More

    ಎರಡು ಕರೊನಾ ರೂಪಾಂತರಿಗಳ ಸೋಂಕು ಒಟ್ಟಿಗೇ ತಗುಲಿದ ಮಹಿಳೆ!

    ಪ್ಯಾರಿಸ್ : ಬೆಲ್ಜಿಯಮ್​ನ 90 ವರ್ಷದ ಮಹಿಳೆಯೊಬ್ಬಳು ಒಂದೇ ಸಮಯದಲ್ಲಿ ಎರಡು ಕರೊನಾ ವೈರಸ್​ ರೂಪಾಂತರಿಗಳ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಕರೊನಾದಿಂದ ಅನಾರೋಗ್ಯಕ್ಕೆ ತುತ್ತಾಗಿ ಕೆಲವೇ ದಿನಗಳಲ್ಲಿ ಮೃತಪಟ್ಟ ಈ ಮಹಿಳೆಯ ಮರಣೋತ್ತರ ಪರೀಕ್ಷೆಯಲ್ಲಿ ಬ್ರಿಟನ್ನಿನಲ್ಲಿ ಮೊದಲು ಕಾಣಿಸಿಕೊಂಡ ಆಲ್ಫಾ ರೂಪಾಂತರಿ ಮತ್ತು ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಬೀಟಾ ರೂಪಾಂತರಿ ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

    ಕರೊನಾ ಲಸಿಕೆ ಪಡೆಯದೆ, ನರ್ಸ್​ ಸೇವೆ ಬಳಸಿಕೊಂಡು ಏಕಾಂಗಿಯಾಗಿ ವಾಸಿಸುತ್ತಿದ್ದ ಈ ವೃದ್ಧೆ, ಅನಾರೋಗ್ಯದ ಲಕ್ಷಣಗಳ ಮೇಲೆ, ಮಾರ್ಚ್​ ತಿಂಗಳಲ್ಲಿ ಬೆಲ್ಜಿಯಂನ ಆಲ್ಸ್​ಟ್​ ನಗರದ ಒಎಲ್​ವಿ ಆಸ್ಪತ್ರೆ ಸೇರಿದ್ದಳು. ಕರೊನಾ ಪಾಸಿಟೀವ್ ಬಂದದ್ದರಿಂದ ಚಿಕಿತ್ಸೆ ಆರಂಭಿಸಲಾಯಿತು. ಆರಂಭಿಕವಾಗಿ ಆಕ್ಸಿಜನ್ ಮಟ್ಟ ಉತ್ತಮವಾಗೇ ಇದ್ದರೂ, ಅವಳ ಪರಿಸ್ಥಿತಿ ಬಹುಬೇಗ ಹದಗೆಟ್ಟು, ಆಕೆ 5 ದಿನಗಳ ನಂತರ ಸಾವಪ್ಪಿದ್ದಳು ಎನ್ನಲಾಗಿದೆ.

    ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ವೈದ್ಯಕೀಯ ಸಿಬ್ಬಂದಿಯು ಪರೀಕ್ಷೆ ನಡೆಸಿದಾಗ ಬೆಲ್ಜಿಯಂನಲ್ಲಿ ಆ ಸಮಯದಲ್ಲಿ ಹರಡುತ್ತಿದ್ದ ಆಲ್ಫಾ ಮತ್ತು ಬೀಟಾ ರೂಪಾಂತರಿಗಳೆರಡರ ಸೋಂಕೂ ಆಕೆಗೆ ತಗುಲಿದ್ದು ಕಂಡುಬಂತು. ಆಕೆಗೆ ಈ ರೀತಿಯಾಗಿ ಎರಡೂ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಂದ ಈ ಸೋಂಕು ತಗುಲಿರಬಹುದು ಎಂದು ಆಸ್ಪತ್ರೆಯ ಸಂಶೋಧಕಿ ಆನ್ನೆ ವಂಕೀರ್​ಬೆರ್​​ಘೆನ್​ ಹೇಳಿದ್ದಾರೆ. (ಏಜೆನ್ಸೀಸ್)

    ಕೇರಳದಿಂದ ತೆಲಂಗಾಣಕ್ಕೆ ಹಾರಿದ ಸಬು ಜೇಕಬ್! 1000 ಕೋಟಿ ರೂ. ಹೂಡಿಕೆ

    13 ವರ್ಷದ ಬಾಲಕಿಗೆ ಅಸಂಬದ್ಧ ಪ್ರಶ್ನೆ ಕೇಳಿದ್ದ ಬಸ್​ ಕಂಡಕ್ಟರ್​ಗೆ 1 ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts