More

    ವೆಜ್​ ಕೇಳಿದ್ರೆ ನಾನ್​ ವೆಜ್​ ಪಿಜ್ಜಾ ಡೆಲಿವರಿ: ಮಹಿಳೆ ಕೇಳಿದ ಪರಿಹಾರದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ನವದೆಹಲಿ: ಸಸ್ಯಹಾರಿ ಮಹಿಳೆಯೊಬ್ಬಳು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಮೆರಿಕದ ಪಿಜ್ಜಾ ರೆಸ್ಟೋರೆಂಟ್​ ಸರಣಿ ವಿರುದ್ಧ ವೆಜ್​ ಕೇಳಿದರೆ, ನಾನ್​ ವೆಜ್​ ಪಿಜ್ಜಾ ತಂದುಕೊಟ್ಟಿದ್ದಾರೆಂದು ಆರೋಪಿಸಿರುವ ಮಹಿಳೆ ಪರಿಹಾರ ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದಾಳೆ.

    ಇನ್ನು ಮಹಿಳೆ ಕೇಳಿರುವ ಪರಿಹಾರದ ಮೊತ್ತ ಕೇಳಿದ್ರೆ ಶಾಕ್​ ಆಗುವುದಂತು ಖಂಡಿತ. ಪಿಜ್ಜಾ ರೆಸ್ಟೋರೆಂಟ್​ನಿಂದ ಬರೋಬ್ಬರಿ 1 ಕೋಟಿ ರೂ. ಪರಿಹಾರ ಬೇಕಂತೆ ಈ ಮಹಿಳೆಗೆ.​

    ದೀಪಾಲಿ ತ್ಯಾಗಿ ಎಂಬಾಕೆ ರೆಸ್ಟೋರೆಂಟ್​ ವಿರುದ್ದ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನನ್ನ ಧಾರ್ಮಿಕ ನಂಬಿಕೆಗಳು, ಬೋಧನೆಗಳು, ಕುಟುಂಬದ ಸಂಪ್ರದಾಯ, ಮನಸಾಕ್ಷಿ ಮತ್ತು ನನ್ನ ಉತ್ತಮ ಆಯ್ಕೆಗಳಿಂದಾಗಿ ನಾನು ಪೂರ್ಣ ಸಸ್ಯಹಾರಿ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿರಿ: ಈ ರಾಶಿಯವರಿಗೆ ಇಂದು ಪರಮಾತ್ಮ ನಿರೀಕ್ಷೆಗೂ ಮೀರಿದ ಹಣ ನಿಡುತ್ತಾನೆ: ವಾರಭವಿಷ್ಯ

    2019ರ ಮಾರ್ಚ್​ 21ರಂದು ದೀಪಾಲಿ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿರುವ ತನ್ನ ನಿವಾಸದಿಂದ ರೆಸ್ಟೋರೆಂಟ್​ಗೆ ವೆಜಿಟೇರಿಯನ್​ ಪಿಜ್ಜಾವನ್ನು ಆರ್ಡರ್​ ಮಾಡುತ್ತಾರೆ. ಆ ದಿನ ಹೋಳಿ ಹಬ್ಬವಿರುತ್ತದೆ. ಹಬ್ಬದ ಸಂಭ್ರಮಾಚರಣೆ ಬಳಿಕ ದೂರುದಾರೆಗು ಮತ್ತು ಆಕೆಯ ಮಕ್ಕಳಿಗು ತುಂಬಾ ಹೊಟ್ಟೆ ಹಸಿದಿರುತ್ತದೆ. ಈ ಹಿನ್ನೆಲೆಯಲ್ಲಿ ಆಕೆ ಪಿಜ್ಜಾ ಆರ್ಡರ್​ ಮಾಡಿರುತ್ತಾಳೆ.

    ನಿಗದಿತ ಸಮಯಕ್ಕಿಂತ ಡೆಲಿವರಿ ಸ್ಪಲ್ಪ ತಡವಾಯಿತು ಎಂದಿರುವ ದೂರುದಾರೆ, ತುಂಬಾ ಹಸಿದಿದ್ದರಿಂದ ಏನು? ಎತ್ತ? ಎಂದು ನೋಡದೆ ಪ್ಯಾಕೆಟ್​ ಬಿಚ್ಚಿ ಪಿಜ್ಜಾವನ್ನು ಹಾಗೇ ಬಾಯಿಯಲ್ಲಿ ಹಾಕಿ ಕಡಿದೆ. ಕೆಲವೇ ಸಮಯದಲ್ಲಿ ಅದು ನಾನ್​ ವೆಜ್​ ಪಿಜ್ಜಾ ಎಂದು ತಿಳಿಯಿತು. ಅದರಲ್ಲಿ ಅಣಬೆ ಬದಲಾಗಿ ಮಾಂಸದ ತುಣುಕುಗಳಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ತಕ್ಷಣ ದೀಪಾಲಿ ತ್ಯಾಗಿ ಕಸ್ಟಮರ್​ ಕೇರ್​ಗೆ ಕರೆ ಮಾಡಿ ರೆಸ್ಟೋರೆಂಟ್​ನವರ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದರೆಂದು ಗ್ರಾಹಕ ನ್ಯಾಯಾಲಯಕ್ಕೆ ತ್ಯಾಗಿ ಪರ ವಕೀಲ ಫರ್ಹಾತ್​ ವಾರ್ಸಿ ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ 2019ರ ಮಾರ್ಚ್​ 26ರಂದು ಪಿಜ್ಜಾ ರೆಸ್ಟೋರೆಂಟ್​ನ ಜಿಲ್ಲಾ ಮ್ಯಾನೇಜರ್​ ಎಂದು ಹೇಳಿಕೊಂಡು ತ್ಯಾಗಿ ಅವರಿಗೆ ಒಬ್ಬರು ಕರೆ ಮಾಡಿ, ನಿಮ್ಮ ಇಡೀ ಕುಟುಂಬಕ್ಕೆ ಯಾವುದೇ ಹಣವನ್ನು ಪಡೆಯದೆ ಪಿಜ್ಜಾ ನೀಡುವುದಾಗಿ ಆಮಿಷವೊಡ್ಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ತ್ಯಾಗಿ ಇದು ಸರಳ ಪ್ರಕರಣವೇನಲ್ಲ. ನಿಮ್ಮ ಕಂಪನಿ ನಮ್ಮ ಧಾರ್ಮಿಕ ಅಭ್ಯಾಸಗಳನ್ನು ನಾಶ ಮಾಡಿದೆ. ಇದರಿಂದ ನಮ್ಮ ಮಾನಸಿಕ ನೆಮ್ಮದಿ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ಹಲವಾರು ದೀರ್ಘ ಮತ್ತು ದುಬಾರಿ ಆಚರಣೆಗಳ ಮೂಲಕ ಹೋಗಬೇಕಾಗಿತ್ತು. ಇದಕ್ಕಾಗಿ ಅನೇಕ ಲಕ್ಷ ರೂ.ಗಳವರೆಗೂ ಖರ್ಚು ಮಾಡಬೇಕಾಗುತ್ತದೆ ಎಂದು ದೂರುದಾರೆ ಹೇಳಿದ್ದಾಳೆ.

    ಇದನ್ನೂ ಓದಿರಿ: ಕುಟುಂಬ ವ್ಯವಸ್ಥೆ ಕಾಪಾಡೋಣ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಆಶಯ

    ಈ ಸಮಯದಲ್ಲಿ, ಪಿಜ್ಜಾ ಕಂಪನಿಯ ಜಿಲ್ಲಾ ಮ್ಯಾನೇಜರ್​ ಪ್ರತಿಕ್ರಿಯಿಸಿ, ಹಣದ ವಿಷಯದಲ್ಲಿ ಮಾತುಕತೆ ನಡೆಸಲು ಅವರಿಗೆ ಅಧಿಕಾರವಿಲ್ಲದ ಕಾರಣ, ಅವರು ಈ ವಿಷಯವನ್ನು ತಮ್ಮ ಕಾನೂನು ತಂಡಕ್ಕೆ ಹಸ್ತಾಂತರಿಸಿದ್ದೇವೆಂದು ಹೇಳಿರುವುದು ದೂರಿನ ಪ್ರತಿಯಲ್ಲಿದೆ.

    ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಕಂಪನಿಗೆ ಸೂಚಿಸಿದೆ ಮತ್ತು ಮಾರ್ಚ್ 17 ರಂದು ಹೆಚ್ಚಿನ ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡಿದೆ. (ಏಜೆನ್ಸೀಸ್​)

    ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ

    ಆಕೆಯ ವಿಡಿಯೋ ನಾನು ನೋಡಿಲ್ಲ, ಅದರ ಹಿಂದೆಯೂ ಷಡ್ಯಂತ್ರವಿದೆ: ರಮೇಶ್ ಜಾರಕಿಹೊಳಿ

    ಈಗ ನಟ-ನಟಿಯರು ಹೊರಬಂದಿದ್ದಾರೆ, ಮುಂದೆ ನಿರ್ಮಾಪಕ-ನಿರ್ದೇಶಕ ಹೊರಬರಲಿದ್ದಾರೆ: ರಮೇಶ್ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts