More

    ಮಗು ಬೇಕೇ ಬೇಕು ಎಂದು ಗಂಡ ಹೇಳಿದ್ದಕ್ಕೆ ಈ ಯುವತಿ ಹೀಗೆ ಮಾಡುವುದೇ?

    ಚಾಮರಾಜನಗರ/ ಹುಣಸೂರು: ಐದು ದಿನಗಳ ಹಿಂದಷ್ಟೆ ಜನಿಸಿದ ಮಗುವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಅಪಹರಿಸಿದ ಯುವತಿಯೊಬ್ಬಳು ಹುಣಸೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ.

    ಆ ಯುವತಿಯ ಹೆಸರು ರಂಜಿತಾ. 25 ವರ್ಷದ ಈಕೆ ಹುಣಸೂರಿನ ಲಾಲ್‌ಬನ್ ಬೀದಿಯ ನಿವಾಸಿ. ನಾಲ್ಕು ತಿಂಗಳ ಹಿಂದೆ ಈಕೆಗೆ ಗರ್ಭಪಾತವಾಗಿತ್ತು. ಆದರೆ ಆಕೆಯ ಪತಿ ವಸಂತನಿಗೆ ಮಗು ಬೇಕೇಬೇಕಾಗಿತ್ತು. ಮನೆಗೆ ಬರುವುದಾದರೆ ಮಗುವಿನೊಂದಿಗೇ ಬರಬೇಕೆಂದು ತಾಕೀತು ಮಾಡಿದ್ದ. ಹೀಗಾಗಿ ನವಜಾತ ಶಿಶುವನ್ನು ಕಳವು ಮಾಡುವ ಉದ್ದೇಶದಿಂದ ಈಕೆ ಬುಧವಾರ ಬೆಳಗ್ಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದಿದ್ದಳು. ಅಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ವ್ಯಾಸರಾಜನಪುರ ಗ್ರಾಮದ ಮುತ್ತುರಾಜಮ್ಮ (30) ಎಂಬುವವರು ಐದಾರು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಭೇದಿ ಆಗುತ್ತಿತ್ತು. ಆದ್ದರಿಂದ ಬುಧವಾರ ಮಗುವನ್ನು ಅದರ ಅಜ್ಜಿ ರಾಜಮ್ಮ ಎಂಬುವವರು ಅಲ್ಲೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ರಂಜಿತಾ ಅವರೊಂದಿಗೆ ಹೋಗಿದ್ದಳು.

    ಇದನ್ನೂ ಓದಿ ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

    ಸ್ವಲ್ಪ ಹೊತ್ತಿನ ನಂತರವೂ ಭೇದಿ ನಿಲ್ಲದೇ ಇದ್ದಾಗ ರಂಜಿತಾಳೇ ಅಜ್ಜಿಯ ಕೈಯಿಂದ ಮಗುವನ್ನು ತೆಗೆದುಕೊಂಡು ತಾನೇ ವೈದ್ಯರಿಗೆ ತೋರಿಸಿಕೊಂಡು ಬರುವುದಾಗಿ ಹೇಳಿದ್ದಳು. ಆದರೂ ಆಕೆಯ ಹಿಂದೆಹಿಂದೆಯೇ ಅಜ್ಜಿಯೂ ಬಂದಿದ್ದರು. ಆದರೆ ಚಾಲಾಕಿ ರಂಜಿತಾ ಬಾಗಿಲ ಬಳಿಯಲ್ಲೇ ನಿಂತು, ‘‘ಒಳಗೆ ವೈದ್ಯರಿದ್ದಾರೆಯೇ ನೋಡಿಕೊಂಡು ಬನ್ನಿ’’ ಎಂದು ಅಜ್ಜಿಯನ್ನು ಒಳಗೆ ಕಳಿಸಿದಳು. ನಂತರ ಮಗುವಿನೊಂದಿಗೆ ಅಲ್ಲಿಂದ ಪರಾರಿಯಾದಳು. ಆಸ್ಪತ್ರೆಯಿಂದ ಹೊರಬಂದ ರಂಜಿತಾ ಆಟೋ ಹತ್ತಿ ಬಸ್ ನಿಲ್ದಾಣಕ್ಕೆ ಹೋದಳು. ಅಲ್ಲಿ ಹುಣಸೂರು ಬಸ್ ಹತ್ತಿದಳು.

    ಇತ್ತ ಮಗು ಕಾಣದಾದಾಗ ಅಜ್ಜಿ ಮತ್ತು ಇತರರು ಸುತ್ತಮುತ್ತ ಇದ್ದವರನ್ನು ವಿಚಾರಿಸಿದರು. ಪೊಲೀಸರಿಗೂ ದೂರು ನೀಡಿದರು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ರಂಜಿತಾ ಮಗುವಿನೊಂದಿಗೆ ಆಟೋ ಹತ್ತಿದ್ದು ಗೊತ್ತಾಯಿತು. ಆಟೋ ಚಾಲಕನನ್ನು ವಿಚಾರಿಸಿದಾಗ ಆಕೆ ಹುಣಸೂರು ಬಸ್ ಹತ್ತಿದಳೆಂದು ತಿಳಿಸಿದ. ಪೊಲೀಸರು ಕೂಡಲೇ ಹುಣಸೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಹೀಗಾಗಿ ರಂಜಿತಾಳನ್ನು ಹುಣಸೂರಿನಲ್ಲಿ ಪೊಲೀಸರು ಮಗುವಿನ ಸಮೇತ ಬಂಧಿಸಿದರು. ‘‘ರಂಜಿತಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ನವಜಾತ ಶಿಶುವನ್ನು ಅದರ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.

    ಆನ್‌ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ಡಾಕ್ಟರ್!

    300 ರೂ. ಶಾಪಿಂಗ್‌ಗೆ ಒಂದು ಲಕ್ಷ ರೂ. ಧೋಖಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts