More

    ರಾತ್ರಿಯಿಡೀ ಗ್ರಾಪಂ ಕಚೇರಿಯಲ್ಲಿ ಧರಣಿ ಕುಳಿತ ಅಂಗವಿಕಲ ಮಹಿಳೆ.. ಪಿಡಿಒಗೆ ಇಒ ಕ್ಲಾಸ್..!

    ಚನ್ನಪಟ್ಟಣ: ನರೇಗಾ ಕಾಮಗಾರಿಯ ಬಿಲ್​ ನೀಡಲು ಸತಾಯಿಸಿದರೆಂದು ಆರೋಪಿಸಿ ಅಂಗವಿಕಲ ಮಹಿಳೆಯೊಬ್ಬರು ಗ್ರಾಪಂ ಅಧಿಕಾರಿಗಳ ವಿರುದ್ಧ ಪಂಚಾಯಿತಿ ಕಚೇರಿಯಲ್ಲೇ ಕುಳಿತು ಬುಧವಾರ ಅಹೋರಾತ್ರಿ ಧರಣಿ ನಡೆಸಿದರು.

    ನಾಗವಾರ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ನರೇಗಾ ಬಿಲ್​ ನೀಡಲು ಸತಾಯಿಸುತ್ತಿದ್ದಾರೆ. ಜತೆಗೆ, ಉಡಾಫೆಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿ ಗ್ರಾಪಂ ಕಚೇರಿ ಒಳಗೇ ಪ್ರತಿಭಟಿಸಿದರು. ಈ ವೇಳೆ ಪ್ರಮೀಳಾಗೆ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಸಾಥ್​ ನೀಡಿದರು.

    ಇದನ್ನೂ ಓದಿರಿ ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!

    ಪ್ರಮೀಳಾ ಕಳೆದ ಫೆಬ್ರವರಿಯಲ್ಲಿ ನರೇಗಾ ಅನುದಾನದಲ್ಲಿ ಕಾಮಗಾರಿಯೊಂದನ್ನು ನಿರ್ವಹಿಸಿದ್ದರು. ಈ ಕಾಮಗಾರಿಯ ಎನ್​ಎಂಆರ್​ ತೆಗೆಯಲು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಪಿಡಿಒ ಶ್ರೀನಿವಾಸ್​ ಸೂಕ್ತ ಉತ್ತರ ನೀಡುವುದಿಲ್ಲ. ಈ ಹಿಂದೆ ಇದ್ದ ಗ್ರಾಪಂ ಅಧಿಕಾರಿಗಳು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಬೇರೊಬ್ಬರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದೀಗ, ನರೇಗಾ ಅನುದಾನದ ಹಣ ನೀಡಲು ಸತಾಯಿಸುತ್ತಿದ್ದಾರೆ ಎನ್ನುವುದು ಮಹಿಳೆಯ ಆಕ್ರೋಶಕ್ಕೆ ಕಾರಣ.

    ಇದನ್ನೂ ಓದಿರಿ ತಂದೆ ಎದುರಲ್ಲೇ 7 ವರ್ಷದ ಬಾಲಕಿಯನ್ನು ಎಳೆದೊಯ್ದ ಚಿರತೆ…

    ಇದೇ ವಿಚಾರವಾಗಿ ಮಹಿಳೆ ಗ್ರಾಪಂ ಕಚೇರಿಗೆ ಬುಧವಾರ ಆಗಮಿಸಿದ್ದರು. ಪಿಡಿಒ ಸಂಜೆ 4 ಗಂಟೆಗೆ ಕಚೇರಿಗೆ ಮತ್ತೆ ಬರುತ್ತೇನೆ ಎಂದು ಸಬೂಬು ಹೇಳಿ ಹೋಗಿದ್ದರು. ಆದರೆ, ವಾಪಸ್​ ಬರಲಿಲ್ಲ. ಕೋಪಗೊಂಡ ಮಹಿಳೆ ಪಿಡಿಒ ಬರುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟನೆಗೆ ಕುಳಿತರು. ಸಿಬ್ಬಂದಿ ಮನವೊಲಿಸಿದರೂ ಮಹಿಳೆ ಕದಲಿಲ್ಲ.

    ನಾಗವಾರ ಗ್ರಾಪಂ ಕಚೇರಿಗೆ ಗುರುವಾರ ಭೇಟಿ ನೀಡಿದ ತಾಪಂ ಇಒ ಚಂದ್ರು, ಮಹಿಳೆಯ ಅಹವಾಲು ಆಲಿಸಿದರು. ಇಂತಹ ಘಟನೆಗಳು ಮರುಕಳಿಸಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಪಿಡಿಒಗೆ ಎಚ್ಚರಿಕೆ ನೀಡಿದರು. ಇಒ ಭರವಸೆ ಹಿನ್ನೆಲೆಯಲ್ಲಿ ಮಹಿಳೆ ಪ್ರತಿಭಟನೆ ಹಿಂಪಡೆದರು.

    ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts