಮಾಡುವ ಕಾರ್ಯ ಮಾಡಿದರೂ, ವಿಳಂಬವಾದ ಕಾರಣ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

    ಮಹಿಳೆಯ 12 ವರ್ಷದ ಪುತ್ರಿ ಪುಷ್ಪಾ ಕೂಡ ಜೊತೆಗಿದ್ದು, ಆಕೆಯೂ ಮಣ್ಣಿನಡಿ ಸಿಲುಕಿದ್ದಳು. ಆದರೆ, ಮಗುವಿಗೆ ಹೆಚ್ಚು ಅಪಾಯ ಆಗಿಲ್ಲ. ಸ್ವಲ್ಪ ಮಣ್ಣು ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಳು. ಕಾವೂರು ಪೊಲೀಸರು ಮಹಾನಗರ ಪಾಲಿಕೆಯ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರನ ಮೇಲೆ ಕೇಸು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts