More

    ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

    ನವದೆಹಲಿ: ಇಪ್ಪತ್ತೇಳು ವರ್ಷಗಳ ಹಿಂದೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಮಹಿಳೆಯೊಬ್ಬಳು ದೂರು ಕೊಟ್ಟು ಆರೋಪಿಗಳಿಗೆ ಶಿಕ್ಷೆ ಕೋರಿರುವ ಪ್ರಸಂಗ ದೆಹಲಿ ನಗರದಿಂದ ವರದಿಯಾಗಿದೆ. ಅತ್ಯಾಚಾರದ ಫಲವಾಗಿ ಹುಟ್ಟಿದ ಮಗ ಬೆಳೆದು ದೊಡ್ಡವನಾದ ಮೇಲೆ ಅಪ್ಪನ ಹೆಸರು ಕೇಳಲಾಗಿ, ಮಹಿಳೆಯು ಈ ಅಪರಾಧದ ಬಗ್ಗೆ ತಿಳಿಸಿ, ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾಳೆ ಎನ್ನಲಾಗಿದೆ.

    ದೂರು ನೀಡಿರುವ ಮಹಿಳೆ 12 ವರ್ಷ ವಯಸ್ಸಿನವಳಾಗಿದ್ದಾಗ, ಸುಮಾರು 27 ವರ್ಷಗಳ ಹಿಂದೆ, ದೆಹಲಿ ನಗರದಲ್ಲಿ ತನ್ನ ಅಕ್ಕ ಮತ್ತು ಭಾವನೊಂದಿಗೆ ವಾಸಿಸುತ್ತಿದ್ದಳು. ಅವಳು ಒಬ್ಬಳೇ ಇದ್ದಾಗ ಅದೇ ಪ್ರದೇಶದ ನಿವಾಸಿಯಾಗಿದ್ದ ನಾಕಿ ಹಸನ್​ ಎಂಬುವವನು ಮನೆಗೆ ನುಗ್ಗಿ ಅವಳ ಮೇಲೆ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಆನಂತರ ನಾಕಿ ಹುಸೇನ್ ಮತ್ತು ಅವನ ತಮ್ಮ ಗುಡ್ಡು ಸೇರಿ ಅನೇಕ ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ ಎಂದು ದೆಹಲಿ ನಗರ ಎಸ್ಪಿ ಸಂಜಯ್​ಕುಮಾರ್ ಶನಿವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

    ಅತ್ಯಾಚಾರದ ಫಲವಾಗಿ ಆಕೆ ಗರ್ಭಿಣಿಯಾಗಿದ್ದು, 13 ರ ಹರೆಯದಲ್ಲಿ 1994 ನೇ ಇಸವಿಯಲ್ಲಿ ಗಂಡುಮಗುವೊಂದಕ್ಕೆ ಜನ್ಮ ನೀಡಿದ್ದಳು. ಆ ಮಗುವನ್ನು ಆಕೆಯ ಊರಾದ ಉದ್ಧಮಪುರದ ನಿವಾಸಿಯೊಬ್ಬರಿಗೆ ಕೊಟ್ಟಿದ್ದು, ಆಕೆಯು ತನ್ನ ಭಾವನಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅಕ್ಕಭಾವನೊಂದಿಗೆ ರಾಮಪುರದಲ್ಲಿ ವಾಸಿಸಲು ಆರಂಭಿಸಿದ್ದಳು. ನಂತರ ಆಕೆಗೆ ಘಾಜಿಪುರ ಜಿಲ್ಲೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಲಾಯಿತು.

    ಆದರೆ, ವಿವಾಹದ 10 ವರ್ಷಗಳ ನಂತರ ಆಕೆಯ ಮೇಲಾದ ಅತ್ಯಾಚಾರದ ವಿಷಯ ಗೊತ್ತಾಗಿ, ಗಂಡ ವಿಚ್ಛೇದನ ಪಡೆದದ್ದರಿಂದ ಆಕೆ ಸ್ವಂತ ಊರಾದ ಉದ್ಧಮಪುರಕ್ಕೆ ಬಂದು ನೆಲೆಸಿದಳು. ಅದೇ ವೇಳೆಗೆ ಬೆಳೆದು ನಿಂತ ಮಗನು ತನ್ನ ಹೆತ್ತವರ ಬಗ್ಗೆ ಕೇಳಿದಾಗ ತಾಯಿಯ ಹೆಸರನ್ನು ತಿಳಿಸಿದ್ದಾರೆ. ಆಗ ಮಗ ತಾಯಿಯನ್ನು ಭೇಟಿಯಾಗಿ ತನ್ನ ತಂದೆಯ ಬಗ್ಗೆ ವಿಚಾರಿಸಲಾಗಿ ಮಹಿಳೆ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಮಗನ ಒತ್ತಾಯದ ಮೇಲೆ ಆಕೆ ಅತ್ಯಾಚಾರದ ದೂರು ನೀಡಲು ಹೋದಾಗ ಪೊಲೀಸರು ಕೇಸು ದಾಖಲಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಆಕೆ ಕೋರ್ಟಿನ ಮೊರೆ ಹೋದ ನಂತರ, ಕೋರ್ಟ್ ಆದೇಶಾನುಸಾರ ನಾಕಿ ಹುಸೇನ್ ಮತ್ತು ಗುಡ್ಡು ಈರ್ವರ ಮೇಲೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಗ್ಯಾಂಗ್​ರೇಪ್ ಕೇಸನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಸಂಜಯ್​ಕುಮಾರ್ ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಮಗನ ಡಿಎನ್​ಎ ಪರೀಕ್ಷೆ ನಡೆಸಿ, ತದನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ…

    ಕರೊನಾ ಲಸಿಕಾ ಪ್ರಮಾಣಪತ್ರದಿಂದ ಪ್ರಧಾನಿ ಫೋಟೋ ತೆಗೆಯಿರಿ: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts