More

    ಹಲ್ಲು ನೋವನ್ನೆಂದೂ ನಿರ್ಲಕ್ಷಿಸಬೇಡಿ…ಜ್ಞಾಪಕ ಶಕ್ತಿ ಕಳೆದುಕೊಂಡು, 5 ತಿಂಗಳು ಒದ್ದಾಡಿದ ಈ ಮಹಿಳೆಯ ದುರಂತ ಅನುಭವ ಓದಿ

    ನಿಮಗೇನಾದರೂ ಬಹುಕಾಲದಿಂದ ಹಲ್ಲುನೋವು ಕಾಡುತ್ತಿದ್ದು, ನೀವದನ್ನು ನಿರ್ಲಕ್ಷಿಸುತ್ತಲೇ ಬಂದಿದ್ದರೆ ಈ ಸುದ್ದಿ ಓದಿದ ಬಳಿಕವಾದರೂ ತಡ ಮಾಡದೆ ವೈದ್ಯರ ಬಳಿ ಹೋಗಿ.

    ರೆಬೆಕ್ಕಾ ಡಾಲ್ಟನ್​ ಎಂಬ ಬ್ರಿಟಿಷ್​ ಮಹಿಳೆಯ ದುರಂತದ ಕತೆಯಿದು. ಅಯ್ಯೋ ಹಲ್ಲು ನೋವು ತಾನೆ..ಬರತ್ತೆ ಹೋಗತ್ತೆ ಅದೇನು ಮಹಾ ಎಂದು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ ಈ ನಾಲ್ಕು ಮಕ್ಕಳ ತಾಯಿ, ಅದೇ ನೋವಿನಿಂದ ಸಾವಿನ ದವಡೆಗೂ ಹೋಗಿಬಂದಿದ್ದಾರೆ. ಇದನ್ನೂ ಓದಿ: ಬೆಣ್ಣೆ ಕದಿಯೋದೇ ಇವ್ರ ಕೆಲ್ಸ- ಕಾರಣ ಕೇಳದ್ರೆ ಅಚ್ಚರಿ ಪಡ್ತೀರಾ 

    ಹಲ್ಲು ನೋವು ತೀವ್ರತೆಗೆ ಹೋಗಿ, ಅದೇ ಬ್ಯಾಕ್ಟೀರಿಯಾಗಳು ಮಹಿಳೆಯ ಮಿದುಳು, ಹೃದಯ, ಲಿವರ್​​ವರೆಗೂ ಹೋಗಿ ಅವಾಂತರ ಸೃಷ್ಟಿಸಿವೆ. ಇದರಿಂದಾಗಿ ಮಹಿಳೆ ಬರೋಬ್ಬರಿ 5 ತಿಂಗಳು ಆಸ್ಪತ್ರೆಯಲ್ಲೇ ಕಳೆಯುವಂತಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
    2019ರ ಡಿಸೆಂಬರ್​ನಲ್ಲಿ ರೆಬೆಕ್ಕಾ ಅವರಿಗೆ ಮೊದಲ ಬಾರಿಗೆ ಹಲ್ಲುನೋವು ಕಾಣಿಸಿಕೊಂಡು, ದಂತದ ಬಳಿ ಬಾವು ಉಂಟಾಗಿತ್ತು. ಎರಡು ತಿಂಗಳು ನಿರ್ಲಕ್ಷಿಸಿದ ಅವರು ಮಾರ್ಚ್​​ನಲ್ಲಿ ಡೆಂಟಿಸ್ಟ್​ ಬಳಿ ಹೋದರು. ವೈದ್ಯರೂ ಚಿಕಿತ್ಸೆ ನೀಡಿದ್ದರು. ಇನ್ನೇನು ಹಲ್ಲು ನೋವು ಕಡಿಮೆಯಾಗುತ್ತದೆ ಎಂದು ಕೊಂಡಿದ್ದ ರೆಬೆಕ್ಕಾಗೆ ದೊಡ್ಡ ಶಾಕ್​ ಕಾದಿತ್ತು. ಸ್ವಲ್ಪ ದಿನಗಳ ನಂತರ ಎದ್ದು ನಡೆಯಲೂ ಸಾಧ್ಯವಾಗದೆ ಹೋಯಿತು. ನೆನಪುಗಳೂ ಮಾಸುತ್ತ ಬಂದವು.

    ಕೂಡಲೇ ಅವರನ್ನು ಸ್ಕಂಟ್​ ಹಾರ್ಪ್​​ನ ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್​ ಮಾಡಲಾಯಿತು. ಆಗ ಹಲ್ಲಿನ ನೋವಿಗೆ ಕಾರಣವಾದ ಬ್ಯಾಕ್ಟೀರಿಯಾಗಳು ಮಿದಳು ಪ್ರವೇಶಿಸಿದ್ದು ಬೆಳಕಿಗೆ ಬಂತು. ಅಷ್ಟೇ ಅಲ್ಲ, ಹೃದಯ, ಲಿವರ್​ಗಳಿಗೂ ಅಟ್ಯಾಕ್​ ಮಾಡಿದ್ದವು. ರೆಬೆಕ್ಕಾ ಪೂರ್ತಿಯಾಗಿ ನಡೆಯುವ ಸಾಮರ್ಥ್ಯವನ್ನೇ ಕಳೆದುಕೊಂಡಾಗ ಹಲ್​ ರಾಯಲ್​ ಆಸ್ಪತ್ರೆಯ ನರರೋಗ ಚಿಕಿತ್ಸಾ ವಿಭಾಗಕ್ಕೆ ಆಕೆಯನ್ನು ವರ್ಗಾಯಿಸಿ, ಚಿಕಿತ್ಸೆ ಪ್ರಾರಂಭ ಮಾಡಲಾಯಿತು. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಗೆ ಓವೈಸಿ ನೀಡಿದ್ದಾರೊಂದು ಎಚ್ಚರಿಕೆ…!

    ಆದರೆ ಅಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಸ್ಕಂಟ್​ಹಾರ್ಪ್​ ಆಸ್ಪತ್ರೆಯಲ್ಲಿ ಅದಾಗಲೇ ಕೊವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದುದರಿಂದ ರೆಬೆಕ್ಕಾಗೆ ಕೊವಿಡ್​-19 ಟೆಸ್ಟ್​ ಮಾಡಿಸುವುದು ಅನಿವಾರ್ಯವಾಗಿತ್ತು. ಒಂದೊಮ್ಮೆ ಕರೊನಾ ಕೂಡ ತಗುಲಿದರೆ ಆಕೆಯನ್ನು ಬದುಕಿಸಲು ಸಾಧ್ಯವೇ ಇಲ್ಲ ಎಂದು ವೈದ್ಯರು ರೆಬೆಕ್ಕಾ ಅವರ ತಾಯಿಗೆ ಹೇಳಿದ್ದರು. ಅದೃಷ್ಟವಶಾತ್​ ಕರೊನಾ ಟೆಸ್ಟ್ ವರದಿ ನೆಗೆಟಿವ್​ ಎಂದು ಬಂತು.

    ಅಂತೂ ಐದು ತಿಂಗಳ ಚಿಕಿತ್ಸೆ ಬಳಿಕ ಈಗ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಸುಮಾರು 30 ಕೆಜಿ ತೂಕ ಕಳೆದುಕೊಂಡಿದ್ದಾರೆ. ಕಳೆದ ವಾರ ಡಿಸ್​ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ನಂತರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರೆಬೆಕ್ಕಾ, ಇದೊಂದು ಬದುಕನ್ನೇ ಬದಲಿಸಿದ ಅನುಭವ. ನಿಜಕ್ಕೂ ತುಂಬ ಕಷ್ಟಪಟ್ಟೆ. ನನಗೆ ಬದುಕಿನೆಡೆಗೆ ಇದ್ದ ದೃಷ್ಟಿಕೋನವೇ ಬದಲಾಗಿ ಹೋಯಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ನಾನು ಡ್ರಾಮಾ ಮಾಡ್ತಿಲ್ಲ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಪೋಸ್ಟ್ ಮಾಡಿದ ನಟಿ ವಿಜಯಲಕ್ಷ್ಮೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts