More

    ಪುರುಷನ ಹಿಂದಿರುವ ಶಕ್ತಿಯೇ ಮಹಿಳೆ: ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಮಹಿಳೆ ಎಂದರೆ ಶಕ್ತಿ. ಆಕೆಯಿಂದ ಅಸಾಧ್ಯವಾದುದು ಯಾವುದೂ ಇಲ್ಲ. ಇದಕ್ಕೆ ಕಾರಣ ಆಕೆಯಲ್ಲಿನ ಸಹನೀಯ ಗುಣ, ಸಾಧಿಸುವ ಛಲ, ಗುರಿ ಮತ್ತು ಸಂಕಲ್ಪ ಶಕ್ತಿ. ಈ ಗುಣಗಳಿಂದಲೇ ಆಕೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗುತ್ತಾಳೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಕರ್ನಾಟಕ ಜಾನಪದ ಕಲಾವಿದರ ಸಹಕಾರ ಸಂಘ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಪುರುಷರಿಗೆ ಸರಿಸಮನಾಗಿ ಕೆಲಸ ಮಾಡುತ್ತಿದ್ದಾಳೆ. ಗ್ರಾಪಂ ಮಟ್ಟದಿಂದ ರಾಷ್ಟ್ರದ ಪ್ರಧಾನಿಯಾಗಿ ಅದ್ಭುತ ಕೆಲಸ ಮಾಡುತ್ತಿದ್ದಾಳೆ ಎಂದರು.
    ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಸರ್ವರಿಗೂ ನ್ಯಾಯ ಒದಗಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ತಂದೆ ಹಾಗೂ ಜನತೆಯ ಆಶೀರ್ವಾದದಿಂದ ನಾನು ಪುರಸಭೆ ಸದಸ್ಯನಾಗಿ, ಶಾಸಕನಾಗಿ, ಮೂರು ಬಾರಿ ಸಂಸದನಾಗಿ ಜನ ಮೆಚ್ಚುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಜನರ ನಿರೀಕ್ಷೆಯಂತೆ ಕೆಲಸ ಮಾಡಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ಭರವಸೆ ನೀಡಿದರು.
    ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬಿ.ಡಿ.ಭೂಕಾಂತ್ ಮಾತನಾಡಿ, ಸಂಸದರು ಶಿಕಾರಿಪುರ ಸಹಕಾರ ಕ್ಷೇತ್ರವನ್ನು ನಾಡು ಗಮನಿಸುವಂತೆ ಬೆಳೆಸಿದ್ದಾರೆ. ಇಂದು ನೂರಾರು ಪ್ರತಿಭಾನ್ವಿತ ಮತ್ತು ಸಾಧನೆ ಮಾಡಿದ ಹಾಗೂ ಮಾಡುತ್ತಿರುವ ಮಹಿಳೆಯರನ್ನು ಗೌರವಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

    ಬಸವಾಶ್ರಮದ ಮಾತೆ ಶರಣಾಂಬಿಕೆ ಸಾನ್ನಿಧ್ಯ ವಹಿಸಿದ್ದರು. ಈಶ್ವರೀಯ ವಿಶ್ವವಿದ್ಯಾಲಯ ಸ್ನೇಹಕ್ಕ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎನ್.ವಿ.ಈರೇಶ್, ಎಂ.ಬಿ.ಚನ್ನವೀರಪ್ಪ ಶಾಂತಲಾ ಭೂಕಾಂತ್, ಪರಶುರಾಮ ಚೌಟಗಿ, ಜಿ.ಎಂ.ನಾಗರಾಜ್, ಮೌನೇಶ್ವರಪ್ಪ ಲೋಕೇಶ್ವರ್ ಇತರರಿದ್ದರು.

    ಜಿಲ್ಲೆಯಲ್ಲಿ ಶರಣರ ಜನ್ಮಸ್ಥಳಗಳ ಅಭಿವೃದ್ಧಿ, ಮಹಾ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಸುಮಾರು 50 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ನಿರ್ಮಿಸಲಾಗಿದೆ. ಇದು ತಾಲೂಕಿನ ಪ್ರವಾಸೋದ್ಯಮಕ್ಕೆ ಮುಕುಟವಾಗಲಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿರುವುದರಿಂದ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗಿದೆ.
    ಬಿ.ವೈ.ರಾಘವೇಂದ್ರಲೋಕಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts