ನವದೆಹಲಿ: ಮಹಿಳೆ ತಾನು ಇಷ್ಟಪಟ್ಟು ಪುರುಷನ ಜೊತೆಗಿದ್ದು, ಸಂಬಂಧ ಕೆಟ್ಟ ಮೇಲೆ ಅತ್ಯಾಚಾರವಾಯ್ತು ಎಂದು ದೂರು ನೀಡುವಂತಿಲ್ಲ ಎಂಬುದಾಗಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿತ್ತಿದೆ.
ಆರೋಪಿ ಅನ್ಸಾರ್ ಮೊಹಮ್ಮದ್ ಎಂಬಾತ ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಅತ್ಯಾಚಾರ ಆರೋಪದ ಕುರಿತಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಸಂಬಂಧಿತ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ವಿಕ್ರಮ್ನಾಥ್ ಅವರಿದ್ದ ಪೀಠ, ಮೇಲಿನ ತೀರ್ಪು ನೀಡಿ, ಜಾಮೀನು ಮಂಜೂರು ಮಾಡಿದೆ.
ದೂರುದಾರ ಮಹಿಳೆಯು ಅನ್ಸಾರ್ ಮೊಹಮ್ಮದ್ನೊಂದಿಗೆ ಇಷ್ಟಪಟ್ಟೇ ಜತೆಗಿದ್ದರು. ಆದರೆ ಈಗ ಇಬ್ಬರ ನಡುವಿನ ಸಂಬಂಧ ಹದೆಗೆಟ್ಟಿದೆ ಎಂಬ ಕಾರಣಕ್ಕೆ ಸೆಕ್ಷನ್ 376(2)ರ ಪ್ರಕಾರ ಎಫ್ಐಆರ್ ದಾಖಲು ಮಾಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ರಾಜಸ್ಥಾನ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ. 25 ವರ್ಷದ ಮಹಿಳೆ ಈ ಪ್ರಕರಣದಲ್ಲಿ ದೂರುದಾರರಾಗಿದ್ದು, ಅನ್ಸಾರ್ ಜತೆ ನಾಲ್ಕು ವರ್ಷದಿಂದ ಸಂಬಂಧ ಹೊಂದಿದ್ದರು.
ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..