More

    ಮಹಿಳೆಯರ ಶಾರೀರಿಕ ಲಕ್ಷಣಕ್ಕೂ, ಅವರ ಹಕ್ಕುಗಳಿಗೂ ಸಂಬಂಧವಿಲ್ಲ, ಇಂತಹ ಮನಸ್ಥಿತಿ ಬದಲಾಗಲಿ; ಸುಪ್ರೀಂಕೋರ್ಟ್​ ಅಭಿಪ್ರಾಯ

    ನವದೆಹಲಿ: ಮಹಿಳೆಯರ ಶಾರೀರಿಕ ಲಕ್ಷಣಗಳಿಗೂ ಹಾಗೂ ಅವರ ಹಕ್ಕುಗಳಿಗೂ ಯಾವುದೇ ಸಂಬಂಧವಿಲ್ಲ. ಇಂತಹ ಮನಸ್ಥಿತಿ ಬದಲಾಗಬೇಕಿದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯ ಪಟ್ಟಿದೆ.

    ಭಾರತೀಯ ಸೇನೆಯಲ್ಲಿ ಮಹಿಳೆಯರನ್ನು ಪುರುಷ ಅಧಿಕಾರಿಗಳಿಗೆ ಸಮನಾಗಿ “ಕಮಾಂಡ್ ನೇಮಕವನ್ನು” ಅನುಮತಿಸಬೇಕು ಎಂದು ಹೇಳಿದ ಸುಪ್ರೀಂಕೋರ್ಟ್ ಇದನ್ನು ಅನುಮತಿಸಿದರೆ, ಸೈನ್ಯದ ಮಹಿಳೆಯರು ತಮ್ಮ ಪುರುಷರಂತೆಯೇ ವೃತ್ತಿಜೀವನದ ಭವಿಷ್ಯ ಮತ್ತು ಅವಕಾಶ ಪಡೆಯುತ್ತಾರೆ ಎಂದಿತು.

    ಮಹಿಳಾ ಅಧಿಕಾರಿಗಳನ್ನು ಸೇನಾ ಘಟಕಗಳಲ್ಲಿ ಸ್ವೀಕರಿಸಲು ಸೈನಿಕರು ಇನ್ನೂ ಮಾನಸಿಕವಾಗಿ ಸಿದ್ಧವಿಲ್ಲ ಎಂದು ಸರ್ಕಾರ ನೀಡಿದ ವರದಿಗೆ, ಮಹಿಳೆಯರೂ ಪುರುಷರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತಾರೆ. ಕೇಂದ್ರದ ಈ ವರದಿ ಲಿಂಗ ತಾರತಮ್ಯ ಮಾಡುತ್ತಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಹೇಳಿದರು.

    ಆಗಸ್ಟ್ 2018ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದಲ್ಲಿ ಭಾರತದ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದಿದ್ದರು. ರಕ್ಷಣಾ ಪಡೆಗಳ ಎಲ್ಲ ಶಾಖೆಗಳಲ್ಲೂ ಮಹಿಳಾ ಆಧಿಕಾರಿಗಳ ನಿಯೋಜಿಸಲಾಗುತ್ತದೆಯೇ ಎಂಬ ಬಗ್ಗೆ ಪ್ರಧಾನಿ ಭಾಷಣದಲ್ಲಿ ಸ್ಪಷ್ಟವಾಗಿರಲಿಲ್ಲ.

    ಶಾರ್ಟ್​ ಸರ್ವೀಸ್​ ಕಮೀಷನ್​ (ಎಸ್​ಎಸ್​ಸಿ) ಪ್ರಕಾರ ಮಹಿಳೆಯರು 10ರಿಂದ 14 ವರ್ಷದವರೆಗೆ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಬಹುದು. ಆದರೆ ಇನ್​ಫ್ಯಾಂಟ್ರಿ, ಯಾಂತ್ರಿಕೃತ ಕಾಲಾಳುಪಡೆ, ವಾಯುಯಾನ ಮತ್ತು ಫಿರಂಗಿ ವಿಭಾಗಗಳಲ್ಲಿ ಈವರೆಗೆ ಮಹಿಳೆಯರ ಪ್ರವೇಶವಾಗಿಲ್ಲ.

    ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯು ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡಿವೆ. ಈ ಎರಡು ವಿಭಾಗಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts