More

    ಬಂಧಿಸಲು ಬಂದ ಪೊಲೀಸರ ಎದುರು ಮಹಿಳೆಯೊರ್ವಳು ತೊಟ್ಟ ಬಟ್ಟೆಗಳನ್ನೆಲ್ಲಾ ಕಿತ್ತೆಸೆದಿದ್ದೇಕೆ?

    ಮ್ಯಾಡ್ರಿಡ್​: ಕರೊನಾ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕೆ ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಿದ ಪೊಲೀಸರ ವಿರುದ್ಧ ಮಹಿಳೆಯೋರ್ವಳು ವಿಚಿತ್ರವಾಗಿ ಪ್ರತಿಭಟಿಸಿದ ಘಟನೆ ಸ್ಪೇನ್​ನಲ್ಲಿ ನಡೆದಿದೆ.

    ಸ್ಪೇನ್​ನ ಟೊರೆಮೊಲಿನೋಸ್​ ನಗರದ ಕೋಸ್ಟಾ ಡೆಲ್​ ಸಾಲ್​ ರೆಸಾರ್ಟ್​ನಲ್ಲಿ ವಾಸವಿರುವ 41 ವರ್ಷದ ಮಹಿಳೆಯನ್ನು ಲಾಕ್​ಡೌನ್​ ನಿಯಮ ಉಲ್ಲಂಘನೆ ಆರೋಪದಡಿ ಬಂಧಿಸಲಾಗಿತ್ತು. ಅಲ್ಲದೆ, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆದರೆ, ಕೋರ್ಟ್​ನಿಂದ ಬಿಡುಗಡೆ ಹೊಂದಿದ ಆಕೆ ಪೊಲೀಸರ ವಿರುದ್ಧ ಪ್ರತಿಭಟಿಸಲು ಮುಂದಾಗಿ, ತನ್ನೆಲ್ಲಾ ಬಟ್ಟೆಗಳನ್ನು ಕಿತ್ತೆಸೆದು ಪೊಲೀಸ್​ ಕಾರಿನ ಮೇಲೆ ಜಿಗಿದು ವಿಚಿತ್ರವಾಗಿ ವರ್ತಿಸಿದ್ದಾರೆ.

    ಅಷ್ಟಕ್ಕೂ ನಡೆದಿದ್ದೇನು?
    ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತುರ್ತು ಸೇವೆಗಳನ್ನು ಶ್ಲಾಘಿಸಿದ ನೆರೆಹೊರೆಯವರಿಗೆ ಕಿರಿಕಿರಿ ಉಂಟುಮಾಡಿದ ಮಹಿಳೆಯನ್ನು ಶನಿವಾರ ರಾತ್ರಿ 8 ಗಂಟೆಗೆ ಪೊಲೀಸರು ಬಂಧಿಸಿದರು. ಈ ವೇಳೆ ಹೈಡ್ರಾಮವೇ ನಡೆದಿದೆ. ಮೊದಲು ಬಂಧಿಸುವುದನ್ನು ವಿರೋಧಿಸಿದ ಆಕೆ ಬೆತ್ತಲಾಗಲು ಯತ್ನಿಸಿದ್ದಾಳೆ. ಬಳಿಕ ನ್ಯಾಯಾಲಯಕ್ಕೆ ಬಲವಂತವಾಗಿ ಎಳೆದೊಯ್ದಾಗ ಇಡೀ ಬಟ್ಟೆಯನ್ನು ಕಿತ್ತೆಸೆದು ಪೂರ್ಣ ಬೆತ್ತಲಾಗಿದ್ದಾಳೆ. ಬಟ್ಟೆಯ ಸಮೇತ ನ್ಯಾಯಾಲಯದ ಮುಂದೆ ಹಾಜರಾದ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಪೊಲೀಸರ ಕಾರಿನ ಮೇಲೇರಿದ ಮಹಿಳೆ ಪೊಲೀಸರ ವಿರುದ್ಧ ಬೆತ್ತಲೆ ಪ್ರತಿಭಟನೆ ನಡೆಸಿದ್ದಾಳೆ.

    ಬಳಿಕ ಆಕೆಯನ್ನು ಪೊಲೀಸರು ಕಾರಿನಿಂದ ಹೇಗೋ ಹರಸಾಹಸಪಟ್ಟು ಕೆಳಗಿಳಿಸಿದ್ದಾರೆ. ಆಗಲೂ ರಸ್ತೆಯಲೆಲ್ಲಾ ಅಡ್ಡಾಡಿ ಪೊಲೀಸ್​ ಸಿಬ್ಬಂದಿಯನ್ನು ಸಿಕ್ಕಾಪಟ್ಟೆ ಕಾಡಿದ್ದಾಳೆ. ಕೊನೆಗೆ ಆಕೆಯನ್ನು ಆಂಬುಲೆನ್ಸ್​ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸಲಾಯಿತು. (ಏಜೆನ್ಸೀಸ್​)

    VIDEO| ಹೆಬ್ಬಾವು-ಚಿರತೆ ನಡುವಿನ ಭೀಕರ ಕಾದಾಟದಲ್ಲಿ ಕೊನೆಯಲ್ಲಿ ಗೆದ್ದಿದ್ದು ಯಾರಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts