More

    16 ತಾಸು ನೀರೊಳಗೇ ಇದ್ದ ಮಹಿಳೆ! ಹೊರಬಂದವಳಿಗೆ ಈಗ ಬೇಕಂತೆ ನಿಮ್ಮೆಲ್ಲರ ಸಹಾಯ

    ಲಂಡನ್​: ಸ್ವಿಮ್ಮಿಂಗ್​ ಪೂಲ್​, ಕೆರೆ, ಹೊಳೆ, ಬೀಚ್​ ಯಾವುದರಲ್ಲಾದರೂ ಎಷ್ಟು ಹೊತ್ತು ನೀರಿನೊಳಗಿರಬಹದು? ಒಂದೆರೆಡು ತಾಸಷ್ಟೇ. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 16 ತಾಸುಗಳ ಕಾಲ ನೀರೊಳಗೇ ಕಳೆದಿದ್ದಾಳೆ. ನೀರಿನಿಂದ ಹೊರಬಂದ ಮೇಲೆ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, ನನಗೆ ಸಹಾಯ ಮಾಡಿ ಎಂದು ಸಾಮಾಜಿಕವಾಗಿ ಕೇಳಿಕೊಂಡಿದ್ದಾಳೆ.

    ಬ್ರಿಟನ್​ನ ಡೇನಾ ಹೆಸರಿನ ಮಹಿಳೆ ಇಂತದ್ದೊಂದು ಸಾಹಸ ಮಾಡಿದ್ದಾಳೆ. ಟಿಕ್​ಟಾಕ್​ನಲ್ಲಿ ಸಕತ್​ ಆ್ಯಕ್ಟಿವ್​ ಇರುವ ಆಕೆ ತನ್ನ ಕಾಲುಗಳ ವಿಡಿಯೋ ಮಾಡಿ ಹಾಕಿದ್ದಾಳೆ. ನಾನು 16 ತಾಸುಗಳ ಕಾಲ ನೀರೊಳಗಿದ್ದೆ. ಅದಾದ ನಂತರ ನನ್ನ ಕಾಲು ಈ ರೀತಿ ಪೂರ್ತಿಯಾಗಿ ಸುಕ್ಕು ಹಿಡಿದುಬಿಟ್ಟಿದೆ. ಕಾಲಿನ ಬಣ್ಣವೂ ಬದಲಾಗಿಬಿಟ್ಟಿದೆ. ಈಗ ಇದನ್ನು ಹೇಗೆ ಸರಿಪಡಿಸಬೇಕು ಎನ್ನುವುದು ತಿಳಿಯುತ್ತಿಲ್ಲ. ನಿಮಗೇನಾದರೂ ಗೊತ್ತಿದ್ದರೆ ದಯವಿಟ್ಟು ಚಿಕಿತ್ಸೆ ಏನೆಂದು ತಿಳಿಸಿ ಎಂದು ಕೋರಿಕೊಂಡಿದ್ದಾಳೆ.

    ಡೇನಾಳ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. 16 ತಾಸುಗಳ ಕಾಲ ನೀರಿನಲ್ಲಿ ಇದ್ದಿದ್ದಾದರೂ ಏತಕ್ಕೆ ಎಂದು ಜನರು ಪ್ರಶ್ನೆ ಕೇಳಲಾರಂಭಿಸಿದ್ದಾರೆ. ನೀರಿನಲ್ಲಿ ಒಂದೆರೆಡು ತಾಸಿದ್ದರೇ ಚಳಿ ಶುರುವಾಗಿಬಿಡುತ್ತದೆ, ಹಾಗಿರುವಾಗ ನೀವು ಅಷ್ಟೊಂದು ಹೊತ್ತು ಹೇಗಿದ್ದಿರಿ ಎಂದೂ ಜನರು ಪ್ರಶ್ನಿಸಲಾರಂಭಿಸಿದ್ದಾರೆ. ಆದರೆ ಈ ಯಾವುದೇ ಪ್ರಶ್ನೆಗಳಿಗೆ ಆಕೆ ಉತ್ತರ ನೀಡಿಲ್ಲ. (ಏಜೆನ್ಸೀಸ್)

    ಹಣ್ಣು ಬೇಕಾ ಮಾವಿನಹಣ್ಣು…. ರೀಲ್‌ ಅಲ್ಲ ಇದು ರಿಯಲ್‌: ತೋಟದಲ್ಲಿ ಫುಲ್‌ ಬಿಜಿ ಈ ತುಮಕೂರು ಬೆಡಗಿ

    ಪುಲ್ವಾಮಾ ಹುತಾತ್ಮ ಪತಿಯ ಶವದ ಎದುರೇ ಪಣತೊಟ್ಟಿದ್ದ ನವವಿವಾಹಿತೆ: ಇಂದು ಸೇನೆಯ ಲೆಫ್ಟಿನೆಂಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts