More

  ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಮಹಿಳೆ! ಆಕೆಯ ಜಾಗದಲ್ಲಿ… ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ

  ನವದೆಹಲಿ: ದಿನೇ ದಿನೇ ಇಂತಹ ವಿಡಿಯೋ ಪ್ರಕರಣಗಳ ಹಾವಳಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದ್ದು, ವಿಚಿತ್ರ ಹಾಗೂ ವಿಲಕ್ಷಣ ಘಟನೆಗಳು ಬೆಳಕಿಗೆ ಬರುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವುದು, ಅಸಭ್ಯ ವಿಡಿಯೋಗಳ ರೆಕಾರ್ಡಿಂಗ್ ಮೂಲಕ ಸ್ಥಳೀಯರನ್ನು ತೀವ್ರ ಮುಜುಗರಕ್ಕೆ ಒಳಪಡಿಸುವ ಘಟನೆಗಳಿಗೆ ಬ್ರೇಕ್ ಬೀಳುವಂತೆ ಕಾಣಿಸುತ್ತಿಲ್ಲ. ಸದ್ಯ ಇಂತಹದ್ದೇ ಒಂದು ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮಹಿಳೆಯ ನಡೆಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: ನಿತೀಶ್​ ರೆಡ್ಡಿ ಆಲ್​ರೌಂಡರ್​ ಪ್ರದರ್ಶನ: ಸನ್​ರೈಸರ್ಸ್​ ಹೈದರಾಬಾದ್ ಎದುರು ಶರಣಾದ ಪಂಜಾಬ್​ ಕಿಂಗ್ಸ್​​

  ದೆಹಲಿಯ ಪಾಲಿಕಾ ಬಜಾರ್‌ನಲ್ಲಿ ಮಹಿಳೆಯೊಬ್ಬಳು ಬಟ್ಟೆ ಅಂಗಡಿಯವನ ಮುಂದೆಯೇ ತಾನು ಆಯ್ಕೆ ಮಾಡಿಕೊಂಡ ಉಡುಪನ್ನು ಟ್ರೈಯಲ್ ನೋಡಲೆಂದು ಡೋರಿನ ಒಳಗೆ ಹೋಗುವ ಬದಲಿಗೆ ಆತನ ಮುಂದೆಯೇ ಬಟ್ಟೆ ಬಿಚ್ಚಿರುವುದು ವಿಡಿಯೋದಲ್ಲಿ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾಳೆ. ತನ್ನ ಶಾರ್ಟ್ಸ್ ಅನ್ನು ತೆರೆದು, ಮತ್ತೊಂದು ಉಡುಪನ್ನು ಧರಿಸುವ ವಿಡಿಯೋ ಕ್ಲಿಪ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಕೆಲವರು ಇದು ಗೋವಾದ ಬಟ್ಟೆ ಅಂಗಡಿ ಎಂದು ಹೇಳಿದರೆ, ಇನ್ನು ಕೆಲವರು ಇಂತಹ ವಿಡಿಯೋ ಮಾಡಿಕೊಳ್ಳಲು ಕಾರಣವೇನು? ಇದೇ ಆಕೆಯ ಜಾಗದಲ್ಲಿ ಯುವಕ ಹಾಗೆ ಮಾಡಿದ್ದಿದ್ದರೇ ಸುಮ್ಮನಿರುತ್ತಿದ್ದರಾ? ಯಾಕೆ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲ ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ತಾನು ಶಾರ್ಟ್ಸ್​​ ಬಿಚ್ಚುತ್ತಿರುವುದನ್ನು ರೆಕಾರ್ಡ್​ ಮಾಡಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಆಗಿ ಅಪ್‌ಲೋಡ್ ಮಾಡಲು ಉದ್ದೇಶಿಸಲಾಗಿದೆ ಎಂದು ವೀಡಿಯೊದಿಂದ ಸ್ಪಷ್ಟವಾಗಿದೆ.

  ಇದನ್ನೂ ಓದಿ: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌: ​ಸಿಇಒ, ಎಂಡಿ ಹುದ್ದೆಗೆ ಸುರೀಂದರ್​ ಚಾವ್ಲಾ ರಾಜೀನಾಮೆ

  ಕೇವಲ ಒಂದು ರೀಲ್ ವಿಡಿಯೋಗೆ ಇಷ್ಟು ಕೀಳುಮಟ್ಟಕ್ಕೆ ಇಳಿಯಬೇಕೆ? ಇಂತಹ ಮನಸ್ಥಿತಿ ಏಕೆ? ರೀಲ್ ಸಂಸ್ಕೃತಿ ನಿಜಕ್ಕೂ ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ ಎಂದು ಅನೇಕ ನೆಟ್ಟಿಗರು ಕಮೆಂಟ್ ಮೂಲಕ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್). 

  ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

  11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್ ಸಿನಿಮಾ! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts