More

    ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

    ವಿಯೆನ್ನಾ: ಪ್ರೇಯಸಿಗೆ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಬೇಕೆಂದು ಆಸೆ ಪಡುವುದು ತಪ್ಪಲ್ಲ. ಆದರೆ, ಪ್ರೇಮ ನಿವೇದನೆ ಮಾಡುವಾಗ ನಾವು ಆಯ್ದುಕೊಳ್ಳುವ ದಾರಿಯ ಮೇಲೆ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಏನು ನಡೆಯಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.

    ಹೌದು, ರೊಮ್ಯಾಂಟಿಕ್​ ಪ್ರೇಮ ನಿವೇದನೆಯೊಂದು ದುರಂತದಲ್ಲಿ ಅಂತ್ಯವಾಗಿದೆ. ಹಾಗಂದ ಮಾತ್ರಕ್ಕೆ ಇಲ್ಲಿ ಯಾರು ಸಾವಿಗೀಡಾಗಿಲ್ಲ. ಪ್ರಿಯಕರ ಪ್ರೀತಿಗೆ ಯೆಸ್​ ಎಂದು ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಮಹಿಳೆಯೊಬ್ಬಳು ಸುಮಾರು 650 ಅಡಿ ಆಳದ ಪ್ರಪಾತಕ್ಕೆ ಬಿದ್ದ ಘಟನೆ ಆಸ್ಟ್ರೀಯಾದ ಕರಿಂಥಿಯಾ ನಗರದಲ್ಲಿ ನಡೆದಿರುವುದಾಗಿ ಬೈಲ್ಡ್​ (Bild) ನ್ಯೂಸ್​ ವೆಬ್​ಸೈಟ್​ ವರದಿ ಮಾಡಿದೆ.

    ಇದನ್ನೂ ಓದಿ: ಫ್ರೆಂಡ್​ಶಿಪ್​ ನಿರಾಕರಿಸಿದ ಮಹಿಳೆಗೆ ಕೆಟ್ಟ ಹೆಸರು ತರಲು ಖತರ್ನಾಕ್​ ಐಡಿಯಾ ಮಾಡಿದ ಕಿರಾತಕ!

    ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಬೇಕೆಂದುಕೊಂಡ 27 ವರ್ಷದ ವ್ಯಕ್ತಿ 32 ವರ್ಷದ ಪ್ರೇಯಸಿಯನ್ನು ಡಿ. 27ರಂದು ಆಸ್ಟ್ರೀಯಾದ ಫಲ್ಕರ್ಟ್​ ಬೆಟ್ಟದ ತುದಿಗೆ ಕರೆದೊಯ್ದಿದ್ದ. ಒಂದು ದಿನ ಮುಂಚಿತವಾಗಿಯೇ ಬೆಟ್ಟದ ಮೇಲೆ ಪ್ರೇಮಿಗಳು ಟ್ರೆಕ್ಕಿಂಗ್​ ಮಾಡಿದ್ದರು. ಬಳಿಕ ಬೆಟ್ಟದ ತುದಿಯಲ್ಲಿ ಮಂಡಿಯೂರಿ ಪ್ರೇಯಸಿಗೆ ತನ್ನ ಹೃದಯದ ಮಾತು ಹೇಳಿದ್ದಾನೆ. ಖುಷಿಯಿಂದಲೇ ಒಪ್ಪಿಕೊಂಡ ಯುವತಿ ತಕ್ಷಣವೇ ಆಯತಪ್ಪಿ 650 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾಳೆ. ಅದೃಷ್ಟವಶಾತ್​ ಹಿಮದ ಮೇಲೆ ಬಿದ್ದಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

    ಪ್ರೇಯಸಿ ಬೀಳುವುದನ್ನು ತಡೆಯಲು ಹಿಡಿದುಕೊಳ್ಳಲು ಯತ್ನಿಸಿದ ಪ್ರಿಯಕರನೂ ಸಹ ಕಾಲುಜಾರಿ ಗಾಳಿಯಲ್ಲಿ ಸುಮಾರು 50 ಅಡಿ ಆಳದಲ್ಲಿ ಬೀಳುವಾಗ ಬಂಡೆಯ ಅಂಚನ್ನು ಹಿಡಿದುಕೊಂಡು ಬಚಾವ್​ ಆಗಿದ್ದಾನೆ. ಮಹಿಳೆ ತುಂಬಾ ಆಳಕ್ಕೆ ಬಿದ್ದಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ದಾರಿಹೋಕರು ನೋಡಿ ತುರ್ತುಸೇವೆಗೆ ಕರೆ ಮಾಡಿ ರಕ್ಷಿಸಿದರೆ, ಆಕೆಯ ಪ್ರಿಯಕರನನ್ನು ಹೆಲಕಾಪ್ಟರ್​ ಮೂಲಕ ರಕ್ಷಿಸಲಾಯಿತು. ಇಬ್ಬರ ಅದೃಷ್ಟ ಚೆನ್ನಾಗಿತ್ತೆಂದು ಕಾಣಿಸುತ್ತದೆ. ಭಾರೀ ದುರಂತದಿಂದಲೇ ಬಚಾವ್​ ಆಗಿದ್ದಾರೆ.

    ಇದನ್ನೂ ಓದಿ: ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರೈತ: ಡೆತ್​ನೋಟ್​ನಲ್ಲಿದೆ ನೋವಿನ ಮಾತು!

    ಒಂದು ವೇಳೆ ಪ್ರಪಾತದ ಅಡಿಯಲ್ಲಿ ಹಿಮವಿರದಿದ್ದರೆ ಅಲ್ಲಿನ ಪರಿಸ್ಥಿತಿಯೇ ಬೇರೆ ಇರುತ್ತಿತ್ತು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಇನ್ನು ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕೆಲವರು ಬಿದ್ದು ಸಾವಿಗೀಡಾದ ಉದಾಹರಣೆಗಳು ಇವೆ. ಹೀಗಾಗಿ ಏನೇ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವುದು ಎಲ್ಲರ ಅಭಿಪ್ರಾಯ. (ಏಜೆನ್ಸೀಸ್​)

    ವೆಡ್ಡಿಂಗ್​ ಫೋಟೋಶೂಟ್ ವೇಳೆ ವರನ ಕೈಯಿಂದ ಜಾರಿದ ವಧು: ಇಲ್ಲಿದೆ ನೀವ್ಯಾರು ಊಹಿಸದ ರೋಚಕ ಟ್ವಿಸ್ಟ್​!​

    ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತೀಯ ಮೂಲದ ದಂಪತಿ

    800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ದಂಪತಿ ಸಾವಿನ ರಹಸ್ಯ ರಿವೀಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts