More

    VIDEO | ಸೀರೆಯುಟ್ಟು ಪುಟ್ಬಾಲ್ ಆಡಿದ ಹೆಣ್ಮಕ್ಕಳು!

    ಮಧ್ಯಪ್ರದೇಶ: ಮಹಿಳೆಯರು ಅಡುಗೆ ಮನೆಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ಉನ್ನಯ ಹುದ್ದೆಗಳನ್ನು ಅಲಂಕರಿಸುವವರೆಗೂ ಸಾಧನೆ ಮಾಡಿದ್ದಾರೆ. ಆದರೆ ಈ ಹೆಣ್ಮಕ್ಕಳು ಕ್ರೀಡಾಂಗಣದಲ್ಲಿ ಸೀರೆಯನ್ನುಟ್ಟು ಪುಟ್ಬಾಲ್ ಆಡಿರೋ ವಿಶುವಲ್ ಎಲ್ಲೆಡೆ ವೈರಲ್ ಆಗಿದೆ.

    ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೀರೆಯುಟ್ಟ ಮಹಿಳೆಯರ ವಿಶಿಷ್ಟ ಫುಟ್‌ಬಾಲ್ ಪಂದ್ಯವನ್ನುಆಯೋಜಿಸಲಾಗಿತ್ತು. ಮಹಿಳೆಯರ ಫುಟ್‌ಬಾಲ್ ಪಂದ್ಯಾವಳಿಯನ್ನು ‘ಗೋಲ್ ಇನ್ ಸೀರೆ’ ಎಂದು ಕರೆಯಲಾಯಿತು.

    ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯ ಸಂಘ (ಜಾಗತಿಕ ಲಾಭರಹಿತ ಎನ್‌ಜಿಒ) ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸಿತ್ತು. ಅಗ್ರ ಮೂರು ತಂಡಗಳಿಗೆ ಟ್ರೋಫಿಗಳ ಜೊತೆಗೆ ಸ್ಪರ್ಧಾತ್ಮಕ ತಂಡಗಳ ಪ್ರತಿ ಆಟಗಾರನಿಗೆ ಉಡುಗೊರೆಗಳನ್ನು ನೀಡಲಾಯಿತು. ಎಲ್ಲಾ ಮಹಿಳೆಯರು ಸೀರೆಯನ್ನುಟ್ಟು ಫುಟ್‌ಬಾಲ್ ಆಡಿದರು. ಮಹಿಳಾ ಆಟಗಾರರು 20 ರಿಂದ 72 ರ ವಯಸ್ಸಿನವರು ಭಾಗಿಯಾಗಿದ್ದರು ಎನ್ನಲಾಗಿದೆ.

    ಇದನ್ನೂ ಓದಿ:  ಬೈಕ್‌ಗೆ ಜೀಪ್ ಡಿಕ್ಕಿ; ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು
    ವಿಡಿಯೋದಲ್ಲಿ ಏನಿದೆ?: ಕ್ರೀಡಾಂಗಣದಲ್ಲಿದ್ದ ಮಹಿಳೆಯರು ಕಚ್ಚೆ ರೂಪದಲ್ಲಿ ಸೀರೆಯುಟ್ಟು ಪುಟ್ಬಾಲ್ ಆಡಿದ್ದಾರೆ. ಮಹಿಳೆಯರು ಫುಲ್ ಉತ್ಸಾಹದಲ್ಲಿ ಆಡುವುದನ್ನು ವೈರಲ್ ಆದ ವೀಡಿಯೋದಲ್ಲಿ ನೋಡಬಹುದು. ಸೀರೆಯುಟ್ಟು ಗೋಲು ಹೊಡೆದ ಮಹಿಳೆಯರಿಗೆ ಪ್ರೇಕ್ಷಕರ ಪ್ರೋತ್ಸಾಹ ನೀಡುತ್ತಾರೆ. ಪೂರ್ಣ ಉತ್ಸಾಹದಿಂದ ಅವರು ಫುಟ್ಬಾಲ್ ಆಡುತ್ತಾರೆ.

    ನಕಲಿ ಔಷಧ ತಯಾರಿಸುವ 18 ಕಂಪನಿಗಳ ಪರವಾನಗಿ ರದ್ದುಗೊಳಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts