More

    ಹಾಡುತ್ತಲೇ ಕುಸಿದುಬಿದ್ದ ಮಹಿಳೆ: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​!

    ಬೀಜಿಂಗ್​: ಸಂಗೀತವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಹಾಡುವುದು, ಕೇಳುವುದು ಎಂದು ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಹೆಚ್ಚಿನ ಧ್ವನಿಯಲ್ಲಿ ಹಾಡು ಕೇಳುವಾಗ ಎಚ್ಚರವಹಿಸುವುದು ಸೂಕ್ತ. ಅದರಲ್ಲೂ ಹೆಡ್​ಫೋನ್​ಗಳಲ್ಲಿ ನೆಚ್ಚಿನ ಗೀತೆಯನ್ನು ತುಂಬಾ ಸೌಂಡ್​ ಹಾಕಿಕೊಂಡು ಕೇಳುವುದು ತುಂಬಾ ಅಪಾಯಕಾರಿ. ಇಷ್ಟು ಹೇಳಿದರೂ ಇದೇ ಮುಂದುವರಿಸುತ್ತೇನೆಂದರೆ, ಅದಕ್ಕೂ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಬಿಡಿ.

    ಹೌದು, ಸಂಗೀತ ಪ್ರಿಯರನ್ನು ಬೆಚ್ಚಿ ಬೀಳಿಸುವ ವರದಿ ಇದಾಗಿದ್ದು, ಫ್ಯಾಮಿಲಿ ಪಾರ್ಟಿಯಲ್ಲಿ ಹಾಡು ಹಾಡುತ್ತಿದ್ದ ಚೀನಾದ ಗಾಯಕಿಯೊಬ್ಬಳು ತುಂಬಾ ಏರು ಧ್ವನಿಯಲ್ಲಿ ಹಾಡಲು ಹೋಗಿ ಮೆದುಳಿನ ರಕ್ತನಾಳ ಸ್ಪೋಟಗೊಂಡ ಆಸ್ಪತ್ರೆಗೆ ಸೇರಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಇದನ್ನೂ ಓದಿ: ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?

    ಈಶಾನ್ಯ ಚೀನಾದ 55 ವರ್ಷದ ಝಂಗ್​ ಎಂಬ ಮಹಿಳೆ ಫ್ಯಾಮಿಲಿ ಪಾರ್ಟಿಯಲ್ಲಿ ಏರು ಧ್ವನಿಯಲ್ಲಿ ಹಾಡಲು ಶುರು ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆಯ ತಲೆಯಲ್ಲಿ ನೋವು ಶುರುವಾಯಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಹಾಡು ಹಾಡುವಾಗ ಆಕೆಯ ಮೆದುಳಿನ ಅಪಧಮನಿಗಳಲ್ಲಿನ ಒಂದು ಉಬ್ಬು ಛಿದ್ರಗೊಂಡಿದೆ ಎಂದು ತಿಳಿಸಿದ್ದಾರೆ.

    ಇದು ಮೆದುಳಿನ ರಕ್ತನಾಳದಿಂದ ಉಂಟಾಗುವ ಸ್ಥಿತಿಯಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಶೇ. 30 ರಷ್ಟು ಸಾಯುವ ಸಾಧ್ಯತೆ ಇದೆ. ಸುಮಾರು 2 ಗಂಟೆಗಳ ಸುದೀರ್ಘ ಆಪರೇಷನ್​ ಮೂಲಕ ಝಂಗ್​ರನ್ನು ಉಳಿಸಲಾಗಿದೆ.

    ಇದನ್ನೂ ಓದಿ: VIDEO| ಡೇಂಜರಸ್ ಶಾರ್ಕ್ ಬಾಯಿಗೆ ಕೈಹಾಕಿ ಕ್ಯಾಮರಾಗೆ ಪೋಸ್​ ನೀಡಿದ ವ್ಯಕ್ತಿ: ಮುಂದೇನಾಯ್ತು?

    ಘಟನೆ ನಡೆದಿದ್ದು ಯಾವಾಗ?
    ಜೂನ್​ 5ರಂದು ಈಶಾನ್ಯ ಚೀನಾದ ಲಿಯಾನಿಂಗ್​ ಪ್ರಾಂತ್ಯದ ದಲಿಯಾನ್​ ನಗರದಲ್ಲಿ ಆಯೋಜಿಸಲಾಗಿದ್ದ ಫ್ಯಾಮಿಲಿ ಪಾರ್ಟಿಯಲ್ಲಿ ಝಂಗ್​ ಭಾಗವಹಿಸಿದ್ದರು. ಸತತವಾಗಿ ಎರಡು ಹಾಡುಗಳನ್ನು ವಿರಾಮವಿಲ್ಲದೇ ಹಾಡಿದ್ದಕ್ಕೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು “ಕಿಂಗ್‌ಹೈ-ಟಿಬೆಟ್ ಪ್ರಸ್ಥಭೂಮಿ”ಯ ಚೀನಾದ ಕ್ಲಾಸಿಕ್ ಜಾನಪದ ಹಾಡನ್ನು ಹೈನೋಟ್​ನಲ್ಲಿ ಹಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಹಾಡುತ್ತಲೇ ಕುಸಿದುಬಿದ್ದ ಮಹಿಳೆ: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​!

    ಹಾಡುತ್ತಲೇ ದಿಢೀರನೆ ಕುಸಿದುಬಿದ್ದ ಅವರನ್ನು ತಕ್ಷಣ ದಲಿಯಾನ್​ ಕೇಂದ್ರ ಆಸ್ಪತ್ರೆಗೆ ಕರೆತರಲಾಗಿತ್ತು. ಸಿಟಿ ಸ್ಕ್ಯಾನ್​ ಮಾಡಿಸಿದ ಬಳಿಕ 2.5 ಮಿಲಿಮೀಟರ್​ ಮೆದುಳು ರಕ್ತನಾಳವು ಛಿದ್ರಗೊಂಡಿರುವುದು ಪತ್ತೆಯಾಗಿತ್ತು. ರಕ್ತನಾಳದಲ್ಲಿನ ದೌರ್ಬಲ್ಯದಿಂದ ಉಂಟಾಗುವ ರಕ್ತನಾಳದ ಹಿಗ್ಗುವಿಕೆಯು ಸಹ ಒಂದು ರಕ್ತನಾಳವಾಗಿರುತ್ತದೆ. ಸಾಮಾನ್ಯವಾಗಿ ಅದು ಕವಲೊಡೆಯುತ್ತದೆ. ಝಂಗ್​ ಅವರಿಗೆ ಮೊದಲೇ ರಕ್ತದೊತ್ತಡ ಮತ್ತು ಡಯಾಬಿಟೀಸ್​ ಇದ್ದಿದ್ದರಿಂದ ರಕ್ತನಾಳ ಬೆಳೆದಿತ್ತು. ಏರು ಧ್ವನಿಯಲ್ಲಿ ಹಾಡುವಾಗ ರಕ್ತನಾಳ ಹಿಗ್ಗಿ ಸ್ಪೋಟಗೊಂಡಿದೆ. ಈ ರೀತಿ ಆದಾಗ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಸಾಯುವ ಸಾಧ್ಯತೆ 30 ರಷ್ಟಿದೆ. ಸದ್ಯ ಆಪರೇಷನ್​ನಿಂದ ಬದುಕುಳಿದಿದ್ದು, ಝಂಗ್​ ಆಸ್ಪತ್ರೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: 4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

    VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ ತೆರೆಯಲು ಮುಂದಾದ ಯುವತಿಯರಿಗೆ ಕಾದಿತ್ತು ಭಾರಿ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts