More

    ಬಾಳೆಹಣ್ಣಿನ ಗಾತ್ರ ನೋಡಿಯೇ ಮಾರುಹೋದ ಮಹಿಳೆ!

    ನವದೆಹಲಿ: ಹಣ್ಣೆಂದರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ಒಳ್ಳೆಯ ಬಲಿತ-ಕಳಿತ ಹಣ್ಣೆಂದರೆ ಜಾಸ್ತಿಯೇ ಇಷ್ಟವಾಗುತ್ತದೆ. ಹಾಗೆಯೇ ಹಣ್ಣೊಂದಕ್ಕೆ ಹೆಣ್ಣೊಬ್ಬಳು ಮಾರುಹೋಗಿ ಅದರ ಗಾತ್ರವನ್ನು ಕಂಡು ಸಂಭ್ರಮಿಸಿರುವ ಸನ್ನಿವೇಶವೊಂದು ಎಲ್ಲೆಡೆ ಗಮನ ಸೆಳೆಯಲಾರಂಭಿಸಿದೆ. ಅಷ್ಟಕ್ಕೂ ಆಕೆ ಮೆಚ್ಚಿದ್ದು ಭಾರಿ ಉದ್ದದ್ದೆನ್ನಲಾದ ಬಾಳೆಹಣ್ಣನ್ನು..!

    ಹೌದು.. ಬಾಳೆಹಣ್ಣನ್ನು ಸಾಮಾನ್ಯವಾಗಿ ಕೆ.ಜಿ. ಲೆಕ್ಕದಲ್ಲಿ ಅಳೆಯುತ್ತಾರೆ. ಆದರೆ ಈಕೆ ಅದನ್ನು ಮೊಳ ಲೆಕ್ಕದಲ್ಲಿ ಅಳೆದು ಸಂಭ್ರಮಿಸಿದ್ದಾಳೆ. ಅರ್ಥಾತ್ ಈಕೆಗೆ ಸಿಕ್ಕ ಬಾಳೆಹಣ್ಣು ಬರೋಬ್ಬರಿ ಒಂದು ಮೊಳವಿತ್ತು. ಅದೇ ಖುಷಿಗೆ ಅದನ್ನು ತನ್ನ ತೋಳಿನುದ್ದಕ್ಕೂ ಇಟ್ಟುಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾಳೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಅಂದಹಾಗೆ ಈಕೆ ಇಂಗ್ಲೆಂಡ್​ನ ಸ್ಯಾಮ್​ ಪಾಲ್ಮರ್ ಎಂಬಾಕೆ. 31 ವರ್ಷದ ಈಕೆ ತಾನು ಖರೀದಿಸಿದ್ದರಲ್ಲಿದ್ದ ಒಂದು ಬಾಳೆಹಣ್ಣಿನ ಗಾತ್ರಕ್ಕೆ ಮಾರುಹೋಗಿದ್ದಾಳೆ. ಖರೀದಿಸಿದ್ದ ಬಾಳೆಹಣ್ಣುಗಳ ಜೊತೆಗಿದ್ದ ಈ ಉದ್ದದ ಬಾಳೆಹಣ್ಣನ್ನು ನೋಡಿ ಖುಷಿಯಾದ ಈಕೆ ಅದನ್ನು ತೋಳಿನ ಮೇಲಿಟ್ಟು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾಳೆ. ನಾನು ನೋಡಿದ್ದ ಬಾಳೆಹಣ್ಣುಗಳಲ್ಲೇ ಇದು ಅತ್ಯಂತ ಉದ್ದದ್ದು, ಬಹುಶಃ ಡಬಲ್ ಅಲ್ಲ ಟ್ರಿಪಲ್ ಎಂದರೂ ತಪ್ಪಲ್ಲ. ಇದು ಸುಮಾರು 12 ಇಂಚುಗಳಷ್ಟಿದೆ. ಇದು ಅತ್ಯಂತ ಉದ್ದದ್ದಷ್ಟೇ ಅಲ್ಲ, ಅತ್ಯಂತ ರುಚಿಕಟ್ಟಾದ ಬಾಳೆಹಣ್ಣು ಕೂಡ ಹೌದು ಎಂಬುದಾಗಿ ಈಕೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್)

    ಹಣ ಕೊಡದಿದ್ದರೆ ವಿಡಿಯೋ ವೈರಲ್, ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!

    ಈ ಬ್ಯಾಂಕ್ ಉದ್ಯೋಗಿಗಳು ಇನ್ನು ಪರ್ಮನೆಂಟ್​ ಮನೆಯಲ್ಲೇ..?!; ಬ್ಯಾಂಕ್​ ಆಫ್​ ಬರೋಡದಿಂದ ಹೊಸ ಪ್ಲ್ಯಾನ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts