More

    10 ಬಾರಿ ನೆಗೆಟಿವ್​ ವರದಿ ಬಂದರೂ ಬೆಂಬಿಡದ ಕರೊನಾ! ಸೋಂಕು ಇಲ್ಲವೆಂದುಕೊಂಡೇ ಸಾವನ್ನಪ್ಪಿದ ಮಹಿಳೆ

    ಲಂಡನ್​: ಕರೊನಾ ಎಲ್ಲ ರೋಗಿಗಳಲ್ಲಿ ಒಂದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಅದೆಷ್ಟೋ ಜನರಿಗೆ ರೋಗ ಲಕ್ಷಣವಿಲ್ಲದಿದ್ದರೂ ಸೋಂಕು ದೃಢವಾಗಿದೆ. ಆದರೆ ಈ ಮಹಿಳೆಯ ಪ್ರಕರಣ ಉಲ್ಟಾ. ರೋಗ ಲಕ್ಷಣವಿದ್ದರೂ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಸತ್ತ ಮೇಲೆ ಕರೊನಾದಿಂದಾಗಿಯೇ ಸತ್ತಿದ್ದಾಗಿ ವರದಿ ಬಂದಿದ್ದು ಕುಟುಂಬವೇ ಶಾಕ್​ ಆಗಿದೆ.

    ಬ್ರಿಟನ್​ನ ಡೆಬ್ರಾ ಶಾ(56) ಹೆಸರಿನ ಮಹಿಳೆ ಆಪರೇಷನ್​ ಒಂದರ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಆಪರೇಷನ್​ ಮಾಡಿ, ಅದರಿಂದ ಗುಣಮುಖವಾಗುವ ಸಮಯದಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಪರೀತ ಜ್ವರ, ಉಸಿರಾಟ ತೊಂದರೆಗಳು ಕಾಣಿಸಿಕೊಂಡಿವೆ. ಆ ಹಿನ್ನೆಲೆಯಲ್ಲಿ ಆಕೆಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಮೊದಲನೇ ವರದಿಯಲ್ಲಿ ಕರೊನಾ ನೆಗೆಟಿವ್​ ಬಂದಿದೆ. ಸತತ 10 ದಿನಗಳ ಕಾಲ 10 ಬಾರಿ ಪರೀಕ್ಷೆ ಮಾಡಲಾಗಿದೆ. ಎಲ್ಲ ವರದಿಯಲ್ಲಿ ಆಕೆಗೆ ಕರೊನಾ ನೆಗೆಟಿವ್​ ಬಂದಿದೆ.

    ಆಪರೇಷನ್​ ಮುಗಿದು 15 ದಿನಗಳಿಗೆ ಡೆಬ್ರಾ ಕೊನೆಯುಸಿರೆಳೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಡೆಬ್ರಾಗೆ ಕರೊನಾ ಇದ್ದಿದ್ದು, ಅದರಿಂದಲೇ ಸಾವನ್ನಪ್ಪಿರುವುದಾಗಿ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಆಕೆಯನ್ನು ಕೋವಿಡ್ ವಾರ್ಡ್​ನ ಬದಲಾಗಿ ಸಾಮಾನ್ಯ ವಾರ್ಡ್​ನಲ್ಲೇ ಇಡಲಾಗಿತ್ತು. ಪಿಪಿಇ ಕಿಟ್​ ಇಲ್ಲದೆಯೇ ಆಕೆಯ ಸಂಬಂಧಿಗಳು ಆಕೆಯೊಂದಿಗಿದ್ದರು. ಈ ವಿಚಾರವಾಗಿ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಆಕೆಯ ಸಂಬಂಧಿಕರು ತಿಳಿಸಿದ್ದಾರೆ. (ಏಜೆನ್ಸೀಸ್)

    ಸೆಕ್ಸ್ ಮಾಡುವಾಗ ನಿದ್ರೆಗೆ ಜಾರಿದ ಗಂಡ; ಗಂಡನ ನಿದ್ರೆಯಿಂದಾಗಿ ಸತ್ತೇ ಹೋದ ಹೆಂಡತಿ!

    ಒಂದೇ ಆಸ್ಪತ್ರೆಯ 6 ವೈದ್ಯರಿಗೆ ಕರೊನಾ; ಮದುವೆಯಾಗಿ ನಾಲ್ಕೇ ದಿನಕ್ಕೆ ಕೆಲಸಕ್ಕೆ ಹಾಜರಾದ ವೈದ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts