More

    ನೇರ ಮಾರಾಟ ವಲಯದಲ್ಲಿ ರಾಜ್ಯದ ಮಹಿಳೆಯರಿಂದ 1128 ಕೋಟಿ ರೂ. ವಹಿವಾಟು

    ಬೆಂಗಳೂರು: ದೇಶದ ನೇರ ಮಾರಾಟ ವಲಯದಲ್ಲಿ 78 ಸಾವಿರ ಮಂದಿ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ರಾಜ್ಯದಲ್ಲಿ 34 ಸಾವಿರ ಮಹಿಳೆಯರು ರೂ. 1128 ಕೋಟಿ ವ್ಯವಹಾರ ನಡೆಸಿದ್ದು, ಶೇ.9.09ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದಾರೆ. ಇದರಿಂದ ದಕ್ಷಿಣ ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಭಾರತೀಯ ನೇರ ಮಾರಾಟ ಒಕ್ಕೂಟ (ಐಡಿಎಸ್​ಎ) ತಿಳಿಸಿದೆ.

    ಮಂಗಳವಾರ ನಡೆದ ವಾರ್ಷಿಕ ಸಮಾವೇಶದಲ್ಲಿ ಐಡಿಎಸ್​ಎ ಅಧ್ಯಕ್ಷ ರಜತ್​ ಬ್ಯಾನರ್ಜಿ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ನೇರ ಮಾರಾಟ ವಲಯದಲ್ಲಿ ಕರ್ನಾಟಕ ಪ್ರಮುಖ ಮಾರುಕಟ್ಟೆಯಾಗಿದೆ. ದೇಶದ 84 ಲಕ್ಷ ಜನರಿಗೆ ನೇರ ಮಾರಾಟ ವಲಯ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿದೆ. ಐಡಿಎಸ್​ಎಯ 19 ಸದಸ್ಯ ಕಂಪೆನಿಗಳು ಗ್ರಾಹಕರ ಮತ್ತು ರಾಜ್ಯದ 78 ಸಾವಿರ ನೇರ ಮಾರಾಟಗಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರನ್ನು ಅನ್ಯ ಭಾಷೆಯ ಚಿತ್ರಗಳಲ್ಲಿ ನೋಡಿದಾಗ….: ನಟಿ ಚೈತ್ರಾ ಜೆ.ಆಚಾರ್​

    ಸ್ವ-ಉದ್ಯೋಗ ಮುಖಾಂತರ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಿದೆ. ಎಲ್ಲ ದೇಶಗಳಲ್ಲಿ ನೇರ ಮಾರಾಟ ಉದ್ಯಮವಿದ್ದು, ಇದಿರಿಂದ ಗುಣಮಟ್ಟದ ವಸ್ತುಗಳು ಸಿಗುತ್ತಿವೆ. ಸುಮಾರು 50 ಲಕ್ಷದಷ್ಟು ಮಹಿಳೆಯರು ಈ ವಲಯದಲ್ಲಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ನಿವೃತ್ತ ಪೊಲೀಸ್​ ಆಯುಕ್ತ ಶಂಕರ್​ ಬಿದರಿ ಹೇಳಿದರು.

    ಈ ಸಂದರ್ಭದಲ್ಲಿ ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕಿ ಪ್ರೀತಿ ಚಂದ್ರಶೇಖರ್​, ಐಡಿಎಸ್​ಎ ಉಪಾಧ್ಯಕ್ಷ ವಿವೇಕ್​ ಕಟೋಚಿ, ಕಾರ್ಯದರ್ಶಿ ಅಪ್ರಜಿತ ಸರ್ಕಾರ್​, ಪ್ರಧಾನ ವ್ಯವಸ್ಥಾಪಕ ಚೇತನ್​ ಭಾರಧ್ವಾಜ್​ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts