More

    ಗಿಡ ಬೆಳೆದವರಿಗೆ ಪ್ರೋತ್ಸಾಹ ಧನ, 1.95 ಲಕ್ಷ ಗಿಡ ವಿತರಣೆಗೆ ಸಿದ್ಧ

    ಬಣಕಲ್: ಮೂಡಿಗೆರೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಸುಮಾರು 1.95 ಲಕ್ಷ ಗಿಡಗಳು ಸಿದ್ದವಾಗಿದ್ದು ಜೂ.1ರಿಂದ ಗಿಡಗಳ ವಿತರಣಾ ಕಾರ್ಯ ಪ್ರಾರಂಭವಾಗಲಿದೆ.

    ಮೂಡಿಗೆರೆ ತಾಲೂಕಿನ ಹಳೇಕೋಟೆ, ಅಂಗಡಿ ಸಸ್ಯಕ್ಷೇತ್ರದಲ್ಲಿ ಬೀಟೆ, ನೇರಳೆ, ತಾರೆ, ಮಾಗನಿ, ಸಂಪಿಗೆ, ಬಿದಿರು, ಶ್ರೀಗಂಧ, ಬೈನೆ, ಹಣ್ಣಿನ ಗಿಡಗಳಾದ ಹೆಬ್ಬಲಸು, ಮಾವು, ನೇರಳೆ, ನೆಲ್ಲಿ ಮತ್ತಿತರ ಗಿಡಗಳು ವಿತರಣೆಗಿವೆ.

    ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ‘ಮಗುವಿಗೊಂದು ಮರ ಶಾಲೆಗೊಂದು ವನ’ ಯೋಜನೆಯಡಿ 2,230 ಗಿಡಗಳನ್ನು ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಮನೆಗಳಿಗೆ 19,800 ಗಿಡ ವಿತರಿಸಲಾಗುವುದು ಎಂದರು.

    ಸಾರ್ವಜನಿಕರು ಹಾಗೂ ರೈತರಿಗಾಗಿ 78,400 ಗಿಡ, ಕಾವೇರಿ ಕೂಗು ಯೋಜನೆಯಡಿ ಕಾವೇರಿ ನದಿಯ ಉಪನದಿಗಳ ಪ್ರದೇಶಗಳಿಗೆ 95 ಸಾವಿರ ಗಿಡಗಳನ್ನು ನೀಡಲಾಗುವುದು. ರೈತರು ಸಸ್ಯಕ್ಷೇತ್ರದಲ್ಲಿರುವ ಹೆಸರು, ಸರ್ವೆ ನಂಬರ್, ಗ್ರಾಮ, ಆರ್​ಟಿಸಿ ಮತ್ತು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಿ ನೋಂದಾಯಿಸಿಕೊಳ್ಳಬೇಕು. 10 ರೂ. ನೀಡಿ ರೈತರು ಸಸ್ಯಕ್ಷೇತ್ರದಲ್ಲಿ ಹೆಸರು ನೊಂದಾಯಿಸಿಕೊಂಡರೆ ಪ್ರಥಮ ವರ್ಷ 35 ರೂ., ದ್ವಿತೀಯ ವರ್ಷ 40, ತೃತೀಯ ವರ್ಷದಲ್ಲಿ 50 ರೂ.ನಂತೆ ಪ್ರತಿ ಗಿಡಕ್ಕೆ 125 ರೂ. ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts