More

    ಮಂಗನ ಕಾಯಿಲೆಯಿಂದ ಮಹಿಳೆ ಸಾವು, ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

    ಕೊಪ್ಪ: ಮಂಗನ ಕಾಯಿಲೆಯಿಂದ ಮೃತಪಟ್ಟ ತಾಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನ್‌ಎಸ್ಟೇಟ್ ನಿವಾಸಿ, ಕೂಲಿ ಕಾರ್ಮಿಕ ಮಹಿಳೆ ಕೊಟ್ರಮ್ಮ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಬುಧವಾರ ತಾಲೂಕು ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ಬಡತನದಲ್ಲಿ ಜೀವನ ನಡೆಸುತ್ತಿದ್ದ ಕೊಟ್ರಮ್ಮ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಪತಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 15 ಲಕ್ಷ ರೂ.ಹಣವನ್ನು ಪರಿಹಾರದ ರೂಪದಲ್ಲಿ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
    ನುಗ್ಗಿ ಪಂಚಾಯಿತಿ ಸದಸ್ಯರಾದ ಎಚ್.ಆರ್.ಜಗದೀಶ್, ದೀಕ್ಷಿತ್ ಬಿ.ಎಚ್.ಜ್ಯೋತಿ, ಶಾಂತಿ ಗ್ರಾಮಾಸ್ಥರಾದ ದಾನವೇಲ್, ರಾಘವೇಂದ್ರ, ಗುರುವಣ್ಣ, ಬಸವರಾಜು, ಗುಲಾಬಿ, ರೇಖಾ, ರಾಘವೇಂದ್ರ, ಸುರೇಶ್,ಶಿವಾನಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts