More

    ಮಹಿಳೆಯರ ಸಾಧನೆ ಸಂತಸದ ವಿಚಾರ

    ಚಿಕ್ಕೋಡಿ: 12ನೇ ಶತಮಾನದಲ್ಲಿ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಮತ್ತು ಬಸವಾದಿ ಶಿವಶರಣರು ಸ್ಥಾನ ನೀಡಿ ಗೌರವಿಸಿದ್ದಾರೆ ಎಂದು ಪುರಸಭೆ ಸದಸ್ಯೆ ವೀಣಾ ಜಗದೀಶ ಕವಟಗಿಮಠ ಹೇಳಿದ್ದಾರೆ.

    ಸೋಮವಾರ ಪಟ್ಟಣದ ವಕೀಲರ ಸಂಘದ ಸಭಾಭವನದಲ್ಲಿ ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ತಾಯಿ, ಗೃಹಿಣಿ, ಸಹೋದರಿ ಸ್ಥಾನ ತುಂಬವ ಮಹಿಳೆ ಕುಟುಂಬ ನಿರ್ವಹಣೆ ಮಾಡುವುದು ಮೆಚ್ಚುಗೆಯ ಸಂಗತಿ ಎಂದರು.

    ಜಿಲ್ಲಾ ನ್ಯಾಯಾಧೀಶ ಮಹಾಂತಪ್ಪ ಎ.ಡಿ. ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿದರು. ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಜಿಲ್ಲಾ ನ್ಯಾಯಾಧೀಶ ಮಹಾಂತಪ್ಪ ಎ.ಡಿ. ಮತ್ತು ನ್ಯಾಯಾಧೀಶೆ ಮಂಜುಳಾ ಬಿ., ಡಾ.ರೋಹಿಣಿ ಕುಲಕರ್ಣಿ, ಪುರಸಭೆ ಸದಸ್ಯೆ ವೀಣಾ ಕವಟಗಿಮಠ ಬಹುಮಾನ ವಿತರಿಸಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಬಾಗಡೆ, 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಯೋಗೇಶ ಕೆ., ನ್ಯಾಯವಾದಿಗಳಾದ ಮಾಣಿಕಮ್ಮ ಕಬಾಡಗಿ, ಶೋಭಾ ತಳವಾರ, ಉಮಾ ಭಂಡಾರಕರ ಇದ್ದರು. ಎಂ.ವಿ. ಪಾಟೀಲ ಸ್ವಾಗತಿಸಿದರು. ಎನ್.ಆರ್. ಪಾಟೀಲ ನಿರೂಪಿಸಿದರು. ತೇಜಸ್ವಿನಿ ಮಠಪತಿ ವಂದಿಸಿದರು.

    ನಿಪ್ಪಾಣಿ ವರದಿ: ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಅಭಿವೃದ್ಧಿ ಕೇಂದ್ರ ಘಟಕದ ವತಿಯಿಂದ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ವಿದ್ಯಾವತಿ ಜನವಾಡೆ, ಡಾ.ಕೆ.ಬಿ. ಜಗದೀಶಗೌಡ, ಪ್ರೊ. ಕವಿತಾ ವಸೇದಾರ ಇದ್ದರು. ಸೌಮ್ಯಾ ಪಾಟೀಲ ಪರಿಚಯಿಸಿದರು. ಪ್ರೊ.ವಿದ್ಯಾವತಿ ದೇಶಪಾಂಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts