More

    ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ತಾಯಿಗೆ 40ವರ್ಷ ಜೈಲು ಶಿಕ್ಷೆ ವಿಧಿಸಿದ್ದೇಕೆ ಕೋರ್ಟ್​?

    ತಿರುವನಂತಪುರಂ: ತನ್ನ 7ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಜತೆಗಿದ್ದ ವ್ಯಕ್ತಿಗೆ ಸಹಕರಿಸಿದ ತಾಯಿಗೆ ಕೇರಳ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ 40 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20ಸಾವಿರ ರೂ.ದಂಡ ವಿಧಿಸಿದೆ.

    ಇದನ್ನೂ ಓದಿ: 57 ವರ್ಷದ ವ್ಯಕ್ತಿಯೊಬ್ಬ 2 ಮಕ್ಕಳ ತಾಯಿ 80 ವರ್ಷದ ಅಜ್ಜಿಯನ್ನು ಮದುವೆಯಾದ; ಮುಂದೆ ಆಗಿದ್ದೇ ಬೇರೆ…. 

    ಮಾಹಿತಿ ಪ್ರಕಾರ, ಮಾರ್ಚ್ 2018 ರಿಂದ ಸೆಪ್ಟೆಂಬರ್ 2019 ರ ನಡುವೆ ಈ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ಪತಿಯನ್ನು ತೊರೆದಿದ್ದ ಸಂತ್ರಸ್ತೆಯ ತಾಯಿಯು ಶಿಶುಪಾಲನ್ ಎಂಬ ಪ್ರೇಮಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ 7ವರ್ಷದ ಪುತ್ರಿಯೂ ಇವರ ಜತೆಗೇ ವಾಸವಿದ್ದಳು. ಶಿಶುಪಾಲನ್ ತನ್ನ ಮಗಳ ಸಮನಾದ ಈ ಬಾಲಕಿ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ಖಾಸಗಿ ಅಂಗಗಳಿಗೂ ಗಾಯಗಳಾಗಿವೆ. ತಾಯಿಯೆದುರೇ ಈ ಕಿರಾತಕ ಪದೇ ಪದೇ ಬಾಲಕಿ ಮೇಲೆ ಕಾಮತೃಷೆ ತೀರಿಸಿಕೊಂಡಿದ್ದಾನೆ.

    ಬೇರೆಡೆ ಇದ್ದ ಸಂತ್ರಸ್ತೆಯ ಅಕ್ಕ ಹನ್ನೊಂದು ವರ್ಷದ ಬಾಲಕಿ ಮನೆಗೆ ಬಂದಾಗ ಸಂತ್ರಸ್ತ ಬಾಲಕಿ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಆಗ ಹಿರಿಯ ಪುತ್ರಿ ಕೂಡ ಶಿಶುಪಾಲನಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ. ತಾಯಿ ಮತ್ತು ಆಕೆಯ ಪ್ರೇಮಿ ಬೆದರಿಕೆ ಹಾಕಿದ್ದರಿಂದ ಮಕ್ಕಳು ಮಾಹಿತಿ ಬಹಿರಂಗಪಡಿಸಲಿಲ್ಲ. ಮಕ್ಕಳು ಮನೆಯಿಂದ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಹೋಗಿ ನಡೆದ ಘಟನೆ ಹೇಳಿಕೊಂಡಿದ್ದಾರೆ. ಬಳಿಕ ಘಟನೆ ಬೆಳಕಿಗೆ ಬಂದಿದೆ. ಕೌನ್ಸೆಲಿಂಗ್ ವೇಳೆ ಮಕ್ಕಳು ಘಟನೆಯನ್ನು ವಿವರಿಸಿದ್ದಾರೆ.

    ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌.ಎಸ್.ವಿಜಯ್ ಮೋಹನ್ ಮಕ್ಕಳ ಪರ ವಕಾಲತ್ತು ವಹಿಸಿದ್ದರು. ಆರೋಪಿಯು ಮಾತೃತ್ವಕ್ಕೆ ಸಂಪೂರ್ಣ ಅವಮಾನ. ಯಾವುದೇ ಕ್ಷಮೆಯಾಚನೆಗೆ ಅರ್ಹಳಲ್ಲ ಎಂದು ನ್ಯಾಯಾಧೀಶರಾದ ಆರ್.ರೇಖಾ ಅಭಿಪ್ರಾಯಪಟ್ಟು ಪೋಕ್ಸೋ ಕಾಯ್ದೆಯಂತೆ ಆಕೆಗೆ ಗರಿಷ್ಠ ಶಿಕ್ಷೆ ವಿಧಿಸಿದ್ದಾರೆ. ವಿಚಾರಣೆ ವೇಳೆ ಮೊದಲ ಆರೋಪಿ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಾಗಿ ಕೃತ್ಯಕ್ಕೆ ಸಹಕರಿಸಿದ್ದ ತಾಯಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ನಟಿ ಆಲಿಯಾ ಭಟ್ ಡೀಪ್‌ಫೇಕ್ ವೀಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts