More

    ವಿಧ್ವಂಸಕ ಕೃತ್ಯಗಳ ರೂವಾರಿ ‘ಲೇಡಿ ಡಾನ್’ಗೆ ಕರೊನಾ ಸೋಂಕು

    ನವದೆಹಲಿ: ಕರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ಗಣ್ಯಾತಿಗಣ್ಯರಿಂದ ಹಿಡಿದು ಕಟ್ಟಕಡೆಯ ಮನುಷ್ಯನ ದೇಹವನ್ನೂ ಈ ಸೋಂಕು ಆವರಿಸಿಬಿಡುತ್ತದೆ.

    ಇದೀಗ ಸೋಂಕು ಉಗ್ರರ ದೇಹದ ಮೇಲೆ ತನ್ನ ಪ್ರಭಾವ ಬೀರಲು ಶುರು ಮಾಡಿದೆ. ಹಿಂಸಾತ್ಮಕ ಚಟುವಟಿಕೆಗೆ ಉಗ್ರರಿಗೆ ಕುಮ್ಮಕ್ಕು ನೀಡುವ ಮೂಲಕ “ಲೇಡಿ ಡಾನ್​” ಎಂದು ಎನಿಸಿಕೊಂಡಿರುವ ಕಾಶ್ಮೀರದ ಮಹಿಳೆ ಹೀನಾ ಬಶೀರ್‌ ಬೇಗ್‌ ಕರೊನಾ ಸೋಂಕಿನಿಂದ ಬಳಲುತ್ತಿದ್ದಾಳೆ. ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪದಲ್ಲಿ ಈಕೆ ಕಳೆದ ಮಾರ್ಚ್‌ ನಲ್ಲಿ ಬಂಧಿತಳಾಗಿದ್ದಾಳೆ.

    ಇದನ್ನೂ ಓದಿ: ದಾಳಿಗೆ ಸಂಚು: 24 ಗಂಟೆಗಳಲ್ಲಿ 9 ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

    ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶದಲ್ಲಿರುವ ಹೀನಾಳನ್ನು ಕೂಡಲೇ ಲೋಕನಾಯಕ ಜಯಪ್ರಕಾಶ್‌ ಆಸ್ಪತ್ರೆಗೆ ದಾಖಲಿಸುವಂತೆ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಆದೇಶಿಸಿದ್ದಾರೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಈಕೆಯನ್ನು ತಿಹಾರ್ ಜೈಲಿನಲ್ಲಿ ಜುಲೈ 4ರವರೆಗೆ ಇರಿಸುವಂತೆ ಸೂಚಿಸಲಾಗಿದೆ.

    ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಹಾಗೂ ಐಸಿಸ್‌ ಸಿದ್ಧಾಂತವನ್ನು ಪ್ರಚುರಪಡಿಸುವುದೂ ಸೇರಿದಂತೆ ಹಲವಾರು ವಿಧ್ವಂಸಕ ಕೃತ್ಯಗಳ ಆರೋಪ ಈಕೆಯ ಮೇಲಿದೆ. ಶ್ರೀನಗರದ ನಿವಾಸಿಯಾದ ಹೀನಾ ಉಗ್ರ ಸಂಘಟನೆಯ ಜತೆ ನಿಕಟ ಸಂಪರ್ಕ ಹೊಂದಿರುವ ಜಹಾಂಜೇಬ್ ಪತ್ನಿ. ಮುಸ್ಲಿಂ ಯುವಕರನ್ನು ಪ್ರಚೋದಿಸುವ ಮೂಲಕ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿರುವ ಆರೋಪ ಈಕೆಯ ಮೇಲಿದೆ. ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದ ಉಗ್ರ ಸಂಘಟನೆ ಐಎಸ್‍ಕೆಪಿ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್-ಖೊರಾಸಮ್) ಜತೆಗೆ ಈಕೆ ಸೇರಿದಂತೆ ದಾಳಿಗೆ ಸಂಚು ರೂಪಿಸಿರುವ ಇತರ ಆರೋಪಿಗಳು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ತಿಳಿದುಬಂದಿತ್ತು.

    ಇದನ್ನೂ ಓದಿ: ಫೇಸ್​ಬುಕ್ ಪಾಸ್​ವರ್ಡ್ ಕೊಟ್ಟು ಕೆಟ್ಟ ಪ್ರಿಯಕರ: ಬ್ಲ್ಯಾಕ್​ಮೇಲ್​ ಶುರುಮಾಡಿದ್ಳು ಪ್ರೇಯಸಿ

    ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೆಲ ಉಗ್ರರನ್ನು ವಶಕ್ಕೆ ಪಡೆದಿತ್ತು. ಈ ವೇಳೆ ತಿಹಾರ್‌ ಜೈಲಿನ ಅಧಿಕಾರಿಗಳು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ಎಲ್ಲರ ವರದಿಯೂ ನೆಗೆಟಿವ್‌ ಎಂದು ಬಂದಿತ್ತು. ನಂತರ ಹೀನಾಗೆ ಕರೊನಾ ಲಕ್ಷಣ ಕಂಡುಬಂದ ಕಾರಣ, ಮತ್ತೊಮ್ಮೆ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಕಾನೂನು ಸಲಹೆ: ತಾಳಿ ಕಿತ್ತುಕೊಟ್ಟು ಹೋದ ಹೆಂಡತಿ ವಾಪಸ್‌ ಬರದಿದ್ದರೆ ಮರು ಮದುವೆಯಾಗಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts