More

  ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿ

  ಯಲಬುರ್ಗಾ; ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಶಿಸ್ತಿನ ಸಿಪಾಯಿಗಳಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.

  ಇದನ್ನೂ ಓದಿ: ಸ್ವಾವಲಂಬಿ ಕುಟುಂಬಕ್ಕೆನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

  ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

  ಮಹಿಳೆಯರಿಗೆ ಸಾಲ ನೀಡುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಂಸ್ಥೆ ಸಹಕಾರಿಯಾಗಿದೆ. ಸ್ತ್ರೀಯರು ಉದ್ಯೋಗಸ್ಥರಾಗಿ ಜೀವನ ಮಟ್ಟವನ್ನ ಸುಧಾರಿಸುತ್ತಿದ್ದಾರೆ. ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದು ಸದುಪಯೋಗ ಪಡೆಯಬೇಕು ಎಂದರು.

  ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಕೀರ್ತಿ ಜಕ್ಕಲಿ, ಸಾಹಿತಿ ವೀರಣ್ಣ ನಿಂಗೋಜಿ, ಶಿಲ್ಪಾ ಅರಕೇರಿ, ಗಣ್ಯರಾದ ಚನ್ನಮ್ಮ ಪಾಟೀಲ್, ತ್ರಿವೇಣಿ, ಧರಣಿ, ಮಹಿಳಾ ಜ್ಞಾನ ವಿಕಾಸದ ಗೀತಾ ಲೋಕರೆ, ತಾಲೂಕು ಯೋಜನಾ ನಿರ್ದೆಶಕ ಟಿ. ಸತೀಶ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts