More

    ಮತಗಟ್ಟೆಯಲ್ಲಿ ಟಾಪ್​ಲೆಸ್​ ಆದ ಮಹಿಳೆ…! ಎಲ್ಲರೆದುರೇ ಶರ್ಟ್​ ಕಳಚಿಟ್ಟು ಮತ ಚಲಾಯಿಸಿದ್ದೇಕೆ?

    ನ್ಯೂ ಹ್ಯಾಂಪ್​ಶೈರ್​: ಮತದಾನದ ವೇಳೆ ಮತಗಟ್ಟೆಯಿಂದ ನೂರು ಮಿಟರ್​ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗೆ ಅವಕಾಶವಿರುವುದಿಲ್ಲ. ಪ್ರಚಾರವಂತೂ ಮಾಡುವಂತೆಯೇ ಇಲ್ಲ.

    ಆದರೆ, ನ್ಯೂ ಹ್ಯಾಂಪ್​ಶೈರ್​ನ ಎಕ್ಸ್​ಟರ್​ ಎಂಬಲ್ಲಿ ರಾಜಕೀಯ ಬರಹವಿದ್ದ ಶರ್ಟ್​ ಧರಿಸಿದ್ದಕ್ಕೆ ಮತದಾನಕ್ಕೆ ಅವಕಾಶವಿಲ್ಲವೆಂದು ಮಹಿಳೆಗೆ ಅಧಿಕಾರಿ ತಡೆಯೊಡ್ಡಿದ್ದಾರೆ. ಆಕೆ ಧರಿಸಿದ್ದ ಶರ್ಟ್​ ಮೇಲೆ ಮ್ಯಾಕ್​ ಕ್ಯಾನ್​ ಹಿರೋ ಟ್ರಂಪ್​ ಝಿರೋ ಎಂದು ಬರೆದಿತ್ತು. ಟ್ರಂಪ್ ಝಿರೋ ಎಂದು ಬರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿ ಮಹಿಳೆಗೆ ತಿಳಿಸಿದ್ದಾರೆ.

    ಇದನ್ನೂ ಓದಿ; ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ; ಸಾಧ್ಯತೆ ತಳ್ಳಿ ಹಾಕಲಾಗದು; ಹೀಗಿದೆ ತಜ್ಞರ ವಿಶ್ಲೇಷಣೆ 

    ಇದರಿಂದ ಕೋಪಗೊಂಡ ಮಹಿಳೆ, ನಾನು ಶರ್ಟ್​ ತೆಗೆಯಬೇಕೆಂದು ಬಯಸುತ್ತೀರಾ? ನಾನು ಒಳಗಡೆ ಏನನ್ನೂ ಧರಿಸಿಲ್ಲ ಎನ್ನುತ್ತಾಳೆ ಶರ್ಟ್​ ಕಳಚಿದ್ದಾಳೆ. ಅಲ್ಲಿದ್ದವರು ಬೆರಗುಗಣ್ಣಿನಿಂದಲೇ ನೋಡುತ್ತಲೇ ಇದ್ದರು. ಬಳಿಕ ತನ್ನ ಹಕ್ಕನ್ನು ಚಲಾಯಿಸಿ ಅಲ್ಲಿಂದ ತೆರಳಿದ್ದಾಳೆ.

    ಆಕೆ ಶರ್ಟ್​ ತೆಗೆಯಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಹೊರಗೆ ಹೋಗಿ ಅದೇ ಶರ್ಟ್​ಅನ್ನು ಒಳಮುಖವಾಗಿ ಧರಿಸಿ ಬಂದಿದ್ದರೂ ಆಗುತ್ತಿತ್ತು. ಅದಕ್ಕೆ ಅವಕಾಶವನ್ನೇ ಕೊಡದೇ ಬಟ್ಟೆ ಕಳಚಿದ್ದಾಳೆ ಎಮದು ಅಧಿಕಾರಿ ಹೇಳಿದ್ದಾರೆ.

    ಇದನ್ನೂ ಓದಿ; ಕೋವಿಡ್​ ಲಸಿಕೆ ಕಂಪನಿಗೆ ನೋಟಿಸ್​ ನೀಡಿದ ಔಷಧಮಹಾನಿಯಂತ್ರಕರು; ನಿರೀಕ್ಷೆ ಬೆನ್ನಲ್ಲೇ ಆತಂಕ

    ಅಂಥ ಶರ್ಟ್​ ಧರಿಸಿದ್ದಕ್ಕೆ ಮತಗಟ್ಟೆಯಿಂದಲೇ ಹೊರಹಾಕಬಹುದಾಗಿತ್ತು. ಆದರೆ, 2,000 ಜನರು ಮತ ಚಲಾಯಿಸಬೇಕಿದೆ. ಎಲ್ಲ ಪ್ರಕ್ರಿಯೆಗಳನ್ನು ಸುರಕ್ಷಿತವಾಗಿ ಮುಗಿಸಬೇಕಿದೆ. ನಮಗೆ ಮಾಡೋಕೆ ಬೇರೆ ಬಹಳಷ್ಟು ಕೆಲಸಗಳಿರೋದರಿಂದ ಈ ವಿಷಯವನ್ನು ದೊಡ್ಡದು ಮಾಡಿಲ್ಲ ಎಂದು ಹೇಳಿದ್ದಾರೆ.

    ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts