More

    ಮಹಿಳೆಯರಿಗೆ ಸ್ಪೂರ್ತಿ ಒನಕೆ ಓಬವ್ವ

    ಕಾನಹೊಸಹಳ್ಳಿ: ಅರಸೊತ್ತಿಗೆ ಇಲ್ಲದೆ ಅಶ್ರಯ ನೀಡಿದ ಸಂಸ್ಥಾನ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೋರಾಡಿ ವೀರ ಮರಣನಪ್ಪಿ ಚರಿತ್ರೆಯಲ್ಲಿ ಸ್ಥಿರವಾದಳು ಒನಕೆ ಓಬವ್ವ ಎಂದು ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ ಹೊನ್ನಾಳ್ ಹೇಳಿದರು.

    ಇದನ್ನೂ ಓದಿ: ಒನಕೆ ಓಬವ್ವ ಜಯಂತಿ 11ರಂದು

    ಸಮೀಪದ ಗುಡೇಕೋಟೆ ನಾಡಕಚೇರಿಯಲ್ಲಿ ಶನಿವಾರ ನಡೆದ ವೀರವನತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾಮಾಲೆ ಸಲ್ಲಿಸಿ ಮಾತನಾಡಿದರು.

    ಕಹಳೆ ಚನ್ನಪ್ಪ ಮಗಳಾಗಿ ಗುಡೇಕೋಟೆಯಲ್ಲಿ 17ನೇ ಶತಮಾನದಲ್ಲಿ ಜನಿಸಿದ ಓಬವ್ವ ಗ್ರಾಮದ ಪುತ್ರಿ ಎಂಬ ಹೆಮ್ಮೆ ಇದೆ. ಸಾಹಸ, ಶೌರ್ಯ ಸಂಕೇತವಾಗಿ ಮಹಿಳಾ ಕುಲಕ್ಕೆ ಹೆಸರಾಗಿದ್ದಾಳೆ.

    ಕಾವಲುಗಾರನ ಪತ್ನಿಯಾಗಿ ಚಿತ್ರದುರ್ಗ ಪಾಳೆಯಗಾರ ಸಂಸ್ಥಾನ ಉಳುವಿಗಾಗಿ ಮಾಡಿದ ಹೋರಾಟ ಕರ್ನಾಟಕ ಇತಿಹಾಸ ಪುಟದಲ್ಲಿ ರೋಚಕವಾಗಿ ದಾಖಲಾಗಿದೆ ಎಂದರು. ನಾಗಮ್ಮ, ಕೃಷ್ಣ ಹಾಲಸಾಗರ, ಸುಂದರ್, ಪರಮೇಶಪ್ಪ, ಭೀಮಪ್ಪ, ಅಂಜಿನಪ್ಪ, ಮುಸ್ಟೂರಪ್ಪ, ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts