More

    ಅಮೃತಹಳ್ಳಿ ಡಬ್ಬಲ್​ ಮರ್ಡರ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಭೀಕರ ಹತ್ಯೆ ಹಿಂದಿದೆಯಾ ಹೆಣ್ಣಿನ‌ ಕರಿ ನೆರಳು?

    ಬೆಂಗಳೂರು: ಅಮೃತಹಳ್ಳಿ ಡಬ್ಬಲ್​ ಮರ್ಡರ್​ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಈ ಜೋಡಿ ಕೊಲೆಯ ಹಿಂದೆ ಹೆಣ್ಣಿನ ಕರೆ ನೆರಳು ಇದೆಯಾ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಅದಕ್ಕೆ ಪೂರಕವಾದ ಸನ್ನಿವೇಶಗಳು ಸಹ ಬೆಳಕಿಗೆ ಬಂದಿದೆ.

    ದುಡ್ಡಿಗಲ್ಲ, ವ್ಯವಹಾರಕ್ಕೂ ಅಲ್ಲ, ಬದಲಾಗಿ ಕೊಲೆ ನಡೆದಿದ್ದು ಹುಡಗಿ ವಿಚಾರಕ್ಕಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಆರೋಪಿ ಫೆಲಿಕ್ಸ್​ ಬನ್ನೇರುಘಟ್ಟದಲ್ಲಿದ್ದ ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಕೆಲಸ ಮಾಡುತ್ತಿದ್ದರು. ಮಹಿಳಾ ಉದ್ಯೋಗಿಯ ಜೊತೆ ಫಣೀಂದ್ರ ಸಲುಗೆಯಿಂದಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: ತಣ್ಣಗಾಯಿತು ಆರಂಭದಲ್ಲಿದ್ದ ಜೋಶ್, ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ನೋಂದಣಿ

    ಹೆಂಡತಿ ಜತೆ ವಿಚ್ಛೇದನ ಪಡೆದು ಫಣೀಂದ್ರ ಒಂಟಿಯಾಗಿದ್ದ. ಇತ್ತ ಮಹಿಳಾ ಉದ್ಯೋಗಿ ಜತೆ ತುಂಬಾ ಸಲುಗೆ ಬೆಳೆಸಿದ್ದರಿಂದ ಇದೇ ವಿಚಾರಕ್ಕೆ ಫಣೀಂದ್ರ ಹಾಗೂ ಫೆಲಿಕ್ಸ್ ಮಧ್ಯೆ ಜಗಳ ನಡೆದಿತ್ತಂತೆ. ನಮ್ಮ ಹುಡುಗಿ ವಿಚಾರಕ್ಕೆ ಬಂದ್ರೆ ನಿನ್ನ ಮುಗಿಸಿಬಿಡ್ತೀನಿ ಅಂತ ಫೆಲಿಕ್ಸ್​ ಅವಾಜ್ ಹಾಕಿದ್ದ ಎಂಬ ಸಂಗತಿ ಬಯಲಾಗಿದೆ.

    ಸದ್ಯ ಅಮೃತಹಳ್ಳಿ ಪೊಲೀಸರು ಈ‌ ಆಯಮದಲ್ಲೂ ತನಿಖೆ ನಡೆಸಲು ಮುಂದಾಗಿದ್ದಾರೆ.

    ಬೇರೊಂದು ಆಯಾಮ

    ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಇಒ ವಿನು ಕುಮಾರ್ 2022ರಲ್ಲಿ ತಾವೇ ಒಂದು ಕಂಪನಿಯನ್ನು ಶುರು ಮಾಡಿದ್ದರು. ಈ ಕಂಪನಿ ಅಮೃತಹಳ್ಳಿ ಬಳಿಯ ಪಂಪ ಲೇಔಟ್​ನಲ್ಲಿದ್ದು ಕೇವಲ ಏಳು ಎಂಟು ತಿಂಗಳಲ್ಲಿ ಸಾಕಷ್ಟು ಲಾಭ ಕಂಡಿದ್ದರು. ಕೊಲೆ ಆರೋಪಿ ಜೋಕರ್ ಫೆಲಿಕ್ಸ್​ನನ್ನು, ಫಣೀಂದ್ರ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

    ಏರೋನಿಕ್ಸ್​ ಕಂಪನಿಯಿಂದ ಹೊರ ಬಂದ ಫೆಲಿಕ್ಸ್ ತನ್ನದೇ ಸ್ವಂತ ಕಂಪನಿ ಆರಂಭಿಸಿದ್ದ. ತನ್ನ ಉದ್ಯಮಕ್ಕೆ ಹಳೇ ಕಂಪನಿ ಎದುರಾಳಿ ಆಗಿದ್ದರಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಸಂಚು ಹೂಡಿದ್ದ ಫೆಲಿಕ್ಸ್, ನಿನ್ನೆ ಸಂಜೆ 4 ಗಂಟೆಗೆ ಚಾಕು ಮತ್ತು ತಲ್ವಾರ್​ನಿಂದ ಫಣೀಂದ್ರ ಮತ್ತು ವಿನು ಕುಮಾರ್ ಮೇಲೆ ದಾಳಿ ಮಾಡಿ, ಕೊಲೆಗೈದಿದ್ದ. ಒಟ್ಟು ಮೂವರು ಜತೆಯಾಗಿ ಈ ಕೃತ್ಯವೆಸಗಿದ್ದು, ಒಂದು ಕೊಲೆ ತಳಮಹಡಿಯಲ್ಲಿ ಇನ್ನೊಂದು ಕೊಲೆ ಮೂರನೇ ಮಹಡಿಯಲ್ಲಿ ನಡೆದಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಟಾರ್ಗೆಟ್ ಕಿಲ್ಲಿಂಗ್, ಸರ್ಕಾರದ ನಡೆಯೇ ಅನುಮಾನಾಸ್ಪದ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ

    ಪ್ರಕರಣದ ಬಳಿಕ ಆರೋಪಿಗಳು ಕಾಂಪೌಂಡ್ ಹಾರಿ ಪರಾರಿಯಾಗಿದ್ದರು. ಇದೀಗ ಬಂಧಿಸಲಾಗಿದೆ. ಆರೋಪಿ ಫೆಲಿಕ್ಸ್ ಜೋಕರ್ ಫೆಲಿಕ್ಸ್ ಎಂದೂ ಕರೆಸಿಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

    ಡಬಲ್ ಮರ್ಡರ್​ ಮಾಡಿ ಸುದ್ದಿಯನ್ನೇ ಸ್ಟೇಟಸ್​ನಲ್ಲಿ ಶೇರ್​ ಮಾಡಿದ ಜೋಕರ್ ಫೆಲಿಕ್ಸ್!

    ಡಬಲ್ ಮರ್ಡರ್ ಬೆನ್ನಿಗೇ ನಗರದಲ್ಲಿ ಮತ್ತೊಬ್ಬ ಉದ್ಯಮಿಯ ಬರ್ಬರ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts