More

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪಿಎಸ್​ಐ ಮೃತದೇಹ ಪತ್ತೆ: ಅನುಮಾನ ಮೂಡಿಸಿದ ಡೆತ್​ನೋಟ್​!

    ಲಖನೌ: ಉತ್ತರ ಪ್ರದೇಶದ ಮೀರತ್​ ಮೂಲದ ಮಹಿಳಾ ಪಿಎಸ್​ಐ ಒಬ್ಬರ ಮೃತದೇಹವು ಬುಲಂದ್​ಶಹರ್ ಜಿಲ್ಲೆಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ​ ಪತ್ತೆಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

    ಮೃತ ಪಿಎಸ್​ಐ ಅನ್ನು ಆರ್ಜೋ ಪವಾರ್(30)​ ಎಂದು ಗುರುತಿಸಲಾಗಿದೆ. ಅನೂಪ್​ಶಹರ್​ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನೆಯ ಬಾಗಿಲ ಬಡಿದರೂ ತೆಗೆಯದಿದ್ದನ್ನು ನೋಡಿ ಮನೆಯ ಮಾಲಕಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಹವನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದಾರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಇದನ್ನೂ ಓದಿ: ರಾತ್ರಿ ಕಾರು ಪಾರ್ಕ್​ ಮಾಡಿ ಬೆಳಗೆದ್ದು ನೋಡುವಷ್ಟರಲ್ಲಿ ದಂಪತಿಗೆ ಕಾದಿತ್ತು ಬಿಗ್​ ಶಾಕ್​!

    ಇನ್ನು ಘಟನಾ ಸ್ಥಳದಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಈ ಬಗ್ಗೆ ಮಾತನಾಡಿರುವ ಬುಲಂದ್​ಶಹರ್​ ಎಸ್​​ಎಸ್​ಪಿ ಸಂತೋಷ್ ಕುಮಾರ್​, ತನ್ನ ಸಾವಿಗೆ ಆರ್ಜೋ ಅವರು ತಮ್ಮನ್ನೇ ದೂಷಿಸಿಕೊಂಡಿದ್ದಾರೆ. ಸಾವಿಗೆ ತಾನೇ ಜವಬ್ದಾರಿಯೆಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆಂದು ತಿಳಿಸಿದ್ದಾರೆ.

    ಬೆಡ್​ ಮೇಲೆ ಡೆತ್​ನೋಟ್​ ಮತ್ತು ಒಂದು ಪೆನ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಮೊಬೈಲ್​ ಫೋನ್​ ಕೂಡ ಸೀಜ್​ ಮಾಡಲಾಗಿದೆ. ಲಾಕ್​ ತೆರೆದು ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದಾರೆಂದು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆಂದು ಎಸ್​ಎಸ್​ಪಿ ಮಾಹಿತಿ ನೀಡಿದರು.

    ಮೂಲತಃ ಶಾಮ್ಲಿ ಜಿಲ್ಲೆಯ ಆರ್ಜೋ 2015ರಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾದರು. ಬುಲಂದ್​ಶಹರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ಮನೆಯ ಮಾಲಕಿ ಆರ್ಜೋ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ಮಾಲಕಿ ಮನೆಯ ಬಳಿ ಹೋಗಿ ನೋಡಿದಾಗ ಒಳಗಡೆಯಿಂದ ಲಾಕ್​ ಮಾಡಿರುವುದು ತಿಳಿಯುತ್ತದೆ. ಬಳಿಕ ಬಾಗಿಲು ಬಡಿದಾಗಲೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ಲಾಸ್​ ವೆಂಟಿಲೇಟರ್​ ಮೂಲಕ ಒಳ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕೋಣೆಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಬಾಗಿಲು ಮುರಿದು ಒಳ ನುಗ್ಗಿದ್ದಾರೆ.

    ಇದನ್ನೂ ಓದಿ: ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

    ಇನ್ನು ಎಸ್​ಐ ಆರ್ಜೋ ಅವರನ್ನ ಬುಲಂದ್​ಶಹರ್​ ಜಿಲ್ಲೆಯ ಅನುಪ್​ಶಹರ್​ ಪೊಲೀಸ್​ ಠಾಣೆಗೆ ಪೋಸ್ಟಿಂಗ್​ ಮಾಡಲಾಗಿತ್ತು. ತಮ್ಮ ಮನೆಯ ರೂಮ್​ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇನ್ನು ಆರ್ಜೋ ಬಾಡಿಗೆ ಮನೆಯಲ್ಲಿ ಏಕಾಂಗಿ ವಾಸಿಸುತ್ತಿದ್ದರು. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಪೊಲೀಸರ ಋಣ ತೀರಿಸಿದ ಗ್ರಾಮ ಪಂಚಾಯಿತಿಯ ನೂತನ ಸದಸ್ಯ?

    ನಿರ್ಗತಿಕ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಟ್ಟ ಎಸ್​ಐ: ಇವರ ಕತೆ ಕೇಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

    4 ಕೆ.ಜಿ. ಚಿನ್ನಾಭರಣ ಜಪ್ತಿ: ಕಳ್ಳತನಕ್ಕೆ ಉತ್ತರ ಪ್ರದೇಶದಿಂದ ಬರ್ತಿದ್ದ ಖತರ್ನಾಕ್​ ಗ್ಯಾಂಗ್​ ಕತೆ ಕೇಳಿದ್ರೆ ಶಾಕ್​ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts