More

    ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವ: ಧ್ರುವನಾರಾಯಣ ನಿಧನಕ್ಕೆ ಗಣ್ಯರ ಕಂಬನಿ

    ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ (61) ಅವರ ಅಕಾಲಿಕ ನಿಧನ ಕಾಂಗ್ರೆಸ್​ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಕಾಂಗ್ರೆಸ್​ ಕಟ್ಟಾಳು ಧ್ರುವನಾರಾಯಣ್ ತೀವ್ರ ಹೃದಯಾಘಾತದಿಂದ ಇಂದು ಮೈಸೂರಿನ ಡಿಆರ್​ಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಬೆಳಗ್ಗೆ 6.30ಕ್ಕೆ ಎದೆ ಉರಿ ಎಂದು ಹೇಳಿ ವೈದ್ಯರಿಗೆ ಧ್ರುವನಾರಾಯಣ್​ ಕರೆ ಮಾಡಿದರು. ನಿಮಗಾಗಿ ನಾನು ಕಾಯುತ್ತಿರುತ್ತೇನೆ ಬನ್ನಿ ಎಂದು ಖ್ಯಾತ ಹೃದಯ ತಜ್ಞ ಸದಾನಂದ ಹೇಳಿದರು. ತುರ್ತು ‌ಚಿಕಿತ್ಸಾ ಘಟಕದಲ್ಲಿ ಧ್ರುವನಾರಾಯಣರಿಗಾಗಿ ಸದಾನಂದ ಅವರು ಕಾಯುತ್ತಿದ್ದಾಗ ತಕ್ಷಣ ಧ್ರುವನಾರಾಯಣ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.

    ಆದರೆ, ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವವಾಗಿ ಬೆಳಗ್ಗೆ 7 ಗಂಟೆಗೆ ಧ್ರುವನಾರಾಯಣ ಅವರು ಮೃತಪಟ್ಟಿದ್ದಾರೆ. ಇಂದೇ ಧ್ರುವನಾರಾಯಣ ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಮಹಿಳೆ ಜತೆ ಯುವಕನನ್ನು ಒಟ್ಟಿಗೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ: ಗ್ರಾಮಸ್ಥರಿಂದ ಅಮಾನವೀಯ ಕೃತ್ಯ

    ಇಂದು ಸಂಜೆ 4 ಗಂಟೆವರಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ್ ಅವರ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಮಾಹಿತಿ ನೀಡಿದ್ದಾರೆ. ಸಂಜೆ 4 ಗಂಟೆಯ ನಂತರ ಧ್ರುವನಾರಾಯಣ್ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

    ಗಣ್ಯರ ಕಂಬನಿ
    ಅಕಾಲಿಕವಾಗಿ ಅಗಲಿದ ಧ್ರುವನಾರಾಯಣ್​ ಅವರ ಸಾವಿಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ವಿಧಿವಶ

    ಬಿಜೆಪಿಗೆ ಬೆಂಬಲ ಘೋಷಣೆ ಹಿಂದಿದೆ ಸುಮಲತಾ ಅಂಬರೀಷ್​ ಮೆಗಾ ಪ್ಲಾನ್!

    ಮಹಿಳೆ ಜತೆ ಯುವಕನನ್ನು ಒಟ್ಟಿಗೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ: ಗ್ರಾಮಸ್ಥರಿಂದ ಅಮಾನವೀಯ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts