More

    ಅಂದು ಹಾಲೋಕಾಸ್ಟ್ ಎದುರಿಸಿದರೆ, ಇಂದು ಕರೊನಾ…

    ಲಂಡನ್: ಅಂದು ಹಾಲೊಕಾಸ್ಟ್ – ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಜ್ಯೂಗಳನ್ನು ಸಾಮೂಹಿಕವಾಗಿ ಕೊಲೆ ಮಾಡಲಾದ ಸಂದರ್ಭ…. ಇಂದು ಕರೊನಾ – ಹಿರಿಯ ನಾಗರೀಕರನ್ನೇ ಸುಲಭವಾಗಿ ತನ್ನ ಶಿಕಾರಿ ಮಾಡಿಕೊಳ್ಳುತ್ತಿರುವ ಮಾರಕ ರೋಗ… ಎರಡನ್ನೂ ಗೆದ್ದಾಕೆ ಈಕೆ! ಈಸಬೇಕು ಇದ್ದು ಜೇಸಬೇಕು ಎಂಬ ಸಿದ್ಧಾಂತಕ್ಕೆ ಜೀವಂತ ಉದಾಹರಣೆ! ಈಕೆ 97 ವರ್ಷದ ಉತ್ತರ ಲಂಡನ್ ನಿವಾಸಿ ಲಿಲಿ ಎಬರ್ಟ್.

    1944 ರಲ್ಲಿ ತಮ್ಮ ಹದಿಹರೆಯದಲ್ಲಿ ಆಶ್ವಿಡ್ಜ್​ನ ನಾಜಿ ಕ್ಯಾಂಪಿನಲ್ಲಿ 4 ತಿಂಗಳು ಕಳೆದಿದ್ದರು ಲಿಲಿ. ತನ್ನ ತಾಯಿ, ಸಹೋದರ-ಸಹೋದರಿ ಹಾಗೂ ಕುಟುಂಬದ ನೂರಾರು ಜನರನ್ನು ನಾಜಿಗಳು ಕೊಂದಿದ್ದಕ್ಕೆ ಸಾಕ್ಷಿಯಾಗಿದ್ದ ಲಿಲಿಯನ್ನು 1945 ರಲ್ಲಿ ಪಾರುಮಾಡಿ, ಸ್ವಿಜರ್​ಲೆಂಡಿಗೆ ತರಲಾಗಿತ್ತು. ಇದೀಗ ಉತ್ತರ ಲಂಡನ್​ನಲ್ಲಿ ತಮ್ಮ ಕುಟುಂಬದೊಡನೆ ಜೀವನ ಸಾಗಿಸುತ್ತಿರುವ ಲಿಲಿ​ಗೆ ಒಂದು ತಿಂಗಳ ಹಿಂದೆ ಕರೊನಾ ಸೋಂಕು ತಗುಲಿತು. ಪೂರ್ಣ ನಿಶ್ಶಕ್ತಿಯಿಂದ ಬಳಲಿದ ಆಕೆಯ ದೇಹ, ಮೂರು ವಾರಗಳ ಕಾಲ ವೈದ್ಯಕೀಯ ಶುಶ್ರೂಷೆಯೊಂದಿಗೆ ಕರೊನಾ ವೈರಾಣುವಿನ ವಿರುದ್ಧ ಹೋರಾಡಿತು. ರೋಗದಿಂದ ಗುಣಮುಖರಾದ ಲಿಲಿ ಈಗ ಬದುಕಿಗೆ ಮತ್ತೆ ಹೆಲೋ ಹೇಳಿದ್ದಾರೆ.

    ಇದನ್ನೂ ಓದಿ: VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಇತ್ತೀಚೆಗೆ ಲಿಲಿಯ ಮರಿಮೊಮ್ಮಗ ಡೋವ್ ಫೋರ್ಮನ್ ಅವರ ಚಿತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದರು. ಕರೊನಾದಿಂದ ಚಮತ್ಕಾರಿಕವಾಗಿ ಗುಣಮುಖವಾದ ಮೇಲೆ ಲಿಲಿ ಮತ್ತೆ ಬೆಳಗ್ಗೆಯ ವಾಕಿಂಗ್ ಹೋದ ಸಂದರ್ಭದ ಚಿತ್ರವದು. “ಎ ಫೈಟರ್ ಅಂಡ್ ಸರ್ವೈವರ್” ಎಂದು ಹೊಗಳಿ ಆಕೆಯ ನಗುಮೊಗದ ಚಿತ್ರ ಹಾಕಿದ್ದ ಈ ಪೋಸ್ಟ್​ಗೆ ಹಲವು ಲಕ್ಷ ಲೈಕ್​ಗಳು ಸಿಕ್ಕವು. ಆಕೆಯ ಜೀವನೋತ್ಸಾಹಕ್ಕೆ ಸಾವಿರಾರು ಜನರು ಶ್ಲಾಘನೆಯ ಮಳೆಗರೆದರು. ಆ ನಂತರ ಇಂಗ್ಲೆಂಡಿನ ‘ಗುಡ್ ಮಾರ್ನಿಂಗ್ ಬ್ರಟೆನ್’ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ ಲಿಲಿ ಜೀವನಸ್ಫೂರ್ತಿಯ ಮಾತುಗಳನ್ನು ಆಡಿ ಇನ್ನಷ್ಟು ಜನಪ್ರಿಯತೆ ಗಳಿಸಿದರು.

    ಕೆಟ್ಟ ಅನುಭವಗಳನ್ನು ಮೆಟ್ಟಿ ಬದುಕು ಸಾಗಿಸಿರುವ ಲಿಲಿ, “ಸಂಕಷ್ಟಗಳ ನಡುವೆ ಸಕಾರಾತ್ಮಕವಾಗಿ ಬದುಕಬೇಕು” ಎಂದು ಜನರಿಗೆ ಸಂದೇಶ ನೀಡಿದ್ದಾರೆ. “ನಾವು ಬದಕನ್ನು ಆಯ್ಕೆ ಮಾಡಬಹುದು, ಇಲ್ಲವೇ ಕತ್ತಲನ್ನು. ನಾನು ಬದುಕನ್ನು ಆಯ್ಕೆ ಮಾಡುತ್ತೇನೆ” ಎಂದಿದ್ದಾರೆ. “ಕರೊನಾ ಯಾವಾಗ ಅಂತ್ಯವಾಗುತ್ತೆ ನಮಗೆ ಗೊತ್ತಿಲ್ಲ. ಆದರೆ ನಾವೇನು ಮಾಡಬಹುದು ಎಂಬುದು ಗೊತ್ತು. ಗಿವ್ಅಪ್ ಮಾಡದೆ ಬದುಕುಳಿಯಲು ನಮ್ಮ ಕೈಲಾದದನ್ನು ಮಾಡಬೇಕು; ಬೇರೆಯವರಿಗೆ ಸೋಂಕು ತಗುಲದಂತೆ ಹುಷಾರಾಗಿರಬೇಕು ಅಷ್ಟೆ” ಎಂದು ಕಿವಿಮಾತು ಹೇಳಿದ್ದಾರೆ.(ಏಜೆನ್ಸೀಸ್)

    ‘ಕೃಷಿ ಕಾನೂನುಗಳಲ್ಲಿ ಲೋಪವೇನು ತೋರಿಸಿ’ ಎಂದು ಸವಾಲು ಹಾಕಿದ ತೋಮರ್

    ಚಂದದ ಮೂಗಿನ ಅಂದ ಹೆಚ್ಚಿಸಲು ಹೋದ ಸೆಲೆಬ್ರಿಟಿಗೆ ಕಾದಿತ್ತು ಶಾಕ್​! ಆಗಿದ್ದೇನು ಗೊತ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts