More

    ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿಧವೆಯನ್ನು ಕಂಬಕ್ಕೆ ಕಟ್ಟಿದ ದುಷ್ಕರ್ಮಿಗಳು​: ಸಹಾಯಕ್ಕೆ ಬಾರದ ಸ್ಥಳೀಯರು

    ಕನ್ಯಾಕುಮಾರಿ: ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ ಮಹಿಳೆಯೊಬ್ಬಳನ್ನು ಗಂಟೆಗಳ ಕಾಲ ಟೆಲಿಫೋನ್​ ಕಂಬಕ್ಕೆ ಕಟ್ಟಿಹಾಕಿ ಕಿರುಕುಳ ನೀಡಿರುವ ಅಮಾನವೀಯ ಘಟನೆ ತಮಿಳುನಾಡಿನ ಕನ್ಯಾಕುಮಾರಿಯ ಕುಜಿತೊರೈ-ಮೆಲ್ಪುರಂ ಜಂಕ್ಷನ್​ನಲ್ಲಿ ನಡೆದಿದೆ.

    ಮಹಿಳೆಯನ್ನು ಬಹಳ ಹೊತ್ತಿನವರೆಗೂ ಕಂಬಕ್ಕೆ ಕಟ್ಟಿ ಕಿರುಕುಳ ನೀಡಲಾಗಿದೆ. ದಾಳಿಕೋರರ ಭಯದಿಂದ ಸ್ಥಳೀಯರು ಯಾರು ರಕ್ಷಣೆಗೆ ಮುಂದೆ ಬರಲಿಲ್ಲ. ಪೊಲೀಸರು ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಬಂಧತರನ್ನು ಪಾಕೋಡ್​ ಮೂಲದವರಾದ ಶಶಿ (47), ವಿನೋದ್​ (44) ಮತ್ತು ವಿಜಯಕಾಂತ್​ (37) ಎಂದು ಗುರುತಿಸಲಾಗಿದೆ. ಮೂವರು ಸಹ ಆಟೋ ಚಾಲಕರು.

    ಇದನ್ನೂ ಓದಿ: ಒಂದು ತಿಂಗಳಿಗೆ ನೀರಿನ ಬಿಲ್ 5209 ರೂ: ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ವಾಗ್ದಾಳಿ

    ಅವಮಾನಕ್ಕೆ ಗುರಿಯಾದ 35 ವರ್ಷದ ಮಹಿಳೆ ಮಾರ್ತಾಂಡಂನಲ್ಲಿ ಖಾಸಗಿ ಸಂಸ್ಥೆ ನಡೆಸುತ್ತಿದ್ದಾರೆ. ವಿಧವೆಯಾಗಿರುವ ಮಹಿಳೆ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಹಿಂದೆಯೂ ಆಟೋ ಚಾಲಕರು ಮಹಿಳೆಯನ್ನು ಚುಡಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಗ್ಗೆ ಕೂಡ ಇದು ಪುನರಾವರ್ತನೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ, ಕಿರುಕುಳ ನೀಡಿದ್ದಾರೆ.

    ಈ ಘಟನೆಯನ್ನು ನೋಡಿದ ಸ್ಥಳೀಯರು ಭಯದಿಂದ ಮಹಿಳೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದಾಗ ಅರುಮನೈ ಪೊಲೀಸರಿಗೆ ವಿಷಯ ತಿಳಿಯಿತು. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ಬಿಡುಗಡೆಗೊಳಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಿ, ಬಂಧಿಸಲಾಗಿದೆ. (ಏಜೆನ್ಸೀಸ್​)

    ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವ: ಧ್ರುವನಾರಾಯಣ ನಿಧನಕ್ಕೆ ಗಣ್ಯರ ಕಂಬನಿ

    ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ವಿಧಿವಶ

    ಬಿಜೆಪಿಗೆ ಬೆಂಬಲ ಘೋಷಣೆ ಹಿಂದಿದೆ ಸುಮಲತಾ ಅಂಬರೀಷ್​ ಮೆಗಾ ಪ್ಲಾನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts