More

    ಧನ್ವಂತರಿ: ಆರೋಗ್ಯರಕ್ಷಣೆಯಲ್ಲಿ ಮಹಿಳೆಯರ ಪಾತ್ರ

    ಧನ್ವಂತರಿ: ಆರೋಗ್ಯರಕ್ಷಣೆಯಲ್ಲಿ ಮಹಿಳೆಯರ ಪಾತ್ರ

    ಆರೋಗ್ಯಕ್ಕೆ ಹಲವಾರು ಮುಖಗಳಿವೆ. ನಮ್ಮ ಸ್ವಾಸ್ಥ ್ಯ ರಕ್ಷಣೆ ನಮ್ಮದೇ ಜವಾಬ್ದಾರಿ ಎಂಬುದೂ ದಿಟವಾದ ಮಾತು. ಈ ಜವಾಬ್ದಾರಿ ಇಷ್ಟರಲ್ಲೇ ಮುಗಿಯುವುದಿಲ್ಲ. ಮನೆಯ, ಕುಟುಂಬದ, ಸಾಮಾಜಿಕ ಹಾಗೂ ರಾಷ್ಟ್ರದ ಜವಾಬ್ದಾರಿಗಳೂ ಒಬ್ಬ ವ್ಯಕ್ತಿಯ ಸ್ವಾಸ್ಥ ್ಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂಬುದು ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೆದವು ಪ್ರತಿಪಾದಿಸಿದ ಸ್ತುತ್ಯರ್ಹ ನಿಲುವು. ಮನೆಯಲ್ಲಿ ಎಲ್ಲರಿಗೂ ಅವರದೇ ಆದ ಕರ್ತವ್ಯ ಮತ್ತು ಜವಾಬ್ದಾರಿಗಳಿರುತ್ತವೆ. ಕರ್ತವ್ಯಪಾಲನೆಯಲ್ಲಿ ಚ್ಯುತಿ ಬರದೆ ಇರಬೇಕಾದರೆ ಆರೋಗ್ಯವೇ ಮೂಲಮಂತ್ರ ಎಂಬುದೂ ವೇದ್ಯ ವಿಚಾರ. ಮೇಲ್ನೋಟಕ್ಕೆ ಸಮಾಜ ಪುರುಷಪ್ರಧಾನವೆಂದು ಅನಿಸಿದರೂ ಅದರ ಅಂತರಾಳ ಹಾಗಿಲ್ಲ. ಮನೆಯಿರಲಿ, ವಿಶಾಲವಾದ ಜಗತ್ತಿರಲಿ – ಎಲ್ಲ ಆಗುಹೋಗುಗಳಿಗೂ ಸ್ತ್ರೀಯೇ ಕೇಂದ್ರಬಿಂದು. ಅನಾದಿಕಾಲದಿಂದಲೂ ಪುರುಷರೇ ಪ್ರಧಾನವಾಗಿ ಕಂಡರೂ ಸ್ತ್ರೀಗೆ ನೀಡಿದ ಗೌರವ ಅತುಲ್ಯವಾದುದು.

    ವೇದೋಪನಿಷತ್ತುಗಳಲ್ಲೂ, ಧರ್ಮಶಾಸ್ತ್ರಗಳಲ್ಲೂ ಮಾತೆಗೆ ನೀಡಿದ ಸ್ಥಾನಮಾನ ಅಸದೃಶವಾದುದು. ತಾಯಿಯೇ ಮನೆಯ ಅರ್ನ್ಯಘ ರತ್ನ. ಕೇವಲ ವೈಜ್ಞಾನಿಕ ವಿಷಯಗಳಲ್ಲಷ್ಟೇ ಅಲ್ಲ, ವ್ಯಾವಹಾರಿಕ, ಆರೋಗ್ಯ ವಿಚಾರಗಳಲ್ಲೂ ಮಾತೆಯೇ ನಿಜಾರ್ಥದ ಮನೆಯೊಡತಿ. ಮಾತೆಯ ಮಾತೇ ಗೌರವಿಸಲ್ಪಡುವ ಕುಟುಂಬದ ಬೇರು ಅತ್ಯಂತ ಭದ್ರವಾಗಿರುತ್ತದೆ ಎಂಬುದಕ್ಕೆ ಪುರಾವೆ ಬೇಕಿಲ್ಲ. ಆರೋಗ್ಯದ ವಿಚಾರದಲ್ಲಂತೂ ಸ್ತ್ರೀ ಗಟ್ಟಿಮುಟ್ಟಾಗಿದ್ದರೆ ಕುಟುಂಬದ ಎಲ್ಲ ಸದಸ್ಯರಿಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಬಗೆಯ ಸಾಧನೆ ಸಾಧ್ಯವಾಗುತ್ತದೆ. ಹಿಂದೆಯೂ ಅಷ್ಟೇ, ಇಂದಿಗೂ ಅಷ್ಟೇ. ಸ್ತ್ರೀ ಹಾಸಿಗೆ ಹಿಡಿದರೆ ಮನೆಯು ‘ತೃಣಮಪಿ ನ ಚಲತಿ’ ಎಂಬುದು ಸುಲಭದಲ್ಲಿ ಅರ್ಥವಾಗುತ್ತದೆ. ಮನೆಯ ಸ್ವಾಸ್ಥ ್ಯ ಸರಿಯಿದ್ದರೆ ಮಾತ್ರ ಸಮಾಜದ, ದೇಶದ ಸ್ವಾಸ್ಥ ್ಯ ನವಿರಾಗಿರುತ್ತದೆ. ಹಾಗಾಗಿ ಸ್ತ್ರೀಯೇ ಆರೋಗ್ಯದ ಕೇಂದ್ರಬಿಂದು!

    ಇದನ್ನೂ ಓದಿ: ಗಿಡ ಬೆಳೆದವರಿಗೆ ಪ್ರೋತ್ಸಾಹ ಧನ, 1.95 ಲಕ್ಷ ಗಿಡ ವಿತರಣೆಗೆ ಸಿದ್ಧ

    ಸ್ತ್ರೀಯರು, ಗೆಳೆಯರು, ಕೆಲಸದವರು ಸನ್ನಡತೆಯಿಂದ ಇದ್ದರೆ ಆರೋಗ್ಯಪಾಲನೆ ಸುಲಭವೆಂದಿದೆ ಆಯುರ್ವೆದ! ಸ್ತ್ರೀಯರ ಮನ ನೋಯಿಸುವುದಾಗಲೀ, ರೇಗಿಸುವುದಾಗಲಿ, ಕೇಡು ಮಾಡುವುದಾಗಲೀ ಸಲ್ಲದು ಎಂದಿದೆ ಚರಕ ಸಂಹಿತೆ. ಅತಿಯಾಗಿ ನಂಬಿ ಗೌಪ್ಯ ವಿಚಾರಗಳನ್ನೂ ಹೇಳಬಾರದು. ಏಕೆಂದರೆ ಆ ಹೃದಯಗಳಿಗೆ ವಿಷಯಗಳನ್ನು ಅಡಗಿಸಿಡುವುದು ಕಷ್ಟದ ನಡೆ. ಸ್ವಾವಲಂಬಿ ಆಗಿರದೆ ಕೌಟುಂಬಿಕ ಗೌರವದ ಪ್ರೀತಿಯ ಬಂಧದಲ್ಲಿರಬೇಕು! ಅದಕ್ಕೂ ಕಾರಣವಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯಿಂದ, ಯೌವನದಲ್ಲಿ ಗಂಡನಿಂದ, ಮುಪ್ಪಿನಲ್ಲಿ ಮಕ್ಕಳಿಂದ ರಕ್ಷಿಸಲ್ಪಡಬೇಕಾದವಳು ಸ್ತ್ರೀ. ಮಾತೆಯ ರಕ್ಷಣೆ ಮನೆಮಂದಿಯ ಜವಾಬ್ದಾರಿ. ಹಾಗಿರುವಾಗ ಸ್ವಾತಂತ್ರ್ಯಾದರೂ ಎಲ್ಲಿರುತ್ತದೆ ಎಂಬ ಸುಭಾಷಿತವೂ ಗ್ರಾಹ್ಯವಾಗಿದೆ.

    ಧನ್ವಂತರಿ: ಆರೋಗ್ಯರಕ್ಷಣೆಯಲ್ಲಿ ಮಹಿಳೆಯರ ಪಾತ್ರ

    ಸ್ತ್ರೀಯನ್ನು ನಂಬಿ ಅತಿಯಾದ ಸ್ವಾತಂತ್ರ್ಯ ನೀಡಬಾರದು. ಯಾಕೆಂದರೆ ಸ್ತ್ರೀ ಸದಾ ರಕ್ಷಣೀಯಳು, ವಿಶೇಷವಾಗಿ ಯೌವನಕಾಲದಲ್ಲಿ ಎಂದು ಭಾವಪ್ರಕಾಶ ಗ್ರಂಥ ಹೇಳಿದೆ. ಬೇಯಿಸಿದ ಆಹಾರವು ಸ್ವಲ್ಪ ನಿರ್ಲಕ್ಷಿಸಲ್ಪಟ್ಟರೂ ಕೆಡುತ್ತದೆ. ಅದೇ ರೀತಿ ಸ್ತ್ರೀಯನ್ನು ಸಂರಕ್ಷಿಸಬೇಕು, ಆಗ ಆಹಾರದಂತೆ ಸ್ತ್ರೀಯೂ ಎಲ್ಲರನ್ನೂ ಪೋಷಿಸುತ್ತಾಳೆ.

    ಧನ್ವಂತರಿ: ಆರೋಗ್ಯರಕ್ಷಣೆಯಲ್ಲಿ ಮಹಿಳೆಯರ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts